janadhvani

Kannada Online News Paper

ಕುವೈಟ್: ವರ್ಕ್ ಪರ್ಮಿಟ್ ಅನುಮತಿಗೆ ಕಟ್ಟುನಿಟ್ಟಾದ ನಿಬಂಧನೆಗಳು

ಕುವೈತ್ ಸಿಟಿ: ಸಿವಿಲ್ ಮತ್ತು ತೈಲ ಕ್ಷೇತ್ರಗಳಲ್ಲಿ ಕೆಲಸದ ಪರವಾನಗಿಯನ್ನು ಅನುಮತಿಸಲು ಮಾನವಸಂಪನ್ಮೂಲ ಸಾರ್ವಜನಿಕ ಪ್ರಾಧಿಕಾರವು 46 ಆರ್ಕಟಿಕ್ ಗಳ ಕಟ್ಟುನಿಟ್ಟಾದ ನಿಬಂಧನೆಗಳನ್ನು ಅನುಷ್ಠಾನಗೊಳಿಸಿದೆ.

  • ಅಕ್ರಮ ವಲಸಿಗರಾದ ಬಿದೂನಿ ವಂಶಜರಿಗೆ ಒಂದು ವರ್ಷದ ಅವಧಿಯವರೆಗೆ ನವೀಕರಿಸಲ್ಪಡುವವರಿಗೆ ಪರವಾನಗಿ ಅನುಮತಿ ನೀಡಲಾಗುವುದು.
  • ಯುವಕ ಯುವತಿಯರಿಗೆ ಕೆಲವು ನಿಬಂಧನೆಗಳೊಂದಿಗೆ ಕೆಲವು ವಲಯಗಳಲ್ಲಿ ಅನುಮತಿ ನೀಡಲಾಗುತ್ತದೆ.
  • ಆದರೆ ಪೆಟ್ರೋ ಕೆಮಿಕಲ್ ಗಳಂತಹ ಪ್ರಮುಖ ವಲಯಗಳಲ್ಲಿ ಅನುಮತಿಸಲಾಗುವುದಿಲ್ಲ.
  • ಹೋಟೆಲ್ ಗಳು, ವಕೀಲರ ಅಪೀಸ್‌ಗಳು, ಉದ್ಯಾನವನಗಳು, ಏರ್ಲೈನ್ಸ್, ಆರೋಗ್ಯ ಮತ್ತು ತೈಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ರಾತ್ರಿಯ ಸಮಯದಲ್ಲಿ ಕೆಲಸ ಮಾಡಲು ಅನುಮತಿಸಲಾಗುವುದು.
  • ಬ್ಯಾಂಕುಗಳು, ರೆಸ್ಟೋರೆಂಟ್, ಸಾರ್ವಜನಿಕ ವಲಯ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಬ್ಯೂಟಿ ಪಾರ್ಲರ್ಗಳು ಮತ್ತು ಪ್ರವಾಸೋದ್ಯಮ ಕಚೇರಿಗಳಲ್ಲಿ ರಾತ್ರಿ 12 ಗಂಟೆವರೆಗೆ ಕೆಲಸ ಮಾಡಲು ಅನುಮತಿಸಲಾಗುವುದು.
  • ಮಹಿಳೆಯರು ತಮ್ಮ ಗಂಡಂದಿರು ಮರಣ ಹೊಂದಿದ್ದಲ್ಲಿ ನಾಲ್ಕು ತಿಂಗಳುಗಳ ವೇತನದೊಂದಿಗೆ ರಜೆಯನ್ನೂ  ಪಡೆಯಬಹುದು.
  • ಕೆಲಸದ ಸಮಯದಲ್ಲಿ ದಿನಕ್ಕೆ ಎರಡು ಗಂಟೆಗಳ ಕಾಲ ಮಕ್ಕಳಿಗೆ ಹಾಲು ಉಣಿಸಲು ಮಹಿಳೆಯರಿಗೆ ಅವಕಾಶ ನೀಡಲಾಗುತ್ತದೆ.
  • ಮಹಿಳೆಯರಸಿದ್ದ ಉಡುಪುಗಳ ಅಂಗಡಿಗಳಲ್ಲಿ, ಬ್ಯೂಟಿ ಸಲೂನ್ ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಪುರುಷರನ್ನು  ಕೆಲಸಕ್ಕೆ ನೇಮಕಗೊಳಿಸುವುದನ್ನು ಅನುಮತಿಸಲಾಗುವುದಿಲ್ಲ.
  • ಕುವೈತ್ ಕಂಪನಿಗಳಲ್ಲಿ ವಿದೇಶಿ ಪಾಲುದಾರರಿಗೆ ಕೆಲಸದ ಪರವಾನಗಿಯನ್ನು ಅನುಮತಿಸಲಾಗುತ್ತದೆ.
  • ಉದ್ಯೋಗದಾತನು ನಾಗರಿಕ ಮತ್ತು ತೈಲ ಕ್ಷೇತ್ರಗಳಲ್ಲಿನ ಕೆಲಸಗಾರನ ಪಾಸ್ ಪೋರ್ಟ್ ಅನ್ನು ಹಿಡಿದಿಡಲು ಅನುಮತಿಸುವುದಿಲ್ಲ.
  • ಪರಾರಿಯಾ ಕಾರ್ಮಿಕನ ಮತ್ತು ಅಪರಾಧಗಳಲ್ಲಿ ಜೈಲಿನಲ್ಲಿರುವವರ ಕೆಲಸದ ಪರವಾನಗಿಯನ್ನು ರದ್ದುಗೊಳಿಸಲು ಮಾಲೀಕರಿಗೆ ಅನುಮತಿ ನೀಡಲಾಗಿದೆ ಮತ್ತು ಪರಾರಿಯಾದವ ತನ್ನ ಖರ್ಚಿನಲ್ಲೆ ಊರಿಗೆ ಹಿಂದಿರುಗಬೇಕು.
  • ಕಾನೂನನ್ನು ಉಲ್ಲಂಘಿಸುವ ಕಾರ್ಮಿಕರ ಕಡತವನ್ನು ತಡೆಯಲಾಗುವುದು.
    ಕೆಲಸದ ಅನುಮತಿಯ ವಾಯಿದೆ ಮೂರು ವರ್ಷಗಳಾಗಿವೆ.
  • ಉದ್ಯೋಗದಾತ ಬ್ಯಾಂಕ್ ಗ್ಯಾರಂಟಿಗಳನ್ನು ಮತ್ತು ಯೋಜನೆಯ ಬಗ್ಗೆ ವಿವರಗಳನ್ನು ಸಲ್ಲಿಸಬೇಕು.
  • ಹೊಸ ಕೆಲಸದ ಅನುಮತಿಗಳು ಕಾರ್ಮಿಕರಿಗೆ ಮತ್ತು ಮಾಲೀಕರಿಗೆ ತಮ್ಮ ಹಕ್ಕುಗಳನ್ನು ಕಾಯ್ದಿರಿಸುವ  ಮಾನದಂಡವನ್ನು ಹೊಂದಿದೆ.

error: Content is protected !! Not allowed copy content from janadhvani.com