ರಿಯಾದ್: ಸೌದಿ ಜೈಲಿನಲ್ಲಿರುವ ಅನೇಕ ಕೈದಿಗಳನ್ನು ರಮಝಾನ್‌ನಲ್ಲಿ ಬಿಡುಗಡೆ ಗೊಳಿಸುವುದಾಗಿ ತಿಳಿದು ಬಂದಿದೆ.ವಿದೇಶಿಯರು ಸೇರಿದಂತೆ ಈ ಪ್ರಯೋಜನವನ್ನು ಪಡೆಯಲಿದ್ದಾರೆ.
ಪವಿತ್ರ ರಂಜಾನ್‌ನಲ್ಲಿ ಸಾರ್ವಜನಿಕ ಕ್ಷಮಾಪಣೆ ಲಭಿಸಲಿರುವವರ ಪಟ್ಟಿಯನ್ನು ಸಿದ್ಧಪಡಿಸಲು ಆರಂಬಿಸಿರುವುದಾಗಿ ಪ್ರಮುಖ ಅರಬ್ ಪತ್ರಿಕೆ ಉಲ್ಲೇಖಿಸಿದೆ.
ಗವರ್ನರೇಟ್ ಮತ್ತು ಕಾನೂನು ಸಚಿವಾಲಯಗಳಂತಹ ಇಲಾಖೆಗಳಿಂದ ಈ ಪಟ್ಟಿಯನ್ನು ತಯಾರಿಸಲಾಗುತ್ತದೆ. ಜೈಲಿನಲ್ಲಿ ಬಂಧಿಸಿರುವ ಅರ್ಹ ಕೈದಿಗಳನ್ನು ಬಿಡುಗಡೆ ಮಾಡುತ್ತಾರೆ.
ಚಡಿಯೇಟಿಗೆ ವಿಧಿಸಲ್ಪಟ್ಟವರು, ಮಾಟ ಮಂತ್ರ, ಮಾನವ ಕಳ್ಳಸಾಗಣೆ, ಮಾಹಿತಿಯ ದುರ್ಬಳಕೆ, ರಹಸ್ಯ ಮಾಹಿತಿ ಸೋರಿಕೆ, ಮತ್ತು ಹಣಕಾಸಿನ ವಂಚನೆ ಶಿಕ್ಷೆಗೆ ಒಳಗಾದವರಿಗೆ ಸಾರ್ವಜನಿಕ ಕ್ಷಮಾಧಾನ ಲಭಿಸುವುದಿಲ್ಲ.
ಅರ್ಧದಷ್ಟು ಶಿಕ್ಷೆಯನ್ನು ಅನುಭವಿಸಿದವರು ಈ ಪ್ರಯೋಜನವನ್ನು ಬಳಸಿಕೊಳ್ಳುವರು ಎಂದು ನಿರೀಕ್ಷಿಸಲಾಗಿದೆ.
ನಷ್ಟ ಪರಿಹಾರವನ್ನು ನೀಡಲಾಗದೆ ಜೈಲಿನಲ್ಲಿರುವ ಸೌದಿಗಳ ಆರ್ಥಿಕ ಹೊರೆಯನ್ನು ಸರಕಾರವು ಭರಿಸಿ ಶೀಘ್ರದಲ್ಲೇ ಅವರನ್ನು ಬಂಧಮುಕ್ತಗೊಳಿಸಲಾಗುವುದು.
ಜೈಲಲ್ಲಿರುವ ವಲಸಿಗರ 5 ಲಕ್ಷಕ್ಕಿಂತ ಕಡಿಮೆ ವ್ಯಾಪ್ತಿಯಡಿಯಲ್ಲಿ ಬರುವ ಬಾಧ್ಯತೆಯನ್ನು ಮಾತ್ರ ಸೌದಿ ಸರ್ಕಾರ ಜವಾಬ್ದಾರಿ ವಹಿಸಿಕೊಳ್ಳುತ್ತದೆ.
ಐದು ಲಕ್ಷಕ್ಕೂ ಹೆಚ್ಚಿನ ಬಾಧ್ಯತೆಗಳನ್ನು ಹೊಂದಿರುವ ವಿದೇಶಿಯರಿಗೆ ಮತ್ತು ಪಾವತಿಸಲು ಯಾವುದೇ ಆರ್ಥಿಕ ಸಾಮರ್ಥ್ಯವಿಲ್ಲದವರ ಪ್ರಕರಣವನ್ನು ನ್ಯಾಯಾಲಯವು ಪರಿಗಣಿಸುತ್ತದೆ.
ನಷ್ಟ ಪರಿಹಾರಕ್ಕೆ ಬದಲಾಗಿ ಬಂಧನ ಶಿಕ್ಷೆ ನೀಡಿ ನಂತರ ಅವರನ್ನು ಗಡಿಪಾರು ಮಾಡಲಾಗುವುದು ಎಂದು ವರದಿಗಳು ಸೂಚಿಸುತ್ತವೆ.