janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ದ. ಕ ಈಸ್ಟ್: ಜಿಲ್ಲಾ ಮಟ್ಟದ ಶಿಕ್ಷಕರ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಸಮಾವೇಶ

ಪುತ್ತೂರು : ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಮುಸ್ಲಿಂ ಶಿಕ್ಷಕರ ಹಾಗೂ ಎಸ್‌ಡಿಎಂ‌ಸಿ ಅಧ್ಯಕ್ಷರ ಸಮಾವೇಶ ಕಾರ್ಯಕ್ರಮವು ದಿನಾಂಕ 17.09.2023ರ ರವಿವಾರದಂದು ಅಪರಾಹ್ನ ದಾರುಲ್ ಇರ್ಷಾದ್ ವಿದ್ಯಾಲಯ ಕೆಜಿಎನ್ ಕ್ಯಾಂಪಸ್ ಮಿತ್ತೂರಿನಲ್ಲಿ ನಡೆಯಿತು.

ಉಜಿರೆ ಸಯ್ಯಿದ್ ಎಸ್ ಎಂ ತಂಙಳ್ ರವರು ದುಆಃ ನೆರೆವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ದ. ಕ. ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕರವರು ವಹಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಜಿ. ಎಂ. ಎಂ. ಕಾಮಿಲ್ ಸಖಾಫಿರವರು ಕಾರ್ಯಕ್ರಮ ಉದ್ಘಾಟಿಸಿ, ಸಮಾವೇಶದ ಉದ್ಧೇಶದ ಬಗ್ಗೆ ಪ್ರಸ್ತಾಪಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಬಂಟ್ವಾಳ ಮೂಡದ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿರವರು ವಿಧ್ಯಾರ್ಥಿಗಳ ಶಿಕ್ಷಣ, ಗುಣ ನಡೆತೆ, ತರಬೇತಿ ಮೊದಲಾದವುಗಳ ಬಗ್ಗೆ ವಿಷಯಗಳ ಮಂಡಿಸಿ, ಅದಕ್ಕೆ ಬೇಕಾದ ಪರಿಹಾರ ಮಾರ್ಗವನ್ನು ನಾವೆಲ್ಲರೂ ಕಂಡುಕೊಳ್ಳಬೇಕಾಗಿದೆ, ಕರ್ನಾಟಕ ಮುಸ್ಲಿಂ ಜಮಾಅತ್ ಅದಕ್ಕೆ ಮುನ್ನುಡಿ ಹಾಕಿದೆ, ಇಂತಹ ಕಾರ್ಯಕ್ರಮಗಳು ಪ್ರತಿ ಮೊಹಲ್ಲಾಗಳಲ್ಲಿ ನಡೆಯಲಿ ಎಂದು ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು.

ಸಮಾವೇಶದಲ್ಲಿ ಭಾಗವಹಿಸಿದ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಮಂಡಿಸಿದರು.

*ಮೌಲಿದ್ ಪಾರಾಯಣ :* ಕಾರ್ಯಕ್ರಮದ ಆರಂಭದಲ್ಲಿ ಲೋಕಾನುಗ್ರಹಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಜನ್ಮದಿಂದ ಪುಳಕಿತವಾದ ರಬೀವುಲ್ ತಿಂಗಳು ಆರಂಭಗೊಂಡ ಪ್ರಯುಕ್ತ ಮಂಕೂಸು ಮೌಲಿದ್ ಪಾರಾಯಣ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ಸದಸ್ಯರಾದ ಅಬೂಬಕ್ಕರ್ ಸ‌ಅದಿ ಮಜೂರು, ಅಬ್ದುಲ್ ಖಾದಿರ್ ಸಖಾಫಿ ಕಡಂಬು, ಅಬ್ದುಲ್ಲಾ ಮುಸ್ಲಿಯಾರ್ ಪುತ್ತೂರು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಇಬ್ರಾಹಿಂ ಮುಸ್ಲಿಯಾರ್ ಕೊಡುಂಗಾಯಿ ಹಾಗೂ ಪಿ. ಯು. ಅಬ್ದುರ್ರಹ್ಮಾನ್ ಮುಸ್ಲಿಯಾರ್‌ರವರು ಸಹಕರಿಸಿದರು.

ಸಮಾವೇಶದ ಸವಿ ನೆನಪಿಗಾಗಿ ಭಾಗವಹಿಸಿದ ಎಲ್ಲಾ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸದಸ್ಯರಾದ ಕೆ. ಬಿ. ಕಾಸಿ ಹಾಜಿ ಪರ್ಲೋಟು, ಇಕ್ಬಾಲ್ ಬಪ್ಪಳಿಗೆ, ಹಾಜಿ ಅಬ್ದುಲ್‌ ಕರೀಂ ಚೆನ್ನಾರ್, ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಉಮರ್ ತಾಜ್ ನೆಲ್ಯಾಡಿ, ಕೆಎಂ ಮುಸ್ತಫಾ ಸುಳ್ಯ, ಉಸ್ಮಾನ್ ಹಾಜಿ ಸೆರ್ಕಳ, ಯು. ಹನೀಫ್ ಉಜಿರೆ, ಮಾಣಿ ಸರ್ಕಲ್ ಅಧ್ಯಕ್ಷರಾದ ಇಬ್ರಾಹಿಂ ಸ‌ಅದಿ ಮಾಣಿ, ಕೋಶಾಧಿಕಾರಿ ಕಾಸಿಂ ಪಾಟ್ರಕೋಡಿ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವುರವರು ಸ್ವಾಗತಿಸಿದರು, ಜಿಲ್ಲಾ ಸದಸ್ಯರಾದ ಅಬ್ಬಾಸ್ ಬಟ್ಲಡ್ಕರವರು ಧನ್ಯವಾದ ಗೈದರು. ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆರವರು ನಿರೂಪಿಸಿದರು. ಇನ್ನೊರ್ವ ಜಿಲ್ಲಾ ಕಾರ್ಯದರ್ಶಿ ಕೆಇ ಅಬೂಬಕ್ಕರ್ ನೆಲ್ಯಾಡಿ ಹಾಗೂ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ಸಹಕರಿಸಿದರು.

ವರದಿ : ಯೂಸುಫ್ ಸಯೀದ್ ಪುತ್ತೂರು (ಮಾಧ್ಯಮ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆ)