ವಿಟ್ಲ: ಯಾವುದೇ ಪ್ರಚಾರದ ಹಂಗಿಲ್ಲದೆ ಸಮಾಜದಲ್ಲಿರುವ ಅಸಹಾಯಕರನ್ನು, ಮಾರಕ ರೋಗಗಳಿಂದ ತತ್ತರಿಸುತ್ತಿರುವ ಬಡ ರೋಗಿಗಳನ್ನು ಪತ್ತೆ ಹಚ್ಚಿ ಅವರ ನೋವಿಗೆ ಸ್ಪಂದಿಸುತ್ತಿರುವ ವಿಟ್ಲ ಖಿದ್ಮತ್ ಪೌಡೇಶನ್ ಸೇವೆ ಶ್ಲಾಘನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಹೇಳಿದ್ದಾರೆ.
ವಿಟ್ಲ ಖಿದ್ಮತ್ ಪೌಡೇಶನ್ ನ ವಾರ್ಷಿಕ ಸಂಗಮದಲ್ಲಿ ಸಂಪನ್ಮೂಲ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಾ, ಸಮಾಜ ಸೇವೆಯು ನಮ್ಮ ರಕ್ತ ಗುಣದಲ್ಲಿಯೇ ಇದೆ,ಅದನ್ನು ಅಳಿಸಲು ಯಾರಿಂದಲೂ ಸಾದ್ಯವಿಲ್ಲ, ಈ ನಿಟ್ಟಿನಲ್ಲಿ ಮೂರು ವರ್ಷದಲ್ಲಿ ಈ ಸಂಸ್ಥೆಯು ಬಡವರ ಪಾಲಿಗೆ ಬಹಳ ದೊಡ್ಡ ಸೇವೆ ಮಾಡಿದೆ ಎಂದರು.ಮುಂದಕ್ಕೂ ಉತ್ತಮ ಕೆಲಸ ಮಾಡುತ್ತಿರಿ, ಸಮಾಜ ನಿಮ್ಮ ಸಂಘಟನೆಯನ್ನು ಗುರುತಿಸುತ್ತದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಖಿದ್ಮತ್ ಪೌಡೇಶನ್ ಅಧ್ಯಕ್ಷ ಹಮೀದ್ ಹಾಜಿ ಕೊಡುಂಗಾಯಿ ಅಧ್ಯಕ್ಷತೆ ವಹಿಸಿದರು , ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್, ಹನೀಪ್ ಬಗ್ಗುಮೂಲೆ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ, ಕನ್ಯಾನ ಪಂಚಾಯತ್ ಸದಸ್ಯ ಮುಹ್ಯುದ್ದೀನ್ ಹಾಜಿ ಬೈರಿಕಟ್ಟೆ, ಉದ್ಯಮಿ ಶಂಸುದ್ದೀನ್ ಮಂಗಳೂರು, ಲತೀಫ್ ಪರ್ತಿಪ್ಪಾಡಿ, ಶಾಕಿರ್ ಅಳಕೆಮಜಲು, ಮಹಮ್ಮದ್ ಹಾಜಿ ಕನ್ಯಾನ, ಶಂಸುದ್ದೀನ್ ವಿಟ್ಲ, ಬಾತಿಷ್ ಅಳಕೆಮಜಲು ಮೊದಲಾದವರು ಉಪಸ್ಥಿತರಿದ್ದರು.
ಖಿದ್ಮತ್ ಉಪಾಧ್ಯಕ್ಷ ಕಾಸಿಂ ಸಖಾಫಿ ದುಆ ನೆರವೇರಿಸಿದರು.ಕಾರ್ಯದರ್ಶಿ ಸಲೀಂ ಹಾಜಿ ಸ್ವಾಗತಿಸಿ ಇಬ್ರಾಹೀಂ ಮುಸ್ಲಿಯಾರ್ ವಂದಿಸಿದರು.ಮುಂದಿನ 3 ವರ್ಷದ ಯೋಜನೆಯನ್ನು ಸಭೆಯಲ್ಲಿ ಮಂಡಿಸಲಾಯಿತು.