ಕರ್ನಾಟಕ ಕಲ್ಚರಲ್ ಫೌಂಡೇಶನ್ KCF “ಜಗತ್ತಿಗೆ ಕರುಣೆಯ ಪ್ರವಾದಿ (ﷺ)” ಎಂಬ ಪ್ರಮೇಯದಲ್ಲಿ ಸೌದಿ ಅರೇಬಿಯಾದಾದ್ಯಂತ ನಡೆಸುತ್ತಿರುವ ರಬೀಅ್-23 ಕಾರ್ಯ ಕ್ರಮವು ಕೆ.ಸಿ.ಎಫ್ ಅಲ್ ಖಸೀಂ ಝೋನಿನ ಹಾಯಿಲ್ ಸೆಕ್ಟರ್ ನಲ್ಲಿ ಅಕ್ಟೋಬರ್ 6 ಶುಕ್ರವಾರದಂದು ಜುಮಾ ನಮಾಝಿನ ಬಳಿಕ ಹಾಯಿಲ್ ಇಸ್ತಿರಾದಲ್ಲಿ ಸಡಗರದಿಂದ ಆಯೋಜಿಸಲಾಯಿತು.
ಪ್ರವಾದಿ ಪ್ರಕೀರ್ತನೆಗಳ ನಂತರ ನಡೆದ ಸಭಾ ಕಾರ್ಯಕ್ರಮವು ಸೆಕ್ಟರ್ ಅಧ್ಯಕ್ಷರಾದ ಶಂಶೀರ್ ಸುಳ್ಯ ರವರ ಅಧ್ಯಕ್ಷತೆಯಲ್ಲಿ ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಉದ್ಘಾಟಿಸಿದರು.
ಐಸಿಎಫ್ ನೇತಾರ ಬಶೀರ್ ಸಅದಿ ಕಿನ್ನಿಗಾರ್ ಆಶಂಸಾ ಮಾತುಗಳನ್ನಾಡಿದರು.
ಕೆ.ಸಿ.ಎಫ್ ನುಗ್ರ ಯುನಿಟ್ ಅಧ್ಯಕ್ಷ GK ಇಬ್ರಾಹಿಂ ಅಮ್ಜದಿ ಮದುಹುರ್ರಸೂಲ್ ಪ್ರಬಾಷಣ ನಡೆಸಿದರು.
ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಯಾಕೂಬ್ ಸಖಾಫಿ, ಖಸೀಂ ಝೋನ್ ಅಧ್ಯಕ್ಷರಾದ ಮುಹಿಯುದ್ದೀನ್ ಸಅದಿ, ಕಾರ್ಯದರ್ಶಿ ಬಶೀರ್ ಕನ್ಯಾನ , 1CF, RSC,MARKAZ,MAHDIN ನೇತಾರರು ಭಾಗವಹಿಸಿದರು.
KCF ಅಂತರ್ರಾಷ್ಟ್ರೀಯ ಸಮಿತಿ ನೀಡಿದ ಯುನಿಟ್ ರಿಜಿಸ್ಟ್ರೇಶನ್ ಸರ್ಟ್ ಫಿಕೆಟ್ ಯುನಿಟ್ ಗಳಿಗೆ ವಿತರಿಸಲಾಯಿತು.
ವಿವಿಧ ಸ್ಪರ್ದೆಗಳಲ್ಲಿವಿಜೇತರಾದ ಸ್ವರ್ದಾರ್ಥಿಗಳಿಗೆ ಬಹುಮಾನ ಸಮಾರೋಪ ದುವಾದೊಂದಿಗೆ ಕೊನೆಗೊಳಿಸಲಾಯಿತು.
ಶಾಫಿ ಮಿಸ್ಬಾಹಿ ಸ್ವಾಗತಿಸಿ ಅಯ್ಯೂಬ್ ಅನ್ಸಾರಿ ವಂದಿಸಿದರು.