janadhvani

Kannada Online News Paper

ಯುನೈಟೆಡ್ ವೆಲ್ಫೇರ್ ಫೌಂಡೇಶನ್ 9th ಬ್ಲಾಕ್ – ನೂತನ ಸಾರಥಿಗಳು

ಯುನೈಟೆಡ್ ವೆಲ್ಫೇರ್ ಫೌಂಡೇಶನ್ ಇದರ ವಾರ್ಷಿಕ ಮಹಾಸಭೆಯು “ಪ್ರವಾಸಿ ಸಂಗಮ” ಎಂಬ ನಾಮದಲ್ಲಿ ದಿನಾಂಕ 16/03/2023 ರಂದು ಇರ್ಷಾದ್ B.K ಯವರ ಅಧ್ಯಕ್ಷತೆಯಲ್ಲಿ (Jawan Oasis Resort, Safwa) ಇಸ್ತಿರಾದಲ್ಲಿ ನಡೆಯಿತು.

ಈ ಸಭೆಯಲ್ಲಿ ಮಾಸ್ಟರ್ ಮುಹಮ್ಮದ್ ಹಿಫಾಝ್ ಹಫೀಝ್ ರವರು ಖಿರಾಅತ್ ಪಾರಾಯಣ ನಡೆಸಿದರು. ಸಾದಿಖ್ NGC ರವರ ದುವಾ ನಡೆಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಹಾಗೂ ನೆರೆದಿರುವವರಿಗೆ ಸಂಘದ ಅಡ್ವೈಸರ್ ನಾಸಿರ್ ರಿಯಾದ್ ರವರು ತುಂಬು ಹೃದಯದಿಂದ ಸ್ವಾಗತಿಸಿದರು.

ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಝುಬೈರ್ ಮತ್ತು ಊರಿನ ಉಸ್ತುವಾರಿಯಾದ ರಿಝ್ವಾನ್ ರವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಝುಬೈರ್ ರವರು ಮುಖ್ಯ ಅತಿಥಿ ಬಾಷಣವನ್ನು ನಡೆಸಿದರು.

ನಂತರ ಝುಬೈರ್ ಇವರ ಸಭಾಧ್ಯಕ್ಷದ ಮೂಲಕ ಮಹಾಸಭೆಯನ್ನು ನಡೆಸಲಾಯಿತು. ಮಹಾಸಭೆಯ ಭಾಗವಾದ ವಾರ್ಷಿಕ ವರದಿಯನ್ನು ಜೊತೆ ಕಾರ್ಯದರ್ಶಿಯಾದ ಫಿರೋಝ್ ರವರು ಮಂಡಿಸಿದರು.

ಅದೇ ರೀತಿ ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿಯಾದ ಸಂಶೀರ್ ರವರು ಸಭೆಯಲ್ಲಿ ವಾಚಿಸಿದರು.

ಸಭಾಧ್ಯಕ್ಷರಾದ ಝುಬೈರ್ ರವರ ನೇತೃತ್ವದಲ್ಲಿ 15 ಮಂದಿ ಕಮಿಟಿ ಸದಸ್ಯರನ್ನೊಳಗೊಂಡ ಹೊಸ ಸಮಿತಿಯನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು:
ಇರ್ಷಾದ್ B.K

ಉಪಾಧ್ಯಕ್ಷರು :
ಸಲೀಂ ಖೋಬರ್
ಫಾರೂಖ್ ಜುಬೈಲ್

ಪ್ರ. ಕಾರ್ಯದರ್ಶಿ
ಸಂಶೀರ್ ಅಬ್ದುಲ್ ರೆಹಮಾನ್

ಜೊತೆ ಕಾರ್ಯದರ್ಶಿ
ಸಾದಿಖ್ NGC

ಕೋಶಾಧಿಕಾರಿ
ರಿಝ್ವಾನ್ B.K

ದುಬೈ ಉಸ್ತುವಾರಿ
ಜಾವೇದ್ ದುಬೈ

ಕಾರ್ಯಕಾರಿಣಿ ಸಮಿತಿ ಸದಸ್ಯರು:
1. ಸತ್ತಾರ್
2. ನಾಸಿರ್ ರಿಯಾದ್
3. ಹಫೀಝ್
4. ಆಸಿಫ್ ಬಾವ ಖೋಬರ್
5. ನಝರುದ್ದೀನ್
6. ಶಾಕೀರ್
7. ಅಲ್ತಾಫ್
8. ನೌಫಲ್ K.M

✍️ ಸಂಶೀರ್ ಅಬ್ದುಲ್ ರೆಹಮಾನ್
(ಪ್ರ. ಕಾರ್ಯದರ್ಶಿ U.W.F 9th Block)

error: Content is protected !! Not allowed copy content from janadhvani.com