janadhvani

Kannada Online News Paper

ವೀಸಾ ಅರ್ಜಿ ಪ್ರಕ್ರಿಯೆಗಳು ‘ಅಮರ್ ಸೆಂಟರ್’ ಮೂಲಕ ಲಭ್ಯ- ದುಬೈ ಇಮಿಗ್ರೇಷನ್

ದುಬೈ: ಸಣ್ಣ ಕಂಪನಿಗಳ ವಿಸಾ ಅರ್ಜಿ ಪ್ರಕ್ರಿಯೆಗೆ ಅರ್ಜಿಗಳನ್ನು ಅಮರ್ ಸೆಂಟರ್ ಮೂಲಕ ಪೂರ್ಣಗೊಳಿಸಬಹುದು ಎಂದು ದುಬೈ ಎಮಿಗ್ರೇಷನ್ ಘೋಷಿಸಿದೆ.

ಈ ಪ್ರಕಾರ, 100 ಕ್ಕಿಂತಲೂ ಕಡಿಮೆ ನೌಕರರನ್ನು ಹೊಂದಿರುವ ಕಂಪನಿಗಳು ಆನ್ ಲೈನ್ ​​ನೋಂದಣಿ ಇಲ್ಲದೆ ಅಮರ್ ಸೆಂಟರ್ ಮೂಲಕ ತಮ್ಮ ವೀಸಾ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.ವೀಸಾ ವ್ಯವಹಾರಗಳಿಗೆ 23 ಅಮರ್ ಕೇಂದ್ರಗಳನ್ನು ತೆರೆಯಲಾಗಿದೆ.ಸಣ್ಣ ವ್ಯಾಪಾರ ಉದ್ಯಮಗಳು ಇಲಾಖೆಯ ವಿದ್ಯುನ್ಮಾನ ವ್ಯವಸ್ಥೆಯಲ್ಲಿ ನೋಂದಾಯಿಸದೆ ಅಮರ್ ಕೇಂದ್ರಗಳಲ್ಲಿ ವೀಸಾ ಅರ್ಜಿಗಳನ್ನು ಸಲ್ಲಿಸಬಹುದು.

ಎಲ್ಲಾ ಅಮರ್ ಕೇಂದ್ರಗಳು 100 ಕ್ಕಿಂತ ಕಡಿಮೆ ಸಿಬ್ಬಂದಿ ಹೊಂದಿರುವ ಕಂಪನಿಗಳಿಂದ ಅರ್ಜಿಗಳನ್ನು ಸ್ವೀಕರಿಸುತ್ತವೆ.ಈ ಮೂಲಕ 2,000 ದಿಂದ 4,000 ದಿರ್ಹಮ್ ವರೆಗೆ ಖರ್ಚು ಕಡಿಮೆ ಮಾಡಬಹುದು.ಇದು ದುಬೈನಲ್ಲಿ ಹೂಡಿಕೆದಾರರನ್ನು ಪ್ರೋತ್ಸಾಹಿಸುವ ಪ್ರಯತ್ನವಾಗಿದೆ ಎಂದು ಪರಿಸರ ಮತ್ತು ವಲಸೆ ಖಾತೆಯ ಅಧಿಕಾರಿ ಮೇಜರ್ ಜನರಲ್ ಮುಹಮ್ಮದ್ ಅಹ್ಮದ್ ಅಲ್ ಮರ್ರಿ ತಿಳಿಸಿದ್ದಾರೆ.

ಹಿಂದಿನ, ವೀಸಾ ಅರ್ಜಿ ಪ್ರಕ್ರಿಯೆಗಳು ಟೈಪ್ಪಿಂಗ್ ಕೇಂದ್ರದ ಮೂಲಕ ಮಾಡಲಾಗುತ್ತಿತ್ತು. ಆದರೆ, ಈಗ ಇಲಾಖೆಯು ನೂರಾರು ಟೈಪ್ಪಿಂಗ್ ಕೇಂದ್ರಗಳಿಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿದೆ.ಜೊತೆಗೆ, ಇಲಾಖೆಯು ಹೆಚ್ಚುವರಿ ಸೇವೆಗಳಿಗೆ ಅಮರ್ ಕೇಂದ್ರಗಳನ್ನು ಲಭ್ಯಗೊಳಿಸಿದೆ.

ಎಲ್ಲಾ ವೀಸಾ ಸೇವೆ-ಅಪ್ಲಿಕೇಶನ್ ಪ್ರಕ್ರಿಯೆಗಳನ್ನು ಅಮರ್ ಮೂಲಕ ಪೂರ್ಣಗೊಳಿಸಬಹುದು. ಈ ವರ್ಷದ ಕೊನೆಯಲ್ಲಿ, ಇಲಾಖೆ 70 ಕೇಂದ್ರಗಳನ್ನು ತೆರೆಯುತ್ತದೆ.ಇದು ಇಮಿಗ್ರೇಷನ್ ಕಚೇರಿಯನ್ನು ಭೇಟಿ ಮಾಡದೆ ಎಲ್ಲಾ ವೀಸಾ ರೆಸಿಡೆನ್ಸಿ ವ್ಯವಹಾರಗಳನ್ನು ಪೂರ್ಣಗೊಳಿಸಲು ಗ್ರಾಹಕರಿಗೆ ಸೌಕರ್ಯವಾಗಲಿದೆ. ಆದ್ದರಿಂದ ಕ್ರಮಗಳು ಇನ್ನಷ್ಟು ಸರಳ ಮತ್ತು ಹೆಚ್ಚು ಪರಿಣಾಮಕಾರಿಯಾಗಲಿದೆ.23 ಅಮರ್ ಕೇಂದ್ರಗಳು ಎಲ್ಲಾ ಸೌಲಭ್ಯಗಳನ್ನು ಹೊಂದಿವೆ.

ಈ ವರ್ಷದ ಮೊದಲ ಮೂರು ತಿಂಗಳಲ್ಲಿ, ಅಮರ್ ಸೆಂಟರ್ ಮೂಲಕ 41,4633 ವೀಸಾ ವಹಿವಾಟುಗಳನ್ನು ನಡೆಸಲಾಗಿದೆ.

ಕೇಂದ್ರದಲ್ಲಿ ವೀಸಾ ಅರ್ಜಿ ಪ್ರಕ್ರಿಯೆಯ ಹೊರತಾಗಿ, ಎಮಿರೇಟ್ಸ್ ಐಡೆಂಟಿಟಿ ಅಥಾರಿಟಿ, ದುಬೈ ಮುನಿಸಿಪಲ್ ಕಾರ್ಪೊರೇಶನ್ ಮತ್ತು ದುಬೈ ಹೆಲ್ತ್ ಅಥಾರಿಟಿ ಮುಂತಾದ ಸರ್ಕಾರಿ ಸಂಸ್ಥೆಗಳ ಸೇವೆಗಳನ್ನು ಲಭ್ಯಗೊಳಿಸುತ್ತದೆ.

ಸಾರ್ವಜನಿಕರು ಹೆಚ್ಚಿನ ವಿಚಾರಣೆಗಾಗಿ, ಟೋಲ್ ಫ್ರೀ ಸಂಖ್ಯೆ 800511 ಕ್ಕೆ ಕರೆ ಮಾಡಬಹುದು. ಅಥವಾ www.amer.ae/contact ಲಿಂಕ್ ಅನ್ನು ಸಂಪರ್ಕಿಸಬಹುದು.

error: Content is protected !! Not allowed copy content from janadhvani.com