ಬೆಂಗಳೂರು: ಸಂಸ್ಕೃತಿಯ ನೆಲೆಬೀಡಾಗಿರುವ ಕರುನಾಡು ಕೋಮುವಾದಗಳಿಂದ ತತ್ತರಿಸಿ ಹೋಗಿವೆ. ಅದನ್ನು ಸಂಪೂರ್ಣ ನಿರ್ನಾಮ ಗೊಳಿಸುವುದಕ್ಕೆ ಸರ್ಕಾರವು ಮೊದಲ ಆದ್ಯತೆ ನೀಡಬೇಕಿದೆಯೆಂದು SKSSF ರಾಜ್ಯ ನಾಯಕ, ಕರ್ನಾಟಕ ಭಾವೈಕ್ಯತಾ ಪರಿಷತ್ ದ.ಕ ಜಿಲ್ಲಾದ್ಯಕ್ಷ ಇಕ್ಬಾಲ್ ಬಾಳಿಲ ಆಗ್ರಹಿಸಿದ್ದಾರೆ.
ಅವರು ಇಂದು ಮುಖ್ಯಮಂತ್ರಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಪ್ರತೇಕವಾಗಿ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ, ಆರೋಗ್ಯ, ಸ್ವಚ್ಚತೆ, ಧಾರ್ಮಿಕ ಆಚರಣೆಗಳ ಮೂಲಕ ಅತ್ಯಂತ ಗೌರವ ಉಳಿಸಿಕೊಂಡ ಜಿಲ್ಲೆ. ಆದರೆ ಕೆಲವು ವರ್ಷಗಳಿಂದ ಕೋಮುವಾದ ಮತ್ತು ಮಾದಕ ವ್ಯಸನವು ವ್ಯಾಪಕವಾಗಿ ಹರಡಿ ಜಿಲ್ಲೆಯನ್ನು ತಲೆತಗ್ಗಿಸುವಂತೆ ಮಾಡಿದೆ.
ಇದರಿಂದ ಸಮಾಜ ಹೊರ ಬರಬೇಕಾದದ್ದು ಕಾಲದ ಬೇಡಿಕೆಯಾಗಿವೆ. ಆದ್ದರಿಂದ ಸರಕಾರವು ಸೌಹಾರ್ದತೆಗಾಗಿ ಹೆಚ್ಚಿನ ಪ್ರಯತ್ನಗಳನ್ನು ನಡೆಸಬೇಕಾಗಿದೆ.
ಸೇವಾರಂಗದಲ್ಲಿ ಕ್ರಾಂತಿಯ ಹೆಜ್ಜೆ ಹಾಕಿರುವ SKSSF ಸಂಘಟನೆಯು ಸೌಹಾರ್ದತೆಯ ಉಳಿವಿವಾಗಿ ಪ್ರತೀ ವರ್ಷವೂ ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ
ಪ್ರತೇಕವಾಗಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನದಂದು ಸಾವಿರಾರು ಜನರನ್ನು ಸೇರಿಸಿ ಅದ್ಭುತ ಕಾರ್ಯಕ್ರಮ ನೀಡುವ ಮೂಲಕ ಕೋಮುವಾದ ಮಾದಕ ವ್ಯಸನ ನಿರ್ನಾಮಕ್ಕಾಗಿ ಪ್ರಯತ್ನಿಸಲಾಗಿದೆ. ಆದರೂ ಸಂಪೂರ್ಣ ಕಡಿವಾಣ ಬೀಳಬೇಕಾದ ಅನಿವಾರ್ಯತೆಯಿದೆ.
ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾದದ್ದು ಸರಕಾರದ ಜವಾಬ್ದಾರಿಯಾಗಿರುತ್ತದೆ. ಅದಕ್ಕಾಗಿ ಪ್ರತೇಕ ನಿಗಮಗಳನ್ನು ರಚಿಸುವಂತೆಯೂ ಮನವಿಯಲ್ಲಿ ಕೋರಲಾಗಿವೆ. ಹೊಸ ಸರಕಾರದ ಮೇಲೆ ಜನರಿಗೆ ತುಂಬಾ ನಿರೀಕ್ಷೆಯಿದೆ. ನಿರೀಕ್ಷೆಯಂತೆ ಮುನ್ನಡೆಯಲು ಮನವಿ ನೀಡಿರುತ್ತಾರೆ.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?