ಉಜಿರೆ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ರಾಜ್ಯ ಸಮಿತಿಗೆ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು. ಮಾರ್ಚ್ 18,19 ದಿನಾಂಕಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಮಲ್ಜಅ್ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಬೃಹತ್ ಖಿಯಾದ ಪ್ರತಿನಿಧಿ ಸಮಾವೇಶ ಹಾಗೂ ರಾಜ್ಯ ಕೌನ್ಸಿಲ್ ಸಭೆಯಲ್ಲಿ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
2023-2025 ರ ಸಾಲಿನ ನೂತನ ಅಧ್ಯಕ್ಷರಾಗಿ ಹಾಫಿಝ್ ಮುಹಮ್ಮದ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಕೊಪ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಫ್ವಾನ್ ಚಿಕ್ಕಮಗಳೂರು ಹಾಗೂ ಕೋಶಾಧಿಕಾರಿಯಾಗಿ ಕೆ.ಎಂ ಮುಸ್ತಫಾ ನಈಮಿ ಹಾವೇರಿ ರವರನ್ನು ಆಯ್ಕೆ ಮಾಡಲಾಯಿತು.
ಮುಹಮ್ಮದ್ ಅಲಿ ತುರ್ಕಳಿಕೆ, ಜುನೈದ್ ಸಖಾಫಿ ಚಿತ್ರದುರ್ಗ, ಅನ್ವರ್ ಅಸ್‌ಅದಿ ಹಾಸನ, ಮುಜೀಬ್ ಕೊಡಗು, ಶಿಹಾಬ್ ಬೆಂಗಳೂರು, ಶರೀಫ್ ಬೆರ್ಕಳ ದಕ್ಷಿಣ ಕನ್ನಡ, ರಖೀಬ್ ಉಡುಪಿ, ಸಾದಾತ್ ಶಿವಮೊಗ್ಗ, ಸಯ್ಯಿದ್ ಅತ್ಹರ್ ಸಖಾಫಿ ಲಕ್ಷ್ಮೇಶ್ವರ, ಉಬೈದುಲ್ಲಾ ಮಂಗಳೂರು, ಕೆಕೆ ಅಶ್ರಫ್ ಸಖಾಫಿ ದಾವಣಗೆರೆ ರವರನ್ನು ನೂತನ ಸಮಿತಿಯ ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಯಿತು.
ನಿಕಟಪೂರ್ವ ಅಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದರು. ಕೆಸಿರೋಡ್ ಹುಸೈನ್ ಸಅದಿ, ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಅಬ್ದುರ್ರಶೀದ್ ಝೈನಿ ಕಾಮಿಲ್, ಅಬ್ದುಲ್ ಹಮೀದ್ ಬಜ್ಪೆ, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ರಾಜ್ಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ,ವಂದಿಸಿದರು.