janadhvani

Kannada Online News Paper

ತಮ್ಮ ದೇಶ ಫಲಸ್ತೀನಿ ಜನರೊಂದಿಗೆ- ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್

ಸೌದಿ ಅರೇಬಿಯಾ ಇಸ್ರೇಲ್‌ಗೆ ಬೆಂಬಲ ಘೋಷಿಸಿದೆ ಎಂಬ ಸುಳ್ಳು ಸುದ್ದಿಯನ್ನು ಬಿತ್ತರಿಸಿದ ಮಾಧ್ಯಮಗಳು ಮುಖಭಂಗಕ್ಕೀಡಾಗಿದೆ.

ರಿಯಾದ್: ಇಸ್ರೇಲ್-ಹಮಾಸ್ ಕದನ ತೀವ್ರಗೊಂಡಿದ್ದು, ಪ್ರದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಅರಬ್ ದೇಶಗಳು ತೀವ್ರ ಶ್ರಮ ಮುಂದುವರಿಸಿದೆ.

ಇಸ್ರೇಲ್ ಮೇಲೆ ಹಮಾಸ್ ಹೋರಾಟಗಾರರು ನಡೆಸಿರುವ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್, ತಮ್ಮ ದೇಶವು ಫೆಲೆಸ್ತೀನಿ ಜನರೊಂದಿಗೆ ನಿಲ್ಲುವುದಾಗಿ ಹೇಳಿದ್ದಾರೆ. ಅದೇ ಸಮಯ ಈ ಸಂಘರ್ಷ ಇನ್ನಷ್ಟು ವ್ಯಾಪಿಸದಂತೆ ತಾವು ಶ್ರಮಿಸುತ್ತಿರುವುದಾಗಿ ಅವರು ಫೆಲೆಸ್ತೀನಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರಿಗೆ ಹೇಳಿದ್ದಾಗಿ ತಿಳಿಸಿದ್ದಾರೆ.

ಉತ್ತಮ ಜೀವನ ನಡೆಸುವ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಹಾಗೂ ಶಾಂತಿಗಾಗಿ ಫೆಲೆಸ್ತೀನಿ ಜನರ ಕಾನೂನುಬದ್ಧ ಹಕ್ಕುಗಳಿಗಾಗಿ ಅವರ ಜೊತೆಗೆ ಸೌದಿ ಅರೇಬಿಯಾ ನಿಲ್ಲುವುದಾಗಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದರು. ಇದರೊಂದಿಗೆ, ಸೌದಿ ಅರೇಬಿಯಾ ಇಸ್ರೇಲ್‌ಗೆ ಬೆಂಬಲ ಘೋಷಿಸಿದೆ ಎಂಬ ಸುಳ್ಳು ಸುದ್ದಿಯನ್ನು ಬಿತ್ತರಿಸಿದ ಮಾಧ್ಯಮಗಳು ಮುಖಭಂಗಕ್ಕೀಡಾಗಿದೆ.

ಫೆಲೆಸ್ತೀನಿ ವಿಚಾರವು ಸೌದಿ ಅರೇಬಿಯಾಗೆ ಬಹಳ ಮುಖ್ಯವಾಗಿದೆ ಎಂದು ಕಳೆದ ತಿಂಗಳು ಸಂದರ್ಶನವೊಂದರಲ್ಲಿ ಮಾತನಾಡಿದ ಮುಹಮ್ಮದ್ ಬಿನ್ ಸಲ್ಮಾನ್,ಹೇಳಿದ್ದರು. “ಆ ಸಮಸ್ಯೆ ಪರಿಹರಿಸಬೇಕಿದೆ, ಫೆಲೆಸ್ತೀನಿ ಜನರ ಜೀವನ ಸುಲಭಗೊಳಿಸಬೇಕಿದೆ,” ಎಂದು ಅವರು ಹೇಳಿದ್ದರು.

error: Content is protected !! Not allowed copy content from janadhvani.com