ಕಾರ್ಕಳ, ಸೆ.28: ಹೊಸ್ಮಾರು ಶೇಖ್ ಮುಹ್ಯಿದ್ದೀನ್ ಜುಮ್ಮಾ ಮಸೀದಿ ಹಾಗೂ ರಝಾ-ಎ ವಠಾರದಲ್ಲಿ ಮೀಲಾದುನ್ನಬಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಜಮಾಅತ್ ಅಧ್ಯಕ್ಷರುಗಳಾದ ಜನಾಬ್ ಸಿದ್ದೀಖ್,ಗುಂಪಕಲ್ ಹಾಗೂ ಜಾವೆದ್,ಪೇರಲ್ಕೆ ದ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಬಳಿಕ ಹೊಸ್ಮಾರು ಜಂಕ್ಷನ್ ವರೆಗೆ ಪ್ರವಾದೀ ಸಂದೇಶ ಜಾಥಾ ನಡೆಯಿತು.
ಮೌಲಾನಾ ಅಬ್ದುರ್ರಶೀದ್ ಸ’ಅದಿ, ಮೌಲಾನಾ ಮುಫ್ತಿ ರಫೀಉಝಮಾ, ಮೌಲಾನಾ MH.ಸುಲೈಮಾನ್ ಸಾದಿ, ಮೌಲಾನಾ ಸ್ವಾಲಿಹ್ ಲತೀಫಿ,ಮೌಲಾನಾ ಶರೀಫ್ ನೂರಿ,ಮೌಲಾನಾ ಶರೀಫ್ ಮದನಿ,ಬೊಳ್ಳೊಟ್ಟು ಗೌರವಾದ್ಯಕ್ಷರಾದ NC.ಅಹ್ಮದ್, ಪ್ರ.ಕಾರ್ಯದರ್ಶಿಗಳಾದ ಜಮಾಲ್,ಝಾಕಿರ್ ಹಾಗೂ ಇನ್ನಿತರ ಹಲವಾರು ಹೆಚ್ಚಿನ ಸಂಖ್ಯೆಯ ಮುಸ್ಲಿಮ್ ಬಾಂಧವರು ಭಾಗವಹಿಸಿದರು,