janadhvani

Kannada Online News Paper

ಹಿರಿಯ ವಿದ್ವಾಂಸ ಅಬ್ದುಲ್ ಕರೀಂ ಮುಸ್ಲಿಯಾರ್ ಕುಂಬ್ರ ನಿಧನ

ಮಂಗಳೂರು: ಹಿರಿಯ ವಿದ್ವಾಂಸರಾದ ಅಬ್ದುಲ್ ಕರೀಂ ಮುಸ್ಲಿಯಾರ್ ಕುಂಬ್ರ (ಹಾಫಿಝ್ ವಹೀದ್ ನ‌ಈಮಿ ಅವರ ತಂದೆ) ಇಂದು ಸಂಜೆ ತಲಪಾಡಿ, ಕೆಸಿ ರೋಡ್‌ನಲ್ಲಿ ಅವರ ಅಳಿಯ ಬಶೀರ್ ಅಹ್ಸನಿ ತೋಡಾರ್ ಅವರ‌ ವಸತಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ಪ್ರಾಯವಾಗಿತ್ತು.

ಬಹ್ರುಲ್ ಉಲೂಂ ಒ.ಕೆ ಉಸ್ತಾದರ ಶಿಷ್ಯರಾದ ಇವರು ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಸಹಪಾಠಿ (ಶರೀಕ್) ಕೂಡಾ ಆಗಿದ್ದರು, ಕೇರಳ ಕರ್ನಾಟಕದ ಹಲವಾರು ಮೊಹಲ್ಲಾಗಳಲ್ಲಿ ದಶಕಗಳ ಕಾಲ ದೀನೀ ಸೇವೆಗೈದ ಓರ್ವ ಸೂಫಿವರ್ಯರಾಗಿದ್ದರು. ಅಲ್ಲಾಹು ಅವರಿಗೆ ಮಗ್ಫಿರತ್ ನೀಡಲಿ-ಅಮೀನ್.

ಅವರ ಅಗಲಿಕೆಗೆ ಸಂತಾಪ ಸೂಚಿಸಿರುವ ಡಾ.. ಎಮ್ಮೆಸ್ಸೆಂ ಝೈನೀ ಕಾಮಿಲ್ ಸಖಾಫಿಯವರು ಎಲ್ಲರೂ ವಿಶೇಷ ದುಆ ನಡೆಸುವಂತೆ ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com