janadhvani

Kannada Online News Paper

ಬದ್ರಿಯಾ ಜುಮ್ಮಾ ಮಸೀದಿ ಭದ್ರಗಿರಿ- ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಬ್ರಹ್ಮಾವರ : ಮಸೀದಿ ಆಡಳಿತ ಕಮಿಟಿ, SSF & Youngmens ಭದ್ರಗಿರಿ ವತಿಯಿಂದ ನಡೆಸಲಾದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಜಮಾಅತ್ ಅಧ್ಯಕ್ಷರಾದ ಬಿ.ಮೊಐದಿನ್ ಬ್ಯಾರಿ ಇವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು. ಖತೀಬರಾದ ಝುಬೈರ್ ಝುಹ್ರಿ ಇವರ ದುವಾ ಮೂಲಕ ಪ್ರಾರಂಭಿಸಿ, ಸ್ವಾತಂತ್ರ್ಯ ದಿನಾಚರಣೆ ತ್ಯಾಗ ಸ್ಮರಣೆಗಳ ಬಗ್ಗೆ ವಿವರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮದ್ರಸ ವಿದ್ಯಾರ್ಥಿಗಳು, ಹಿರಿಯರಾದ ಹಸೈನರ್ ಸಾಹೇಬ್, ಮುಬಾರಕ್, ಝಾಕಿರ್, ನಿಶಾನ್ , ಗಲ್ಪ್ ಸದಸ್ಯರಾದ ಉಮರ್ ಸಾಹೇಬ್,ಇಲ್ಯಾಸ್, ನಿಹಾಲ್,ಹಾಗೂ ಜಮಾಅತ್ ಸದಸ್ಯರು, SSF, YOUNGMENS ಸದಸ್ಯರು ಉಪಸ್ಥಿತಿ ಇದ್ದರು. ನಾಸೀರ್ ಸ್ವಾಗತಿಸಿ, ಧನ್ಯವಾದಗೈದರು. ಇಮ್ತಿಯಾಝ್ ಇವರ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

error: Content is protected !! Not allowed copy content from janadhvani.com