✍️ಅಬ್ಬಾಸ್ ಮದನಿ ಕೊಡಂಗಾಯಿ
ಕೆಸಿಎಫ್ ಕಾರ್ಯಕರ್ತರ ಕಾರ್ಯಾಚರಣೆಯನ್ನು ಕೇಳಿ ಮತ್ತು ಓದಿ ತಿಳಿದ ಹಲವು ಅನುಭವ ಮಾತ್ರ ಈ ಮೊದಲು ನನಗಿತ್ತು. ಆದರೆ ನೇರವಾಗಿ ಅವರೊಂದಿಗೆ ಮೊದಲನೇ ಬಾರಿಗೆ ಸಂಪರ್ಕದಲ್ಲಿದ್ದೆ. ನಾನು ಮನದಟ್ಟು ಮಾಡಿದಕ್ಕಿಂತಲೂ ಎಷ್ಟೋ ಪಟ್ಟು ಅವರ ಕಾರ್ಯವೈಖರಿಯ ಬಗ್ಗೆ ಆ ಮೂಲಕ ನನಗೆ ತಿಳಿಯಲು ಸಾಧ್ಯವಾಯಿತು.
ನಾನು ವಿಷಯಕ್ಕೆ ಬರುತ್ತೇನೆ,
ಕಳೆದ ತಿಂಗಳು ನನ್ನ ಮಾವ ಅಂದರೆ ಪತ್ನಿಯ ತಂದೆ ಅಬ್ದುಲ್ ಖಾದರ್ ಪಾಣೆಲರವರು ಪವಿತ್ರ ಉಮ್ರಾ ಯಾತ್ರೆ ಹೊರಟಿದ್ದರು. ಉಮ್ರಾದ ಕರ್ಮಗಳನ್ನೆಲ್ಲಾ ನಿರ್ವಹಿಸಿ, ಯಾತ್ರಾ ಹೊರಡುವುದರ ಮಧ್ಯೆ ಅನಾರೋಗ್ಯ ನಿಮಿತ್ತ ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಬೇಕಾದ ಸ್ಥಿತಿ ಉಂಟಾಯಿತು. ಖಾಸಗಿ ಗ್ರೂಪ್ ನಲ್ಲಿ ತೆರಳಿದ್ದರಿಂದ ಅನಿವಾರ್ಯವಾಗಿ ಟೀಮ್ ಅಮೀರ್ ಮತ್ತು ಜೊತೆಯಲ್ಲಿ ಹೋದವರು ಊರಿಗೆ ಮರಳಿದ್ದರು.ಆ ಸಂದರ್ಭದಲ್ಲೆಲ್ಲ ನನ್ನ ಮಾವನರಿಗೆ ಆರೈಕೆ ಮಾಡಿದ್ದು ಆಲ್ಲಿನ ಕೆಸಿಫ್ ಕಾರ್ಯಕರ್ತರಾಗಿದ್ದರು. ತಂದೆಯೊಬ್ಬರನ್ನು ಮಕ್ಕಳು ಯಾವ ರೀತಿಯಲ್ಲಿ ಆರೈಕೆ ಮಾಡುತ್ತಾರೋ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಅವರನ್ನು ಶುಶ್ರೂಷೆ ಮಾಡಿದ್ದು ಸುಳ್ಯ ನಿವಾಸಿ ತಾಜುದ್ದೀನ್ ಮತ್ತು ಅಬ್ದುಲ್ ಜಬ್ಬಾರ್ ಉಪ್ಪಿನಂಗಡಿ ಅವರಾಗಿದ್ದರು.
ಕೆಸಿಎಫ್ ಸಾಂತ್ವನ ವಿಭಾಗದಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುವ ಈ ಇಬ್ಬರು ಯುವಕರು ಮತ್ತು ಅಬ್ದುಲ್ ರಝಾಕ್ ಉಳ್ಳಾಲರವರ ಸಾಂತ್ವನ ಸೇವೆಗಳಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಸರಿ.
ಆಸ್ಪತ್ರೆಯಲ್ಲಿರುವಾಗಲೂ ಡಿಸ್ಚಾರ್ಜ್ ಆದ ಬಳಿಕವೂ ಒಳ್ಳೆಯ ರೀತಿಯಲ್ಲಿ ಆರೈಕೆ ಮಾಡಿ ನಮ್ಮ ಕುಟುಂಬವು ನಿಟ್ಟುಸಿರು ಬಿಟ್ಟು ಸಂತೋಷಪಡಿಸಲು ಅವರು ವಹಿಸಿದ ತ್ಯಾಗವು ಎಲ್ಲರಿಗೂ ಮಾದರಿಯಾಗಿದೆ. ಖಂಡಿತವಾಗಿಯೂ ಅವರಿಗೆ ಶುಕ್ರ್ ಸಲ್ಲಿಸಲು ನನ್ನಿಂದ ಸಾಧ್ಯವಿಲ್ಲ. ಆದರೂ ಯಾವಾಗಲೂ ದುಆದಲ್ಲಿ ಅವರನ್ನು ಒಳಪಡಿಸಲು ಖಂಡಿತ ನನಗೆ ಸಾಧ್ಯವಿದೆ.
ಇದೀಗ ನನ್ನ ಮಾವನವರು ಗುಣಮುಖರಾಗಿ ಮನೆಗೆ ಬಂದು ತಲುಪಿದ್ದಾರೆ. ಆ ಮೂಲಕ ಅವರ ಕುಟುಂಬಕ್ಕೆ ಆಶ್ವಾಸನೆ ಸಿಕ್ಕಿದೆ. ನನ್ನ ಮನಸ್ಸು ಹೇಳುವುದು ಇಷ್ಟೇ, ತಾಜುದ್ದೀನ್, ಅಬ್ದುಲ್ ಜಬ್ಬಾರ್ ಮತ್ತು ಅಬ್ದುಲ್ ರಝಾಕ್ ರಂತಹ ಕಾರ್ಯಕರ್ತರು ನಮಗೆ ಸ್ಪೂರ್ತಿಯನ್ನು ನೀಡುತ್ತಾ ಬಂದಿದ್ದಾರೆ. ಒಳ್ಳೆಯ ಭರವಸೆಯನ್ನು ನೀಡಿದ್ದಾರೆ. ಇನ್ನಷ್ಟು ತಾಜುದ್ದೀನ್ ಮತ್ತು ಅಬ್ದುಲ್ ಜಬ್ಬಾರ್ ಹಾಗೂ ಅಬ್ದುಲ್ ರಝಾಕ್ ಉಂಟಾಗಲು ನಾವು ದುಆ ಮಾಡೋಣ ಮತ್ತು ಅವರ ಕುಟುಂಬಕ್ಕೆ ಆರೋಗ್ಯ ಪೂರ್ಣ ದೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸೋಣ…
_ಅಬ್ಬಾಸ್ ಮದನಿ ಕೊಡಂಗಾಯಿ_
ಇಮಾಮ್, ಅಶ್ಅರಿಯ್ಯಃ ಟೌನ್ ಜುಮಾ ಮಸ್ಜಿದ್ ವಿಟ್ಲ
9449368130