ರಿಯಾದ್: ಸಣ್ಣ ವ್ಯವಹಾರ ಸ್ಥಾಪನೆಗಳಿಗೆ ಇ-ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಸೌದಿ ಅರೇಬಿಯಾ ಯೋಚಿಸಿದೆ.ವಿದೇಶೀಯರ ನಿಯಂತ್ರಣದಲ್ಲಿರುವ ಬಿನಾಮಿ ಉದ್ಯಮಿಗಳನ್ನು ಗುರುತಿಸಲು ಇ-ಪಾವತಿ ಜಾರಿಗೊಳಿಸಲಾಗುತ್ತಿದೆ ಎನ್ನಲಾಗಿದೆ.
ಸ್ಥಳೀಯ ನಾಗರಿಕರ ಸಹಕಾರದಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರ ಕೇಂದ್ರಗಳ ಬೆನಾಮಿ ಉದ್ಯಮಿಗಳನ್ನು ಪತ್ತೆ ಹಚ್ಚುವುದಕ್ಕೆ ಈ ವ್ಯವಸ್ಥೆಯು ಸಹಾಯವಾಗಲಿದೆ ಎಂದು ನಂಬಲಾಗಿದೆ.
ಸಣ್ಣ ಉದ್ಯಮಗಳಲ್ಲಿ ಕೆಲಸ ಮಾಡುವ ವಿದೇಶಿಯರು ವೇತನಕ್ಕಿಂತ ಹೆಚ್ಚಿನ ಹಣವನ್ನು ಸ್ವದೇಶಕ್ಕೆ ಕಳುಹಿಸುತ್ತಿದ್ದಾರೆ.ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬ್ಯಾಂಕ್ ಖಾತೆ ಕಡ್ಡಾಯಗೊಳಿಸಲಾಗುವುದು.ಇ-ಪಾವತಿ ಮೂಲಕ ಗ್ರಾಹಕರು ಪಾವತಿಯನ್ನು ಮಾಡುವ ಸೌಕರ್ಯವನ್ನೂ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾನೂನು ನಿರ್ಮಿಸಲು ಯೋಚಿಸಲಾಗಿದೆ.ಇ-ಪಾವತಿ ಸೌಕರ್ಯವಿಲ್ಲದ ಉದ್ಯಮಗಳನ್ನು ಮುಚ್ಚಿಸುವಂತೆಯೂ ಕಾನೂನು ಜಾರಿಯಾಗಲಿದೆ.
ಹಣ ವ್ಯವಹಾರಗಳನ್ನು ವೀಕ್ಷಿಸಲು ಮತ್ತು ವ್ಯಾಟ್, ಆಯ್ದ ತೆರಿಗೆಗಳನ್ನು ಪರಿಶೀಲಿಸಲು ಇ- ಪಾವತಿ ವ್ಯವಸ್ಥೆಯು ಸಹಾಯ ಮಾಡಲಿದೆ.
ದಿನಸಿ ಅಂಗಡಿಗಳು ಮತ್ತು ಸಿದ್ಧ ಉಡುಪುಗಳ ಮಳಿಗೆಗಳು ಸೇರಿದಂತೆ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಸುಮಾರು 80 ಶೇಕಡಾ ಸ್ಥಾಪನೆಗಳು ಬೆನಾಮಿಯಾಗಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ಹಿಂದೆ ವ್ಯಕ್ತಪಡಿಸಿದ್ದವು.