ಅಜ್ಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಜ್ಮಾನ್ ಝೋನ್ ವತಿಯಿಂದ ಅಕ್ಟೋಬರ್ 1 ರಂದು ನಡೆಯುವ ಬೃಹತ್ ಮೀಲಾದ್ ಸಮಾವೇಶ ನಡೆಯಲಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ, ಸ್ವಾಗತ ಸಮಿತಿ ರಚನೆಯು KCF ಅಜ್ಮಾನ್ ಉಮರಾ ನಾಯಕ ಖಾಲಿದ್ ಮೂಡಬಿದ್ರೆ ನಿವಾಸದಲ್ಲಿ ಝೋನ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಅಮಾನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಝೋನ್ ಕಾರ್ಯದರ್ಶಿ ಅಬ್ದುಲ್ ಖಾದರ್ ಕೊಡಿಪ್ಪಾಡಿ ಸ್ವಾಗತ ಕೋರಿದರು. ಕೆಸಿಎಫ್ ರಾಷ್ಟ್ರೀಯ ಇಹ್ಸಾನ್ ಅಧ್ಯಕ್ಷ ಅಬ್ದುಲ್ ಖಾದರ್ ಸಅದಿ ಸಭೆಯನ್ನು ಉದ್ಘಾಟಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಅಮಾನಿ ಉಸ್ತಾದರು, ಕರುಣೆಯ ಪ್ರವಾದಿ (ಸ ಅ) ರು ಒಂದು ಸುಂದರವಾದ ಕುಲೀನವಾದ ಕುಟುಂಬದಲ್ಲಿ ಜನಿಸಿದ ಗಂಡು ಮಗು ಆಗಿದ್ದರಿಂದ ಹೆಮ್ಮೆ ಪಡುತ್ತಾ ನಂತರದ ದಿನಗಳಲ್ಲಿ ಪ್ರವಾದಿ (ಸ ಅ) ರನ್ನು ದ್ವೇಷಿಸುತ್ತಾ ಕೊನೇ ಕ್ಷಣದಲ್ಲಿ ಅವರಲ್ಲಿ ಬಹುತೇಕ ಮಂದಿ ಪವಿತ್ರ ಇಸ್ಲಾಮ್ ಧರ್ಮ ಸ್ವೀಕರಿಸಲು ನೆಬಿಯವರ ಮೇಲ್ಮೆ ಗುಣ ಕಾರಣವಾಯಿತು ಎಂದು ವಿವರಿಸಿದರು.
“ಜಗತ್ತಿಗೆ ಕರುಣೆಯ ಪ್ರವಾದಿ (ಸ ಅ) ರಬೀಹ್ 23” ಎಂಬ ಕ್ಯಾಂಪೇನ್ ಅನ್ನು ಝೋನ್ ಮಟ್ಟದಲ್ಲಿ ಸಯ್ಯಿದ್ ತ್ವಾಹಿರ್ ತಂಙಳ್ ಅಧಿಕೃತವಾಗಿ ಚಾಲನೆ ನೀಡಿದರು.
ಸ್ವಾಗತ ಸಮಿತಿ ಪದಾಧಿಕಾರಿಗಳು
ಗೌರವಾಧ್ಯಕ್ಷ: ಸಯ್ಯಿದ್ ತ್ವಾಹಿರ್ ತಂಙಳ್, ಚೇರ್ಮನ್: ಖಾಲಿದ್ ಮೂಡಬಿದ್ರೆ, ವರ್ಕಿಂಗ್ ಚೇರ್ಮನ್: ಅಬ್ದುಲ್ ಖಾದರ್ ಸಅದಿ, ಜನರಲ್
ಕನ್ವೀನರ್: ಉಮರ್ ಸುಳ್ಯ, ಕನ್ವೀನರ್, ಮೊಹಮ್ಮದ್ ಅಲಿ ಕುಡ್ತಮುಗೆರು, ಖಜಾಂಜಿಯಾಗಿ ಮೊಹಮ್ಮದ್ ಅಯ್ಯೂಬ್ ಅಮ್ಮೆಂಬಳ, ಫೈನಾನ್ಸ್ ಚೇರ್ಮನ್, ಸಿದ್ದೀಕ್ ಪಾಣೆಮಂಗಳೂರು, ಮೀಡಿಯಾ ಮತ್ತು ಪಬ್ಲಿಕೇಶನ್ ಚೇರ್ಮನ್ ಆಗಿ ಅಶ್ರಫ್ ಸಖಾಫಿ ಕರ್ಪಾಡಿ, ಕನ್ವೀನರ್ ತಾಜುದ್ದೀನ್ ಉಳ್ಳಾಲ ಆಯ್ಕೆಯಾದರು.
ಹಾಗೂ ಕಾರ್ಯಕ್ರಮದ ವಿವಿಧ ವಿಭಾಗಗಳಿಗೆ ಉಸ್ತುವಾರಿಗಳನ್ನು ಆರಿಸಲಾಯಿತು. ಉಮರ್ ಸುಳ್ಯ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ