ಪ್ರಖ್ಯಾತ ವಾಗ್ಮಿ ಬಹು ನೌಫಲ್ ಸಖಾಫಿ ಕಳಸ ರವರ ನೇತೃತ್ವದಲ್ಲಿ ನಡೆಯುವ ಮುಹ್ಯಿಸ್ಸುನ್ನ ದರ್ಸ್ ಮೂಡುಬಿದಿರೆ ಇದರ ದಶವಾರ್ಷಿಕ ಮಹಾ ಸಮ್ಮೇಳನವು ದಿನಾಂಕ 26/04/2023 ರಂದು ಸಾಯಂಕಾಲ ಮೂಡುಬಿದಿರೆ ಲಾಡಿ ಸಮೀಪದ ಧಿಕ್ರಾ ಕ್ಯಾಂಪಸ್ ನಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ.
ಪ್ರಸ್ತುತ ಸಮ್ಮೇಳನದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಪ್ರಗಲ್ಫ ವಿದ್ವಾಂಸರು ಬಾಗವಹಿಸಲಿದ್ದಾರೆ.
ಅಲ್ಲದೆ ವಿಶೇಷವಾಗಿ ಸರಿಸಾಟಿಯಿಲ್ಲದ ಸುಪ್ರಸಿದ್ಧ ವಾಗ್ಮಿ ಧಾರ್ಮಿಕ ವಿದ್ವಾಂಸ ಬಹುಮಾನ್ಯರಾದ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಕೇರಳ ಈ ಸಮ್ಮೇಳನದಲ್ಲಿ ಭಾಗವಹಿಸಿ ತನ್ನ ಅಪ್ರತಿಮ ಪ್ರಭಾಷಣವನ್ನು ದಾರೆಯರೆದು ಜನ ಮನಸ್ಸುಗಳನ್ನು ಪುಲಕಿತಗೊಳಿಸಲಿದ್ದಾರೆ.
ಆದ್ದರಿಂದ ಈ ಸಮ್ಮೇಳನವನ್ನು ಸಂಪೂರ್ಣ ಯಶಸ್ವಿ ಗೊಳಿಸಬೇಕೆಂದು ಸ್ವಾಗತ ಸಮಿತಿ ಚೇರ್ಮನ್ ಬಹು ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ ಹಾಗೂ ಕಾರ್ಯಾಧ್ಯಕ್ಷ ಅಬ್ದುಸ್ಸಲಾಮ್ ಮದನಿ ಗುಂಡುಕಲ್ಲು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:- ಅಬ್ದುಲ್ ಲತೀಫ್ ಕೆರೆಬಳಿ