janadhvani

Kannada Online News Paper

ಯುಎಇ ಅರಬ್ ದೇಶಗಳಲ್ಲಿ ಸುರಕ್ಷಿತ ವಾಸ ಯೋಗ್ಯ ದೇಶ: ಸಮೀಕ್ಷೆ

ಅಬುಧಾಬಿ:ಯುಎಇ ಅರಬ್ ದೇಶಗಳಲ್ಲಿ ಸುರಕ್ಷಿತವಾಗಿ ವಾಸಿಸಲು ಅತ್ಯುತ್ತಮ ದೇಶವಾಗಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಹತ್ತನೇ ವಾರ್ಷಿಕ ಅರಬ್ ಯೂತ್ ಸಮೀಕ್ಷೆಯಲ್ಲಿ ಭಾಗವಹಿಸಿದವರು ಯುಎಇ ಅರಬ್ ದೇಶಗಳಲ್ಲಿ ಸುರಕ್ಷಿತವಾಗಿ ವಾಸಿಸಲು ಅತ್ಯುತ್ತಮ ದೇಶವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.16 ರಾಷ್ಟ್ರಗಳ ಯುವ ಸಮೂಹ ಯುಎಇ ಅತ್ಯುತ್ತಮ ದೇಶವೆಂದು ಸೂಚಿಸಿದೆ. ಭರವಸೆ ಮತ್ತು ಆತಂಕದ ಒಂದು ದಶಕ ಎಂಬ ವಿಷಯದಲ್ಲಿ ಸರ್ವೇ ನಡೆಸಲಾಗಿತ್ತು.ಯೂತ್ ಸರ್ವೇಯಲ್ಲಿ ಸತತ ಏಳನೇ ವರ್ಷವೂ ಅತ್ಯುತ್ತಮ ದೇಶವಾಗಿ ಆಯ್ಕೆಗೊಂಡಿದೆ.ಸಮೀಕ್ಷೆಯಲ್ಲಿ ಭಾಗವಹಿಸಿದ ಯುವ ಸಮೂಹವು ಯುನೈಟೆಡ್ ಅರಬ್‌ನ್ನು ಅನುಕರಿಸುವಂತೆ ಬೆಟ್ಟುಮಾಡಿದ್ದಾರೆ.

ಯುಎಇ ಎಲ್ಲರಿಗಾಗಿ ಇರುವ ದೇಶವಾಗಿದೆ. ಅರಬ್ ಯುವಕರ ಕನಸುಗಳು ಹೆಚ್ಚು ಅಭಿವೃದ್ಧಿಗೊಳ್ಳಬೇಕು ಅದನ್ನು ಅಳಿಸಿ ಹಾಕದೆ ಉಳಿಸುವಂತಹ ಕೆಲಸವಾಗಬೇಕೆಂದು ತಾನು ಸರಕಾರಗಳೊಂದಿಗೆ ತಿಳಿಸುತ್ತಾ ಬಂದಿದ್ದೇನೆ ಎಂದು ಯುಎಇ ಉಪಾಧ್ಯಕ್ಷ, ಪ್ರಧಾನಮಂತ್ರಿ, ದುಬೈ ಆಡಳಿತಾಧಿಕಾರಿ ಶೈಖ್ ಮುಹಮ್ಮದ್ ಬಿನ್ ರಾಶಿದ್  ಆಲ್ ಮಕ್ತೂಂ ಟ್ವೀಟಿಸಿದ್ದಾರೆ.

ಉನ್ನತ ಉದ್ಯೋಗಾವಕಾಶಗಳಿಗೆ ಆಧುನಿಕ ತಂತ್ರಜ್ಞಾನಗಳ ಮೂಲಕ ಪ್ರವೇಶ ಪಡೆಯಲು ಯುಎಇ ಅತ್ಯುತ್ತಮ ಎಂದು ಸರ್ವೇಯಲ್ಲಿ ಭಾಗವಹಿಸಿದವರು ಅಭಿಪ್ರಾಯ ಪಟ್ಟಿದ್ದಾರೆ.

ಸಮೀಕ್ಷೆಯನ್ನು ಜನವರಿ 21 ರಿಂದ ಫೆಬ್ರವರಿ 20 ರವರೆಗೆ ನಡೆಸಲಾಗಿತ್ತು. ಅರಬ್ ದೇಶದ ಪ್ರತೀ ರಾಜ್ಯಗಳಿಂದ ವಿವಿಧ ಕ್ಷೇತ್ರಗಳ ಸುಮಾರು 200 ಯುವ ಜನರನ್ನು ಒಗ್ಗೂಡಿಸಿಯಾಗಿತ್ತು ಸಮೀಕ್ಷೆ.

ಅಬುಧಾಬಿ ಮತ್ತು ದುಬೈ ಅನುಕ್ರಮವಾಗಿ ಮೊದಲ ಸ್ಥಾನದಲ್ಲಿದ್ದು ಶೇಕಡಾ 40 ಜನರು ಬೆಂಬಲಿಸಿದ್ದರು.ಅದೇ ರೀತಿ ಎರಡನೇ ಸ್ಥಾನವನ್ನು ಶಾರ್ಜಾ ಪಡೆದಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ ಜನರ ಪೈಕಿ  ಶೇಕಡಾ 20 ಮಂದಿ ಶಾರ್ಜಾವನ್ನು ಬೆಂಬಲಿಸಿದ್ದಾರೆ.

error: Content is protected !! Not allowed copy content from janadhvani.com