ಗೆಳೆಯರ ಬಳಗ ನಾರ್ಶ, ಬಾರೆಬೆಟ್ಟು ಇದರ ವತಿಯಿಂದ ಶ್ರೀ ಬಿ. ರಮಾನಾಥ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ನಾಟೆಕಲ್, ಉಳ್ಳಾಲ- ಮಂಗಳೂರು ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ ( DBCS) ರಿ. ಮಂಗಳೂರು ಇದರ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವು ದಿನಾಂಕ :- 17-9-2023 ಆದಿತ್ಯವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಳಿತ್ತನೂಜಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಮಾಜಿ ಸಚಿವರಾದ ಶ್ರೀ ಬಿ. ರಮಾನಾಥ ರೈ ಅವರು ಉದ್ಘಾಟಿಸಲಿದ್ದಾರೆ. ಹಾಗೂ ಇನ್ನಿತರ ರಾಜಕೀಯ, ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ. ಈ ರಕ್ತದಾನ ಶಿಬಿರದಲ್ಲಿ ಕ್ರಿಕೇಟ್ ತಂಡದ 10 ಜನ ರಕ್ತದಾನ ಮಾಡಿದರೆ ಭಾಗವಹಿಸಿದ ಎಲ್ಲಾ ತಂಡಕ್ಕೆ ಉಚಿತವಾಗಿ 1 ಬ್ಯಾಟ್ ಮತ್ತು ಬಾಲ್ ನ್ನು ನೀಡಲಾಗುವುದು.
ಅಲ್ಲದೇ ಕಣ್ಣು ತಪಾಸಣೆ ಮಾಡಿ ಕನ್ನಡಕದ ಅವಶ್ಯಕತೆಯಿರುವ ಶಿಬಿರಾರ್ಥಿಗೆ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು ಮತ್ತು ಕಣ್ಣಿನ ಸರ್ಜರಿ ಮಾಡಬೇಕಾಗಿರುವ ಶಿಬಿರಾರ್ಥಿಗೆ ಉಚಿತವಾಗಿ ಕಣ್ಣಿನ ಸರ್ಜರಿಯನ್ನು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ನಾಟೆಕಲ್, ಉಳ್ಳಾಲ- ಮಂಗಳೂರು ಇಲ್ಲಿ ಮಾಡಿಕೊಡಲಾಗುವುದು. ಮತ್ತು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ ವಿವಿಧ ರೀತಿಯ ಖಾಯಿಲೆಗೆ ತುತ್ತಾಗಿರುವ ಎಲ್ಲಾ ಶಿಬಿರಾರ್ಥಿಗಳಿಗೆ ಆಯಾ ಖಾಯಿಲೆಗೆ ಅನುಗುಣವಾಗಿ ಉಚಿತವಾಗಿ ಔಷಧಿಯನ್ನು ನೀಡಲಾಗುವುದು.