ಕಿನ್ಯ :ಕರ್ನಾಟಕ ಮುಸ್ಲಿಂ ಜಮಾಅತ್,SჄS ಮತ್ತು SSF ಕಿನ್ಯ ಇದರ ವತಿಯಿಂದ ಪ್ರೀತಿಯ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರವರ ಜನ್ಮ ತಿಂಗಳ ಪ್ರಯುಕ್ತ ನಾಳೆ (17/9/2023, ಆದಿತ್ಯವಾರ) ಕಿನ್ಯದಲ್ಲಿ ಹುಬ್ಬುರ್ರಸೂಲ್ ಮೀಲಾದ್ ಸಮಾವೇಶ ನಡೆಯಲಿದೆ.
ಸಂಜೆ 4 ಗಂಟೆಗೆ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಹುಮೈದಿ ಅಲ್ ಬುಖಾರಿ ಕಿನ್ಯ ರವರ ನೇತೃತ್ವದಲ್ಲಿ ಹಝ್ರತ್ ಹುಸೈನ್ ವಲಿಯುಲ್ಲಾಹಿ ದರ್ಗಾ ಝಿಯಾರತ್ ನಡೆಯಲಿದೆ, ನಂತರ ದರ್ಗಾ ವಠಾರ ದಿಂದ ಮೀಲಾದ್ ಸಮಾವೇಶ ನಡೆಯಲಿರುವ ತಾಜುಲ್ ಫುಖಹಾಅ್ ವೇದಿಕೆ ತನಕ ಬೃಹತ್ ವಾಹನ ಜಾಥಾ ನಡೆಯಲಿದೆ.
ಸಂಜೆ 7 ಗಂಟೆಗೆ ಹುಬ್ಬುರ್ರಸೂಲ್ ಮೀಲಾದ್ ಸಮಾವೇಶ ಸಯ್ಯಿದ್ ಅಲವಿ ತಂಙಳ್ ಮೀಂಪ್ರಿ ರವರ ದುಆದ ಮೂಲಕ ಚಾಲನೆ ಗೊಳ್ಳಲಿದೆ, ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಅಧ್ಯಕ್ಷ ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ಅಶ್ರಫ್ ಸಖಾಫಿ ಕಣ್ಣಂಗಾರ್ ಸಮಾರಂಭ ವನ್ನು ಉದ್ಘಾಟಿಸಲಿರುವರು.
ಮದ್ಹುರ್ರಸೂಲ್ ಎಂಬ ವಿಷಯದಲ್ಲಿ ಖ್ಯಾತ ಭಾಷಣಗಾರ ಪಾತೂರು ಅಬ್ದುಲ್ ಜಬ್ಬಾರ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ.
ಕರ್ನಾಟಕ ವಿಧಾನಸಭೆ ಸಭಾಪತಿ ಸನ್ಮಾನ್ಯ ಯು.ಟಿ ಖಾದರ್,ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಅಧ್ಯಕ್ಷ ಕೆ.ಸಿ ಇಸ್ಮಾಈಲ್ ಹಾಜಿ ಚಾಯರವಳಚ್ಚಿಲ್, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲೆ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮರಿಕ್ಕಳ ಸಹಿತ ಊರಿನ ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಕನ್ವೀನರ್ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ನೇರ ಪ್ರಸಾರವನ್ನು KSOCR Media ದಲ್ಲಿ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದಾಗಿದೆ.