janadhvani

Kannada Online News Paper

ಶ್ರೀ ರಮಾನಾಥ ರೈ ಹುಟ್ಟು ಹಬ್ಬ ಪ್ರಯುಕ್ತ :ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ

ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ಜಿಲ್ಲೆ ಹಾಗೂ ಗೆಳೆಯರ ಬಳಗ ನಾರ್ಶ, ಬಾರೆಬೆಟ್ಟು ಇದರ ಜಂಟಿ ಆಶ್ರಯದಲ್ಲಿ ಶ್ರೀ ಬಿ. ರಮಾನಾಥ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ನಾಟೆಕಲ್, ಉಳ್ಳಾಲ- ಮಂಗಳೂರು , ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ ( DBCS) ರಿ. ಮಂಗಳೂರು ಇದರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಅಕ್ಷಯ ಬ್ಲಡ್ ಡೋನರ್ಸ್ ಇದರ 24 ನೇ ರಕ್ತದಾನ ಶಿಬಿರವು ಸರಕಾರಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ತಾಳಿತ್ತನೂಜಿ ಯಲ್ಲಿ ನಡೆಯಿತು .

ಝಕರಿಯಾ ನಾರ್ಶ ಅಧ್ಯಕ್ಷತೆಯಲ್ಲಿ ಶ್ರೀ ಬಿ ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ರಕ್ತದಾನ ಶಿಬಿರದಲ್ಲಿ 53 ಶಿಬಿರಾರ್ಥಿಗಳು ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ. ಅಲ್ಲದೇ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 218 ಮಂದಿ ಶಿಬಿರಾರ್ಥಿಗಳ ವಿವಿಧ ರೀತಿಯ ತಪಾಸಣೆಯನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೆ ಪಿ ಸಿ ಸಿ ಕಾರ್ಯದರ್ಶಿ ಅಶ್ವಿನ್ ಕುಮಾರ್ ರೈ , ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ನಾಟೆಕಲ್ಲು ಇದರ ಚಯರ್ ಮ್ಯಾನ್ ಮೋನು ಹಾಜಿ , ಹೈದರ್ ಪರ್ತಿಪ್ಪಾಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ತೆಕ್ಕಿಲ್ ಪ್ರತಿಷ್ಠಾನ ಸಂಸ್ಥೆಯ ಅದ್ಯಕ್ಷರಾದ ಟಿ.ಎಂ ಶಹೀದ್, ದ.ಕ. ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾದ ಅಬ್ಬಾಸ್ ಅಲಿ , ಗ್ರಾಮ ಪಂಚಾಯತ್ ಸಂಪಾಜೆ ಕಲ್ಲುಗುಂಡಿ ಮಾಜಿ ಅಧ್ಯಕ್ಷರಾದ ಹಮೀದ್ ಜಿ.ಕೆ. , ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಲತೀಫ್ ಪರ್ತಿಪ್ಪಾಡಿ , ಕೆಪಿಸಿಸಿ ಕೋ- ಅರ್ಡಿನೇಟರ್ ರಾದ ಚಿತ್ತರಂಜನ್ ಶೆಟ್ಟಿ, ಪಾಣೆ ಮಂಗಳೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅರ್ಷಾದ್ ಸರವು, ಅಡ್ವಕೇಟ್ ಮೂಸ ಕುಂಞ, ಮುಚ್ಚೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ರೋಹನ್, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹೀಂ ನವಾಜ್, ಎಸ್ ವೈ ಎಸ್ ಬಂಟ್ವಾಳ ಝೋನ್ ಅಧ್ಯಕ್ಷರಾದ ಮಹ್ಮೂದ್ ಸಅದಿ, ಸಂಪಾಜೆ ಕಲ್ಲುಗುಂಡಿ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಕೆ ಹನೀಫ್ ಎಸ್ ವೈ ಎಸ್ ಸುಳ್ಯ ಸ್ವಾಂತನಾ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ , ಗ್ರಾಮ ಪಂಚಾಯತ್ ಬೋಳಂತೂರು ಉಪಾಧ್ಯಕ್ಷರಾದ ಯಾಕೂಬ್ ದಂಡೆಮಾರ್, ಎಸ್ ಎಮ್ ಎ ಬಂಟ್ವಾಳ ಝೋನ್ ಅಧ್ಯಕ್ಷರಾದ ಸಿ. ಹೆಚ್ ಅಬೂಬಕ್ಕರ್, ಪರ್ತಿಪ್ಪಾಡಿ ಜುಮಾ ಮಸೀದಿಯ ಅಧ್ಯಕ್ಷರಾದ ಹಕೀಂ ಪರ್ತಿಪ್ಪಾಡಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಯೂಸುಫ್ ತಾಳಿತ್ತನೂಜಿ , ಪಾಣೆ ಮಂಗಳೂರಿನ ಬ್ಲಾಕ್ ಕಾರ್ಯದರ್ಶಿ ಸಿದ್ದೀಕ್ ಸರವು, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಹರ್ಷಾದ್ ಕುಕ್ಕಿಲ, ನಾರ್ಶ ಪ್ರೌಢ ಶಾಲೆ ಶಿಕ್ಷಕರಾದ ಗೋಪಾಲ ಕೃಷ್ಣ ನೇರಳಕಟ್ಚೆ, ಕೊಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಎ.ಬಿ. ಅಬ್ದುಲ್ಲಾ, ಕೊಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಸಿ. ಹೆಚ್ ರಝಾಕ್, ಕೊಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಗೌಡ, ಬೊಳಂತೂರು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ರೈ ನಾರ್ಶ ಬೊಳಂತೂರು ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಸುರಿಬೈಲ್ , ಬೊಳಂತೂರು ಗ್ರಾಮ ಪಂಚಾಯತ್ ಸದಸ್ಯರಾದ ಅನ್ಸಾರ್ ಬಿ.ಜಿ. , ಬೊಳಂತೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಇಸ್ಮಾಯಿಲ್ ಕೊಕ್ಕಪ್ಪುಣಿ, ತಾಳಿತ್ತನೂಜಿ ಶಾಲಾಭಿವೃಧ್ದಿ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಖಾದರ್ , ಅಬೂಬಕ್ಕರ್ ಕುಲ್ಯಾರ್, ಜಮಾಲು ಬಾರೆಬೆಟ್ಟು , ಶಾಫಿ ತಾಳಿತ್ತನೂಜಿ, ಅನ್ಸಾರ್ ಬಾರೆಬೆಟ್ಟು, ಸಫ್ವಾನ್ ಇವರು ಅತಿಥಿಯಾಗಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪುರಸ್ಕರಾತ ಮೋನು ಹಾಜಿ ಕಣಚೂರು. ಹಮೀದ್ ಜಿ .ಕೆ. , ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕರತರಾದ ಗೋಪಾಲಕೃಷ್ಣ , ಸಂಪಾಜೆ ಮಾಜಿ ಅಧ್ಯಕ್ಷರಾದ ಶಾಹುಲ್ ಹಮೀದ್ ಜಿ .ಕೆ. ಆಂಬ್ಯುಲೆನ್ಸ್ ಚಾಲಕ ಆಸಿಫ್ ಕರೈ, ಸಂಪಾಜೆ ಕಲ್ಲುಗುಂಡಿ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಗ್ರಾಮ ಪಂಚಾಯತ್ ಬೋಳಂತೂರು ಉಪಾಧ್ಯಕ್ಷರಾದ ಯಾಕೂಬ್ ದಂಡೆಮಾರ್, ಶರೀಫ್ ಜಯನಗರ ಹಾಗೂ ವಿಶ್ವನಾಥ ಮೂಲ್ಯ ಇವರನ್ನು ಸನ್ಮಾನಿಸಲಾಯಿತು. ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ ನೌಫಲ್ ಕೆ. ಬಿ ಎಸ್ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com