ವಿಟ್ಲ : ಕೊಡಂಗಾಯಿ ಸುನ್ನಿ ಸೆಂಟರಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ಎಸ್ ಬಿ ಎಸ್ ಸಂಯುಕ್ತ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ಸಲವು ವಿಶ್ವಜ್ಯೋತಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಜನನದಿಂದ ಪುನೀತವಾದ ಪವಿತ್ರ ರಬೀಉಲ್ ಅವ್ವಲ್ ತಿಂಗಳಲ್ಲಿ ವಿಶ್ವ ಪ್ರವಾದಿ ಜನ್ಮದಿನಾಚರಣೆ ಈದ್ ಮೀಲಾದ್ ಪ್ರಯುಕ್ತ ನಡೆದ ಮೌಲಿದ್ ಮಜ್ಲಿಸ್ ಹಾಗೂ ಅಲ್ – ಮದ್ರಸತುಲ್ ಖಳ್’ರಿಯಾ ವಿದ್ಯಾರ್ಥಿಗಳ ಕಲಾ ಕಾರ್ಯಕ್ರಮ ಮೀಲಾದ್ ಪೆಸ್ಟ್ -23 ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ನಮ್ಮೂರಿನ ಆಪತ್ಬಾಂಧವರನ್ನು ಸನ್ಮಾನಿಸಲಾಯಿತು.


ಆಪತ್ಬಾಂಧವರ ಸೇವೆ ಶ್ಲಾಘನೀಯ
ಮಂಕುಡೆ ನಿವಾಸಿ ಪಾಕ ತಜ್ಞ ಹರ್ಷವರ್ಧನ್ ಭಟ್ ಶನಿವಾರ ಬೆಳಗಿನ ಜಾವ ಅತ್ಯಗತ್ಯ ಕಾರ್ಯದ ನಿಮಿತ್ತ ಮನೆಯಿಂದ ಹೊರಟಿದ್ದರು ಆಕಸ್ಮಿತವಾಗಿ ಅವರ ಬೈಕು ಕೊಡಂಗಾಯಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 40ರಷ್ಟು ಅಡಿ ಆಳದ ಹೊಳೆಗೆ ಬಿದ್ದು, ಒದ್ದಾಡುತ್ತಾ ಸಹಾಯಕ್ಕಾಗಿ ಬೊಬ್ಬೆ ಹೊಡೆಯುತ್ತಿದ್ದ ಸಂದರ್ಭ ವಿಟ್ಲದ ಬೊಬ್ಬೆಕೇರಿ ನಿವಾಸಿಗಳಾದ ಮುಹಮ್ಮದ್ ರಾಶಿದ್ ಮತ್ತು ಅಬ್ದುಲ್ ರಝಾಕ್ ಈದ್ ಮೀಲಾದ್ ಪ್ರಯುಕ್ತ ಲೈಟಿಂಗ್ ವ್ಯವಸ್ಥೆಗೆ ಹೋಗಿ ಮರಳಿ ಬರುತ್ತಿರುವಾಗ ಕೊಡಂಗಾಯಿ ಸೇತುವೆ ಬಳಿ ಹೆಡ್ ಲೈಟ್ ಆನ್ ಆಗಿ ಬೈಕೊಂದು ಅನಾಥವಾಗಿ ಅಪಾಯವನ್ನು ತಿಳಿಸುತ್ತಿತ್ತು.
ಅಬ್ದುಲ್ ರಝಾಕ್ ರವರು ತನ್ನ ದ್ವಿಚಕ್ರದಿಂದ ಕೆಳಗಿಳಿದು ಪರಿಸರದ ಕಡೆಗೆ ಗಮನ ಕೊಟ್ಟಾಗ ಸಹಾಯ ಯಾತನೆ ಮಾಡುತ್ತಾ ವ್ಯಕ್ತಿಯೊಬ್ಬರ ಅಳಲು ಕೇಳಿಬರುತ್ತಿದೆ.
ಅರ್ಧರಾತ್ರಿಯ ಸಮಯವಾದುದರಿಂದ ಒಬ್ಬಂಟಿಯಾಗಿ ತೆರಳಲು ಧೈರ್ಯ ಬರದ ಕಾರಣ ಕೊಡಂಗಾಯಿ ಸೇತುವೆ ಪಕ್ಕದ ನಿವಾಸಿ ರಿಕ್ಷಾ ಚಾಲಕನಾದ ಪುತ್ತು ಯಾನೆ ಹಸೈನಾರ್ ಸಹಾಯಕ್ಕೆ ಕರೆದರು.ಹಸೈನಾರ್ ಅವರು ತಕ್ಷಣವೇ
ಎಸ್ ವೈ ಎಸ್ ಸಾಂತ್ವನ ವಿಭಾಗದ ಕಾರ್ಯಕರ್ತ ಅಬ್ದುಲ್ಲಾ ಕುಂಞಿ, ಎಸ್ಸೆಸ್ಸೆಫ್ ಕಾರ್ಯಕರ್ತ ಸಿಮಾಕ್ ಹಾಗೂ ಟಿ ಎಂ ಅಬೂಬಕರ್ ಅವರಿಗೆ ಕರೆ ಮಾಡಿ ಆಪತ್ಬಾಂಧವರ ರೂಪದಲ್ಲಿ ಜೊತೆಯಲ್ಲಿ ಸೇರಿ ಹರ್ಷವರ್ಧನ್ ರವರನ್ನು ಪ್ರಾಣಾಪಾಯದಿಂದ ಪಾರು ಮಾಡಿ ಉಪಚರಿಸಿ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರು.
ಗಾಢ ನಿದ್ರೆಯಿಂದ ಎಚ್ಚೆತ್ತು ಮತ್ತೊಬ್ಬರ ಜೀವ ಉಳಿಸಲು ಸಾಹಸಿಕ ಕಾರ್ಯಾಚರಣೆಗಿಳಿದ ನಮ್ಮೂರಿನ ಕಾರ್ಯಕರ್ತರನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಮಾನವೀಯತೆ ಇನ್ನೂ ಜೀವಂತವಾಗಿ ಉಳಿದಿದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ
ಆಪತ್ಬಾಂಧವರ ಈ ಸಾಹಸವನ್ನು ಗುರುತಿಸಿ ಸುನ್ನೀ ಸಂಘ ಕುಟುಂಬದ ವತಿಯಿಂದ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪುನಗರ ಮುದರ್ರಿಸ್ ಸಯ್ಯದ್ ಶಮೀಮ್ ತಂಙಳ್ ನೇತೃತ್ವದಲ್ಲಿ ಶಾಲು ಹೂದಿಸಿ ಸನ್ಮಾನ ಫಲಕವನ್ನು ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸುನ್ನೀ ಸಂಘ ಕುಟುಂಬದ ನಾಯಕರು ಹಾಗೂ ಕಾರ್ಯಕರ್ತರು ಮದ್ರಸ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿರಿದ್ದರು
ವರದಿ : ಡಿ ಎ ಮೊಹಮ್ಮದ್ ಅಶ್ರಫ್ ಕೊಡಂಗಾಯಿ
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್‌ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ