janadhvani

Kannada Online News Paper

ಕಾಟಿಪಳ್ಳ ಅಸೋಸಿಯೇಷನ್ ದಮ್ಮಾಂ: ಈಸ್ಟರ್ನ್ ಝೋನ್ ಅಧ್ಯಕ್ಷರಾಗಿ ಮುಸ್ತಫ ಇಬ್ರಾಹೀಂ ಆಯ್ಕೆ

ದಮ್ಮಾಮ್: ಕಾಟಿಪಳ್ಳ ಮುಸ್ಲಿಂ ಯೂತ್ ಎಸೋಸಿಯೇಷನ್ (ಕೆಎಂವೈಎ) ಈಸ್ಟರ್ನ್ ಝೋನ್ ವಾರ್ಷಿಕ ಮಹಾಸಭೆ 17, ಮಾರ್ಚ್ 2023 ಶುಕ್ರವಾರ ದಮ್ಮಾಂನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ನೌಶಾದ್ ರಶೀದ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಇಸ್ಮಾಯೀಲ್ ಕಾಟಿಪಳ್ಳ ರವರ ದುಆ ದ ಬಳಿಕ ಆಹಿದ್ ಇಬ್ನ್ ಶಕೀಲ್ ಖಿರಾಅತ್ ಪಠಿಸಿದರು. ಸೈಫುಲ್ಲಾ ಮುಹ್ಯಿದ್ದೀನ್ ಸ್ವಾಗತಿಸಿದರು.

ಇಸ್ಮಾಯೀಲ್ ಇಬ್ನ್ ಸ್ವಾಲಿಹ್ ಉಸ್ತಾದ್ ರವರು ರಮಳಾನ್ ಸಂದೇಶದೊಂದಿಗೆ ಆ ಮಾಸವನ್ನು ಯಾವ ರೀತಿ ಕಾರ್ಯಗತಗೊಳಿಸಬೇಕು ಎಂಬುದರ ಬಗ್ಗೆ ವಿವರವಾಗಿ ವಿವರಿಸಿದರು.

ಮ್ಯಾನ್ ಆಫ್ ದಿ ಇಯರ್ ಅವಾರ್ಡ್ ನ್ನು ಸೈಫುಲ್ಲಾ ಮುಹ್ಯಿದ್ದೀನ್, ಮಾಸಿಕ ಸಭೆಗಳಲ್ಲಿ ಹೆಚ್ಚಿನ ಹಾಜರಾತಿ ಪಡೆದಿದ್ದಕ್ಕೆ ಪರ್ಫೆಕ್ಟ್ ಅಟೆಂಡನ್ಸ್ ಸರ್ಟಿಫಿಕೇಟ್ ನ್ನು ಶಕೀಲ್ ಆದಂ ಹಾಗೂ ಗೌರವಾರ್ಥವಾಗಿ ಕೆಎಂವೈಎ ಶ್ಲಾಘನೀಯ ಯೋಗ್ಯತಾ ಪತ್ರವನ್ನು ಮುಸ್ಥಫ ಇಬ್ರಾಹೀಂ ತನ್ನದಾಗಿರಿಸಿಕೊಂಡರು.

2023-24 ನೇ ಸಾಲಿಗೆ ನೂತನ ಸಮಿತಿಯನ್ನು ಸಂಘದ ಗೌರವಾಧ್ಯಕ್ಷ ಪಿ.ಎ. ಮುಹಮ್ಮದ್ ಬಶೀರ್ ರವರ ಉಸ್ತುವಾರಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಮುಸ್ಥಫ ಇಬ್ರಾಹೀಂ, ಗೌರವಾಧ್ಯಕ್ಷರಾಗಿ ನೌಶಾದ್ ರಶೀದ್, ಕೋಶಾಧಿಕಾರಿಯಾಗಿ ಪಿ.ಎಂ. ತಾಜುದ್ದೀನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಕಾಟಿಪಳ್ಳ ರವರನ್ನು ನೇಮಕಗೊಳಿಸಲಾಯಿತು.
ಉಪಾಧ್ಯಕ್ಷರಾಗಿ ನಿಯಾಝ್ ಅಹ್ಮದ್ ಮತ್ತು ಪಿ.ಎ. ಶಬೀರ್, ಜೊತೆ ಕಾರ್ಯದರ್ಶಿಗಳಾಗಿ ಸೈಫುಲ್ಲಾ ಮುಹ್ಯಿದ್ದೀನ್ ಮತ್ತು ತ್ವಾಹಿರ್ ಅಲೀ, ಉಪ ಕೋಶಾಧಿಕಾರಿಯಾಗಿ ಆಸಿಫ್ ಆಯ್ಕೆಗೊಂಡರು.

ಸಂಘಟನಾ ಕಾರ್ಯದರ್ಶಿಯಾಗಿ ಶಕೀಲ್ ಆದಂ, ಆಡಿಟರ್ ಆಗಿ ಅಬ್ದುಲ್ ಗಪ್ಪಾರ್, ಸಲಹಾ ಸಮಿತಿಗೆ ಪಿ.ಎ.ಮುಹಮ್ಮದ್ ಬಶೀರ್,ಪಿ.ಎಂ. ಆರಿಫ್,ನಝೀರ್ ಗುಲಾಂ, ಪಿ.ಎಚ್.ಇಖ್ಬಾಲ್, ಪಿ.ಎಂ.ಹನೀಫ್, ಪಿ.ಎ. ರಹ್ಮಾನ್ ಹಾಗೂ ಓರ್ಗನೈಝರ್ ಗಳಾಗಿ ಹಂಝ, ರಫೀಖ್,ಕಲಂದರ್,ಇಮ್ತಿಯಾಝ್,ಹಸನ್ ಸಈದ್ ಮತ್ತು 25 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.

ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮುಸ್ಥಫಾ ಇಬ್ರಾಹೀಂ ರವರು ಮಾತನಾಡುತ್ತಾ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ವಿದ್ದರೆ ಮಾತ್ರ ಅಭಿವ್ರಧ್ಧಿ ಸಾಧಿಸಲು ಸಾಧ್ಯ. ನಮ್ಮೊಂದಿಗೆ ಕೈ ಜೋಡಿಸಿ ಯಶಸ್ವಿಗೊಳಿಸಿರಿ ಎಂದು ವಿನಂತಿಸಿದರು.
ನೂತನ ಸಮಿತಿಗೆ ಶುಭಾಶಂಷೆ ಗೈದವರು:
ಹಸನ್ ಸಈದ್,ಹಂಝ, ಶಬೀರ್,ನಝೀರ್ ಮತ್ತು ಶಕೀಲ್.
ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ಧನ್ಯವಾದ ಗೈದರು.

error: Content is protected !! Not allowed copy content from janadhvani.com