ದೋಹಾ: ಕಡಿಮೆ ವೇತನವಿರುವ ವಿದೇಶೀ ನೌಕರರ ಸಂಬಳವನ್ನು ಈ ವರ್ಷದ ಅಂತ್ಯದ ಒಳಗೆ ಕತಾರ್ ಹೆಚ್ಚಿಸುತ್ತದೆ ಎಂಬ ವಿಶ್ವಾಸವನ್ನು ಇಂಟರ್ ನ್ಯಾಷನಲ್ ಟ್ರೇಡ್ ಯೂನಿಯನ್ಸ್ ಕಾನ್ ಫೆಡರೇಷನ್ (ಐಟಿಯುಸಿ) ವ್ಯಕ್ತಪಡಿಸಿದೆ. ಐಟಿಯುಸಿ ಪ್ರಧಾನ ಕಾರ್ಯದರ್ಶಿ ಶರೋನ್ ಬರೋ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.
ಹೊಸ ಉದ್ಯೋಗದ ಸುಧಾರಣೆಗಳು ಮನೆ ಕಾರ್ಮಿಕರನ್ನೂ ಒಳಗೊಂಡಂತೆ ಎಲ್ಲಾ ಕೆಲಸಗಾರರನ್ನು ಒಳಗೊಳ್ಳಲಿದೆ. ಖತಾರ್ ಮನೆ ಕಾರ್ಮಿಕರಿಗಾಗಿ ಪ್ರತ್ಯೇಕ ಕಾನೂನು ಜಾರಿಗೊಳಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಕಾನೂನಿನಲ್ಲಿ ಮತ್ತಷ್ಟು ಸುಧಾರಣೆಗಳನ್ನು ಪರಿಗಣಿಸಲಾಗುವುದು. ಕೆಲಸಗಾರನು ಕಾರ್ಮಿಕ ಸಚಿವಾಲಯ ಅಥವಾ ಐಎಲ್ಓ ಕಚೇರಿಗೆ ದೂರು ನೀಡಬಹುದು. ಈ ದೂರುಗಳಿಗೆ ಪರಿಹಾರ ಕಾಣಲಾಗುವುದು ಅಥವಾ ಕಾರ್ಮಿಕ ವಿವಾದ ನಿರ್ಣಯ ಸಮಿತಿಗೆ ವರ್ಗಾಯಿಸಲಾಗುವುದು.
ಅಲ್ಲದೆ, 3 ವಾರಗಳಲ್ಲಿ ದೂರನ್ನು ಬಗೆಹರಿಸಲಾಗುವುದು. ಇದು ಈ ಸುಧಾರಣೆಗಳ ಪೈಕಿ ವಿಶೇಷ ಪರಿಗಣನೆಯಾಗಿದೆ ಎಂದು ಶರೋನ್ ಬರೋ ಹೇಳಿದರು. ದೇಶವನ್ನು ತೊರೆಯುವ ವಿದೇಶೀ ಕಾರ್ಮಿಕರಿಗೆ ಕಡ್ಡಾಯವಾಗಿರುವ ನಿರ್ಗಮನ ಪರವಾನಗಿಯನ್ನು ನಿಲ್ಲಿಸುವ ಘೋಷಣೆಯು ಶೀಘ್ರದಲ್ಲೇ ಬರಲಿದೆ. ನಿರ್ಗಮನ ಪರವಾನಿಗೆ ಬದಲಾಗಿ ಹೊಸ ವ್ಯವಸ್ಥೆಯನ್ನು ಅಳವಡಿಸಲು ಕಾನೂನು ಕ್ರಮ ಪೂರ್ಣಗೊಂಡಲ್ಲಿ ಎಕ್ಸಿಟ್ ಪರವಾನಗಿಯನ್ನು ನಿಲ್ಲಿಸಲಾಗುವುದು ಎಂದು ಬಾರೊ ಹೇಳಿದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ