ದುಬೈ: ರಂಜಾನ್ ನಲ್ಲಿ ನಡೆಸುವ ಭಿಕ್ಷಾಟನೆಯ ವಿರುದ್ಧ ಪ್ರಚಾರ ನಡೆಸಲಾಗುವುದಾಗಿ ದುಬೈ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉದ್ಯಮ ಕೇಂದ್ರಗಳು, ಪ್ರಮುಖ ಜಂಕ್ಷನ್ ಗಳು, ಮಸೀದಿಗಳು, ಜನವಾಸ ಕೇಂದ್ರಗಳು ಮತ್ತಿತರ ಪ್ರದೇಶಗಳಲ್ಲಿ ಭಿಕ್ಷಾಟನೆ ನಡೆಸುವವರ ವಿರುದ್ದ ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಆ್ಯಂಡ್ ಫಾರಿನ್ ಅಫೇರ್ಸ್, ದುಬೈ ಮುನಿಸಿಪಾಲಿಟಿ, ಸರ್ಕಾರದ ಮತ್ತಿತರ ಇಲಾಖೆಗಳ ಸಹಕಾರದೊಂದಿಗೆ ಗಡೀಪಾರು ಸಹಿತ ಕಠಿಣ ಶಿಕ್ಷಾ ಕ್ರಮಗಳನ್ನು ಸ್ವೀಕರಿಸಲಾಗುವುದು ಎಂದು ದುಬೈ ಪೊಲೀಸ್, ಕ್ರಿಮಿನಲ್ ಇನ್ವೆಸ್ಟಿಗೇಶನ್ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಬ್ರಿಗೇಡಿಯರ್ ಮುಹಮ್ಮದ್ ರಶೀದ್ ಅಲ್ ಮುಹೈರಿ ಹೇಳಿದ್ದಾರೆ.ಅವರು ದುಬೈ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಇದು ದುಬೈ ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ಅಬ್ದುಲ್ಲಾ ಖಲೀಫಾ ಅಲ್ ಮರ್ರಿಯವರ ರಕ್ಷಣಾ ಕಾರ್ಯಾಚರಣೆಯಡಿಯಲ್ಲಿ ಜರುಗಲಿದೆ. ಯುಎಇನ ಸ್ಥಳೀಯ ಮತ್ತು ವಿದೇಶಿ ನಿವಾಸಿಗಳು ರಂಝಾನ್ ಉಪವಾಸವನ್ನು ಬಹಳ ಪವಿತ್ರವಾಗಿ ಆಚರಿಸುವವರಾಗಿದ್ದಾರೆ. ಭಿಕ್ಷಾಟನಾ ವೀರರು ಈ ಅವಧಿಯಲ್ಲಿ ಪ್ರೀತಿಯ ಮತ್ತು ಕಾರುಣ್ಯ, ಸಹ- ಸಹವರ್ತಿತ್ವದ ಲಾಭವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ.ಅಂತಹವರನ್ನು ಬಂಧಿಸಿ,ಒಂದು ತಿಂಗಳು ಜೈಲು ಶಿಕ್ಷೆಗೆ ಒಳಪಡಿಸಿ, ನಂತರ ಗಡೀಪಾರು ಮಾಡಲಾಗುವುದು.
ವಿವಿಧ ಸರ್ಕಾರಿ ಇಲಾಖೆಗಳ ವಿಶೇಷ ತರಬೇತಿ ಪಡೆದ ಸದಸ್ಯರನ್ನು ಎಮಿರೇಟ್‌ನ ವಿವಿಧ ಭಾಗಗಳಲ್ಲಿ ತಪಾಸಣಾ ತಂಡಗಳಿಗೆ ನೇಮಕ ಮಾಡಲಾಗಿದೆ. ಕಾನೂನಿನ ಉಲ್ಲಂಘನೆ ಗಮನಕ್ಕೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ.ಭಿಕ್ಷುಕರ ಬೇಡಿಕೆ ನಿಜವಾಗಿ ಗೋಚರಿಸಿದರೆ ಸರ್ಕಾರದ ಸಂಸ್ಥೆಗಳು ಅವರಿಗೆ ಸಹಾಯ ನೀಡಲಾಗುವುದು.
ಬೇಡಿಕೆಗಳು ಸುಳ್ಳಾಗಿದ್ದಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ.ಇದಕ್ಕಾಗಿ ವಿಶೇಷ ವಿಶ್ಲೇಷಣಾ ತಂಡವನ್ನು ಕೂಡಾ ನಿಯೋಜಿಸಲಾಗುವುದು ಎಂದು ಅವರು ಹೇಳಿದರು.
ಚಾರಿಟಿ ಚಟುವಟಿಕೆಗಳಿಗಾಗಿ ಸಾರ್ವಜನಿಕರಿಗೆ ಸರಕಾರದ ಅಡಿಯಲ್ಲಿ ಉತ್ತಮ ಕಾರ್ಯನಿರ್ವಹಣಾ ಸೌಕರ್ಯವಿದೆ.ಮಾನವೀಯ ಅಗತ್ಯಗಳಿಗೆ ಇವುಗಳ ಮೂಲಕ ಮಾತ್ರ ಹಣ ವಿನಿಯೋಗ ನಡೆಸಬಹುದಾಗಿದೆ.
ಸಾಮಾನ್ಯ ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಎಮಿರೇಟ್‌ನ ಸಂಸ್ಕೃತಿಗೆ ವಿರುದ್ಧವಾದ ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬಾರದು ಎಂದು ಅವರು ಕೇಳಿಕೊಂಡಿದ್ದಾರೆ.
ದುಬೈ ವಿಮಾನ ನಿಲ್ದಾಣ, ರಸ್ತೆ ಮಾರ್ಗವಾಗಿ ಎಮಿರೇಟ್‌ಗೆ ಪ್ರವೇಶಿಸುವ ಚೆಕ್‌ಪೋಸ್ಟ್ ಗಳಲ್ಲಿ ರಂಜಾನ್ ನಲ್ಲಿ ಆಗಮಿಸುವ ಸಂದರ್ಶಕರನ್ನು ವಿಶೇಷ ಮೇಲ್ವಿಚಾರಣೆಗೊಳಪಡಿಸಲಾಗುವುದು. ವಿಮಾನ ನಿಲ್ದಾಣಗಳಲ್ಲಿ ಮತ್ತು ಚೆಕ್ ಪೋಸ್ಟ್ ಗಳಲ್ಲಿ ಮೇಲ್ವಿಚಾರಣೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಅಸಾಮಾನ್ಯ ಭಾವನೆ ಕಂಡುಬಂದರೆ ತಪಾಸಣೆ ನಡೆಸಲಾಗುವುದು.ದೇಶಕ್ಕೆ ಆಗಮಿಸಿದ ಉದ್ದೇಶ ವನ್ನು ನಿಖರವಾಗಿ ವಿಚಾರಣೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಉಲ್ಲಂಘನೆಗಳನ್ನು ಗಮನಿಸಿದರೆ, ಸಾರ್ವಜನಿಕರು 901 ರ ಹೆಲ್ಪ್ ಲೈನ್ ಸಂಖ್ಯೆಯನ್ನು ಬಳಸಿ ಪೋಲಿಸರಿಗೆ ತಿಳಿಸಬಹುದು.ಮಾಹಿತಿಯನ್ನು ನೀಡುವವರ ವಿವರಗಳನ್ನು ರಹಸ್ಯವಾಗಿರಿಸಲಾಗುವುದು ಎಂದು ಅವರು ಹೇಳಿದರು.
ದುಬೈ ಪೊಲೀಸ್ ಸ್ಟೇಷನ್ ಮ್ಯಾನೇಜರ್, ಬ್ರಿಗೇಡಿಯರ್ ಅಹ್ಮದ್ ತಾನಿ ಬಿನ್ ಗುಲೈತ, ದುಬೈ ಪೊಲೀಸ್ ಲೆಫ್ಟಿನೆಂಟ್ ಹ್ಯಾಪಿನೆಸ್ ಕೇಂದ್ರದ ಲಫ್.ಕರ್ನಲ್ ಮುಹಮ್ಮದ್ ಸಾಲೆಂ ಅಲ್ ಮಹಿರಿ, ಫೈಝಲ್ ಬದೈವಿ (ದುಬೈ ಮುನಿಸಿಪಾಲಿಟಿ), ಜಮೀಲಾ ಹುಸೈನ್ ಅಲ್ ಬಲೂಶಿ (ಎಕ್ಸಲೆನ್ಸ್ ಕಾರ್ಪೊರೇಟ್ ಗುಂಪು), ಹನಾನ್ ಅಲ್ ಸಮ್ಮಾಕ್ ಮುಂತಾದವರು ಉಪಸ್ಥಿತರಿದ್ದರು.