ವಿಟ್ಲ: ಮರ್ಹೂಂ ಅಬೂಬಕ್ಕರ್ ಉಸ್ತಾದ್ ಉಲಮಾಗಳಿಗೆ ಮಾದರಿ ಪುರುಷ ಮತ್ತು ಆಧ್ಯಾತ್ಮಿಕತೆಯ ಮೂಲಕ ಪೂರ್ವಿಕರು ತೋರಿಸಿಕೊಟ್ಟಂತೆ ನಡೆದ ಒಬ್ಬ ಉಲಮಾ ವಿದ್ವಾಂಸರಾಗಿದ್ದರು ಎಂದು ಸಯ್ಯಿದ್ ಮುಕ್ತಾರ್ ತಂಙಳ್ ಕುಂಬೋಲ್ ಹೇಳಿದರು.
ಅವರು, ಸೆಪ್ಟಂಬರ್ 17 ರಂದು ನಡೆದ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪುನಗರ ಕೊಡಂಗಾಯಿ ವಿದ್ಯಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದರ ಆಂಡ್ ನೇರ್ಚೆ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ ಮಾತನಾಡಿದರು.
ದಾರುನ್ನಜಾತ್ ಸಂಸ್ಥೆ ಸ್ಥಾಪಿಸಿ, ಧಾರ್ಮಿಕ ಲೌಕಿಕ ಶಿಕ್ಷಣದ ಮೂಲಕ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಸಯ್ಯಿದರು ಹೇಳಿದರು.
ಬೆಳಿಗ್ಗೆ ಧ್ವಜಾರೋಹಣ ಬಳಿಕ ಸಯ್ಯಿದ್ ಶಮೀಮ್ ತಂಙಳರ ನೇತೃತ್ವದಲ್ಲಿ ಶೈಖುನಾ ಉಸ್ತಾದರ ಮಖಾಂ ಝಿಯಾರತ್ ನಡೆಯಿತು.ನಂತರ ದರ್ಸ್ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ಹಾಗೂ ಖತಮುಲ್ ಕುರ್ ಆನ್ ಕೂಡ ನಡೆಯಿತು. ಕಂಪ್ಯೂಟರ್ ಕೋರ್ಸ್ ಕಲಿತ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ನಡೆಸಲಾಯಿತು.
ಸಯ್ಯಿದ್ ಶಿಹಾಬುದ್ದೀನ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆದ ಅನುಸ್ಮರಣೆ ಹಾಗೂ ಸಮಾರೋಪ ಸಮಾರಂಭವನ್ನು ದಾರುನ್ನಜಾತ್ ಮುದರ್ರಿಸ್ ಸೈಯದ್ ಶಮೀಮ್ ತಂಙಳ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಇಬ್ರಾಹೀಂ ಫೈಝಿ ಕನ್ಯಾನ ಉಸ್ತಾದ್, ಎಂ ಎಸ್ ಮೊಹಮ್ಮದ್, ಉಕ್ಕುಡ ಮುದರ್ರಿಸ್ ಹಾಫೀಲ್ ಶರೀಫ್ ಸಖಾಫಿ, ಸುನ್ನಿ ಕೋರ್ಡಿನೇಶನ್ ಅಧ್ಯಕ್ಷರಾದ ಇಬ್ರಾಹಿಂ ಮದನಿ ಕಂಬಳಬೆಟ್ಟು, ಇಸ್ಮಾಯಿಲ್ ಹಾಜಿ ಬನ್ನೂರು, ಎಂ ಜೆ ಎಂ ಅಧ್ಯಕ್ಷರು ಮುಹಮ್ಮದ್ ಕುಂಞಿ ಕೊಡಂಗಾಯಿ, ಹಸೈನಾರ್ ಮುಸ್ಲಿಯಾರ್ ಬಾರಬೆಟ್ಟು .ಡಾ ಹಸೈನಾರ್ ಟಿಪ್ಪು ನಗರ,ಮಜ್ಲಿಸ್ ದಾರುನ್ನಜಾತ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ,ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಕಡಂಬು,ಉಸ್ಮಾನ್ ಹಾಜಿ ಟಿಪ್ಪು ನಗರ, ಕೊಡಂಗಾಯಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಹರ್ಷದಿ, ಸಂಸ್ಥೆಯ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಪ್ರಾಸ್ತಾವಿಕ ಭಾಷಣ ನಡೆಸಿದರು,ಅಬ್ದುಲ್ ಖಾದರ್ ಫೈಝಿ,ಎಸ್ ಎಂ ಎ ವಿಟ್ಲ ರಿಜೀನಲ್ ಅಧ್ಯಕ್ಷರಾದ ಹಕೀಮ್,ಕನ್ಯಾನ ರೀಜೀನಲ್ ಅಧ್ಯಕ್ಷರಾದ ಇಸ್ಮಾಯಿಲ್,ಎಸ್ ಎಂ ಎ ಜಿಲ್ಲಾ ನಾಯಕರಾದ ಯೂಸೂಫ್ ಸಾಜ,ಕಡಂಬು ಖತೀಬ್ ಅಬ್ದುಲ್ ರಹ್ಮಾನ್ ಸಹದಿ, ಒಕ್ಕೆತ್ತೂರು ಖತೀಬ್ ರಫೀಕ್ ಅಹ್ಸನಿ, ಸಾದೀಕ್ ಸಖಾಫಿ, ಎಸ್ ಜೆ ಎಂ ಅಧ್ಯಕ್ಷರದ ಶರೀಫ್ ಮದನಿ,ಮುನೀರ್ ಉಕ್ಕುಡ,ಪರ್ತಿಪ್ಪಾಡಿ ಜೆ ಎಂ ಅಧ್ಯಕ್ಷರಾದ ಅಬ್ದುಲ್ ಹಕೀಮ್ , ಅಬೂಬಕ್ಕರ್ ಹಾಜಿ ಮಂಜೇಶ್ವರ, ರಶೀದ್ ಸಖಾಫಿ ಒಕ್ಕೆತ್ತೂರು,ಅಬ್ದುಲ್ಲಾ ಮುಸ್ಲಿಯಾರ್ ಪರಪ್ಪು,ಶಾಫಿ ಇಂಜಿನಿಯರ್ ಟಿಪ್ಪು ನಗರ,ಮುಸ್ತಫಾ ಮುಡಿಪು,ಎಂ ಎಸ್ ಸಿರಾಜ್,ಕೆಸಿಎಫ್ ನಾಯಕರಾದ ಸಿದ್ದಿಕ್ ಆಳಿಕೆ, ಆಶಿಫ್ ಟಿಪ್ಪು ನಗರ,ಮಜೀದ್ ಮದನಿ, ಹಾಫಿಳ್ ಶರೀಫ್ ಮುಸ್ಲಿಯಾರ್,ಅಬ್ದುಲ್ ರಝಾಕ್ ಸಹದಿ,ಉಮ್ಮರ್ ವಿಟ್ಲ,ಶರೀಫ್ ಸಖಾಫಿ ಅಳಿಕೆ ಮಜಲ್, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ,ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ,ಅಬೂಬಕ್ಕರ್ ಹಾಜಿ ಕಡಂಬು ಸುನ್ನಿ ಅಬೂಬಕ್ಕರ್ ಫೈಝಿ ಉಪಸ್ಥಿತರಿದ್ದರು. ಸಂಸ್ಥೆಯ ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ಸ್ವಾಗತಿಸಿದರು.