ಕೊಝಿಕೋಡ್: ಸುನ್ನಿ ಐಕ್ಯತೆಯ ಕುರಿತು ಮಾತುಕತೆ ಮುಂದುವರೆಯುತ್ತಿದ್ದು, ಚರ್ಚೆ ಪ್ರಗತಿಯಲ್ಲಿದೆ ಎಂದು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ಈ ತಿಂಗಳ 4 ಮತ್ತು 5 ರಂದು ಕೋಝಿಕೋಡ್ ನಲ್ಲಿ ನಡೆಯಲಿರುವ ಕೇರಳ ಉಮಾರಾ ಸಮ್ಮೇಳನದ ಕುರಿತು ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ವರದಿಗಾರರ ಪ್ರಶ್ನೆಗಳಿಗೆ ಕಾಂತಪುರಂ ಉತ್ತರಿಸುತ್ತಿದ್ದರು.ಐಕ್ಯತೆ ಚರ್ಚೆಗಳು ಮುಂದುವರಿಯುತ್ತಿದೆ. ಆದಾಗ್ಯೂ, ಅದರ ವಿವರಗಳನ್ನು ಈಗ ಬಹಿರಂಗಪಡಿಸಲಾಗುವುದಿಲ್ಲ ಎಂದ ಅವರು, ವಿದ್ವಾಂಸರ ಎರಡು ಗುಂಪುಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಲಿರುವರೇ ಎಂಬ ಪ್ರಶ್ನೆಗೆ, ನಾವು ಶೀಘ್ರವಾಗಿ ಮುನ್ನೆಡೆ ಉಂಟಾಗಲು ಪ್ರಾರ್ಥಿಸೋಣ ಎಂದು ಕಾಂತಪುರಂ ಹೇಳಿದರು.
ವಖ್ಫ್ ಟ್ರಿಬ್ಯೂನಲ್ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗೆ ಮತ್ತೊಂದು ಗ್ರೂಪ್ ಮುಖ್ಯಮಂತ್ರಿಗೆ ದೂರು ನೀಡಿರುವುದರಿಂದ ಐಕ್ಯತೆ ಚರ್ಚೆಗೆ ತೊಂದರೆಯಿಲ್ಲ.ಸರ್ಕಾರವು ಟ್ರಿಬ್ಯೂನ್ ನಲ್ಲಿ ಸದಸ್ಯರನ್ನು ನಿರ್ಧರಿಸಿದ ಕಾರಣ ಐಕ್ಯತೆ ಮೇಲೆ ಪರಿಣಾಮ ಬೀರಬೇಕಾದ ಅಗತ್ಯವಿಲ್ಲ. ವಕ್ಫ್ ಟ್ರಿಬ್ಯೂನಲ್ ನೇಮಕಾತಿಯು ಸರ್ಕಾರದ ವಿಷಯವಾಗಿದೆ. ಆಯ್ಕ ಮಾಡಿದರೆ ಹೋಗುವೆನು.ಅದರ ಮೇಲೆ ಪ್ರಭಾವ ಬೀರಿದ್ದಲ್ಲಿ ಸರ್ಕಾರವು ಒಂದು ಕಾರ್ಯವನ್ನು ಮಾಡಬಲ್ಲದು ಎಂದು ನನಗೆ ತೋರುವುದಿಲ್ಲ.ವಕ್ಫ್ ಅದಾಲತ್ ಮತ್ತು ಐಕ್ಯತಾ ಚರ್ಚೆಯನ್ನು ಪರಸ್ಪರ ಬಂಧಿಸಬೇಡಿ ಎಂದು ಅವರು ಹೇಳಿದರು.
ಎರಡು ವಿಭಾಗ ನಿಶ್ಚಯಿಸಿದ ಪ್ರತಿನಿಧಿಗಳು ಸೇರಿ ಸಮಾಲೋಚನೆ ನಡೆಯುತ್ತಿದೆ,ಅದರ ವಿವರಗಳನ್ನು ಬಹಿರಂಗ ಪಡಿಸುವುದರಿಂದ ಐಕ್ಯತಾ ಚರ್ಚೆಯ ಮೇಲೆ ಪರಿಣಾಮ ಬೀರಲಿದೆ. ಚರ್ಚೆಯಲ್ಲಿ ಪ್ರಗತಿ ಇದೆ. ಮುಡಿಕೋಡು ಮಸೀದಿ ತೆರೆಯಲಾಗಿದ್ದು ಈ ಚರ್ಚಾ ಪ್ರಗತಿಯ ಭಾಗವಾಗಿದೆ.
ರಾಜ್ಯ ಸರ್ಕಾರದ ಸುನ್ನಿಗಳೊಂದಿಗಿನ ನಿಲುವಿನ ಕುರಿತು ಪ್ರಶ್ನಿಸಿದಾಗ ನಾವು ಒಳಿತನ್ನು ಮಾತ್ರ ಮಾಡುತ್ತೇವೆ ಆ ಕಾರಣಕ್ಕಾಗಿ ಎಲ್ಲಾ ಸರಕಾರಗಳೂ ಬೆಂಬಲ ನೀಡುತ್ತದೆ ಎಂದು ನಾಯಕರು ಹೇಳಿದರು. ಸರಕಾರ ಮಾಡುತ್ತಿರುವುದೆಲ್ಲವೂ ಸರಿಯೇ ಎಂದು ಪ್ರಶ್ನಿಸಿದಾಗ ಸುಮಾರು ಒಳ್ಳೆಯದನ್ನು ಮಾಡುತ್ತಿದೆ.ನಾವು ಪ್ರತೀಯೊಂದನ್ನು ಪೋಸ್ಟ್ ಮಾರ್ಟಮ್ ಮಾಡುವುದಿಲ್ಲ. ಇದು ರಾಜ್ಯದ ಜನರಿಂದ ನಿರ್ಧರಿಸಲ್ಪಡಬೇಕು.ಸರ್ಕಾರವು ಮುಸ್ಲಿಮ್ ಬೇಟೆ ಮುಂದುವರಿಸಿದೆ ಎಂಬ ಆರೋಪದ ನಿಜಾಂಶವನ್ನು ಪರಿಶೀಲಿಸಬೇಕಾಗಿದೆ. ಎಲ್ಲಾ ರಾಜಕೀಯ ವಿವಾದಗಳು ಮತ್ತು ಪಕ್ಷದ ಟೀಕೆಗಳನ್ನು ತಳ್ಳಿಹಾಕಲು ಅಥವಾ ಬೆಂಬಲಿಸಲು ಸಾಧ್ಯವಿಲ್ಲ ಪ್ರತಿಯೊಂದನ್ನೂ ವಿವರವಾಗಿ ಪರಿಶೀಲಿಸಬೇಕು.
ಸಾಮಾಜಿಕ ಮಾಧ್ಯಮಗಳ ಮೂಲಕ ಕರೆ ನೀಡಲಾದ ಹರತಾಳ ಸೂಕ್ತವಲ್ಲ. ಅದರ ಹೆಸರಿನಲ್ಲಿ ಉದ್ದೇಶಪೂರ್ವಕವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದರೆ, ಅದನ್ನೂ ಅಂಗೀಕರಿಸಲಾಗದು.ನಾವು ಎಲ್ಲಾ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧವಾಗಿದ್ದೇವೆ. ಭಯೋತ್ಪಾದನೆಯ ವಿರುದ್ದ ಯಾರೇ ಇದ್ದರೂ ಪ್ರೋತ್ಸಾಹಿಸಲಾಗುತ್ತದೆ.ಭಯೋತ್ಪಾದಕರ ವಿರುದ್ದ ಸಮಾವೇಶಕ್ಕೆ ಸಮ್ಮೇಳನ ಸಿದ್ಧವಾಗಲಿದೆ ಎಂದು ನಾಯಕರು ವಿವರಿಸಿದರು.
ಸುನ್ನಿಯೇತರರು ಭಯೋತ್ಪಾದನೆಯ ಹಿಂದಿದ್ದಾರೆ.ಕೇರಳದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿಯೂ, ಭಯೋತ್ಪಾದನೆಯನ್ನು ಸಲಫಿಗಳು ಬೆಳೆಸಿದ್ದಾರೆ.ಸೌದಿ ಸರ್ಕಾರ ಸಮೇತ ಸಲಫಿಗಳನ್ನು ತಿರಸ್ಕರಿಸಿದೆ, ಕೆಲವರ ವಿರುದ್ದ ಕಾನೂನು ಕ್ರಮಗಳನ್ನು ಕೈಗೊಂಡಿದೆ ಎಂದರು.
ತನ್ನ ಭಾಷಣಗಳಲ್ಲಿ ಮಹಿಳಾ ವಿರೋಧವಿದೆ ಎಂಬುದು ಆರೋಪ ಅಷ್ಟೇ. ಅದು ಈ ಹಿಂದೆಯೇ ಇತ್ತು.ಮಹಿಳೆಯರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಸ್ಲಾಂ ಧರ್ಮ ಮಹಿಳೆಯರಿಗೆ ಉನ್ನತ ಸ್ಥಾನವನ್ನು ನೀಡಿದೆ.ಅದನ್ನು ಭಾಷಣಗಳಲ್ಲಿ ಹೇಳುತ್ತೇನೆ. ಇಸ್ಲಾಂ ವಿರೋಧಿಸಿರುವ ಕಾರ್ಯವನ್ನು ವಿರೋಧಿಸಿದ್ದೇನೆ. ಅದು ಕುರ್‌ಆನ್ ಹೇಳಿದ ವಿಷಯವಾಗಿದೆ.ಅದನ್ನು ಜನರಿಗೆ ಬೋಧಿಸುತ್ತಲೇ ಇರಬೇಕು. ಹಾಗಾದರೆ ಮಾತ್ರ ಅಧಾರ್ಮಿಕತೆಯನ್ನು ಅಳಿಸಿ ಹಾಕಬಹುದು ಎಂದು ಕಾಂತಪುರಂ ವ್ಯಕ್ತ ಪಡಿಸಿದರು.