ಡಿಸೆಂಬರ್ ಜನವರಿ ತಿಂಗಳು ಬಂತೆಂದರೆ ಶಾಲೆ ಕಾಲೇಜುಗಳಲ್ಲಿ ಸ್ಕೂಲ್ ಡೇ ಮತ್ತು ಪಿಕ್ ನಿಕ್ (School Day snd Picnic) ಹೋಗುವುದು ಸಾಮಾನ್ಯ. ಬಹುಷಃ ಕೊರೋನದ 2 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಆಗಿರಬೇಕು ಶಾಲೆ ಕಾಲೇಜುಗಳಲ್ಲಿ ಸ್ಕೂಲ್ ಡೇ ಪಿಕ್ ನಿಕ್ ನಂತಹಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಶಾಲೆ ಕಾಲೇಜುಗಳ ಕಲಿಕೆಯ ಮದ್ಯೆ ಸ್ವಲ್ಪ ಎಂಜಾಯ್ ಅಥವಾ ರಿಲಾಕ್ಸ್ ಬೇಕು, ಆದರೆ ಅದು ಅತಿಯಾಗಬಾರದು. ಹೌದು! ಕಾಲವು ತುಂಬಾ ಬದಲಾಗಿ ಬಿಟ್ಟಿದೆ ಮಕ್ಕಳು ನಮ್ಮ ಕೈ ತಪ್ಪಿ ಹೋಗುತ್ತಿದ್ದಾರೋ ಎಂಬ ಆತಂಕ ಹೆತ್ತವರಿಗೆ ತೀವ್ರವಾಗಿ ಕಾಡುತ್ತಿದೆ. ಅಷ್ಟಕ್ಕೂ ಪರಿಸರವೂ ಮಲಿನ ಗೊಂಡಿದೆ.ಯಾವ ಒಂದು ವಸ್ತುವನ್ನು ಮಕ್ಕಳಿಗೆ ನೀಡಬಾರದೆಂದು ಬಯಸಿದ್ದೆವೋ,ಆ ಒಂದು ವಸ್ತುವನ್ನು ಕೋರೋಣ ಎಂಬ ಮಾರಕ ರೋಗವು ನಮ್ಮ ಮಕ್ಕಳಿಗೆ ಕೊಡಲು ಅನಿವಾರ್ಯ ಗೊಳಿಸಿತು. ಆನ್ಲೈನ್ ತರಗತಿ ಹೆಸರಲ್ಲಿ ಮಕ್ಕಳಿಗೆ ನೀಡಲಾದ ಮೊಬೈಲ್ ಮಕ್ಕಳಲ್ಲಿ ಭಾರಿ ಪರಿಣಾಮ ಬೀರಿಸಿದ್ದು,ಸಾಕಷ್ಟು ಮಕ್ಕಳು ಮೊಬೈಲ್ ಮುಖಾಂತರ ತಪ್ಪು ದಾರಿಗೆ ಅಥವಾ ಮೊಬೈಲ್ ಚಟಕ್ಕೆ ಬಿದ್ದಿರುದು ನಾವೆಲ್ಲಾ ಗಮನಿಸಿದ ವಿಚಾರ.
ಮೊಬೈಲ್ ಗಿಂತಲೂ ಅಘಾತಕಾರಿ ವಿಚಾರವಾಗಿದೆ ಹದಿ ಹರೆಯದ ಮಕ್ಕಳು ಅಮಲು ಪದಾರ್ಥ(Drugs) ಸೇವನೆಗೆ ಬಲಿಯಾಗುತ್ತಿರುವುದು. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುದು ಎಂಬ ವಾರ್ತೆಗಳು ಕೇಳುವಾಗ ಅಘಾತವೆನಿಸುತ್ತದೆ. ಇತ್ತೀಚೆಗೆ ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಾಲಾ ಮಕ್ಕಳ ಬ್ಯಾಗ್ ಪರಿಶೀಲಿಸಿದಾಗ, ಗರ್ಭ ನಿರೋಧಕ ಮಾತ್ರೆ ಲಭಿಸಿತ್ತು, ನೆರೆಯ ರಾಜ್ಯ ಕೇರಳದಲ್ಲಿ ಮಕ್ಕಳ ಶಾಲಾ ಬ್ಯಾಗ್ ನಿಂದ ಡ್ರಗ್ಸ್ ಗಳನ್ನು ಶಾಲಾ ಅಧ್ಯಾಪಕರು ವಶಪಡಿಸಿಕೊಂಡಿದ್ದಾರೆ.
ವಿಶ್ವ ಸಂಸ್ಥೆ (united nations) ಇತ್ತೀಚೆಗೆ ಬಿಡುಗಡೆಗೊಳಿಸಿದ ವರದಿ ಪ್ರಕಾರ, ಡ್ರಗ್ಸ್ ಮಾಫಿಯಾದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ ಎಂಬ ಬೆಚ್ಚಿ ಬೀಳಿಸುವ ವರದಿಯನ್ನು ಪ್ರಕಟಿಸಿದೆ.
ಇದೀಗ ಡಿಸೆಂಬರ್ ಜನವರಿ ತಿಂಗಳುಗಳಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸ್ಕೂಲ್ ಡೇ ಪಿಕ್ ನಿಕ್ ಹೋಗುವುದು ಆರಂಭಗೊಂಡಿದೆ. ಇದರಿಂದ ಭಾರಿ ಅನಾಹುತಗಳು ಸಂಭವಿಸುತ್ತಿದ್ದು, ಹೆತ್ತವರು ತಮ್ಮ ಮಕ್ಕಳ ಬಗ್ಗೆ ತೀವ್ರ ಜಾಗ್ರತೆ ವಹಿಸಬೇಕಾಗಿದೆ.
ಕೆಲವು ದಿನಗಳ ಹಿಂದೆ ಕೇಳಿದ ಎರಡು ಪ್ರತ್ಯೇಕ ಘಟನೆಗಳು ಕೇಳುವಾಗ ಮೈ ಝಲ್ ಎನಿಸುತ್ತದೆ.ಇತ್ತೀಚೆಗೆ ಕಾಲೇಜ್ ಡೇ ನಡೆಯುತ್ತಿದ್ದ ಒಂದು ಕಾಲೇಜು ನಲ್ಲಿ ತಮ್ಮದೇ ತರಗತಿ ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಅವಳನ್ನು ಸಾಮೂಹಿಕವಾಗಿ ಅತ್ಯಾಚಾರ ಗೈದ ಪ್ರಕರಣ ಹಸಿಯಾಗಿರುವಾಗಲೇ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಶಾಲಾ ಪಿಕ್ ನಿಕ್ ಗೆಂದು ಕರೆದು ಕೊಂಡು ಹೋಗಿ ರಾತ್ರಿ ಸ್ವತಹ ಪ್ರಾಂಶುಪಾಲ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ರಾತ್ರಿ ಆಹಾರದಲ್ಲಿ ಅಮಲು ಪದಾರ್ಥ ಬೆರಸಿ ಆಕೆಯನ್ನು ಅತ್ಯಾಚಾರ ಗೈದ ಹೀನ ಕೃತ್ಯ ಬೆಳಕಿಗೆ ಬಂದಿದೆ.
ಸ್ಕೂಲ್ ಡೇ ಪಿಕ್ ನಿಕ್ ಕಲಿಸುವ ಪೋಷಕರೇ ಇತ್ತ ಗಮನಿಸಿ
▪ ನಿಮ್ಮ ಮಕ್ಕಳನ್ನು ಪ್ರವಾಸಕ್ಕೆ ಕಳಿಸುವುದು ಕಡ್ಡಾಯವಲ್ಲ,ಅಂದರೆ ಬದಲಾಗಿ ಶಾಲಾ ರಜಾ ದಿನಗಳಲ್ಲಿ ಕುಟುಂಬ ಸಹಿತ ತಮ್ಮ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ. ಇನ್ನು ಶಾಲಾ ಸಹವರ್ತಿಗಳೊಂದಿಗೆ ಹೋಗಬೇಕೆಂದರೆ ಹೆಣ್ಣು ಮಕ್ಕಳು ಮಾತ್ರ ವಿರುವ, ಟೀಚರ್ಸ್ ಗಳು ಒಟ್ಟಿಗಿರುವ ಬೆಳಿಗ್ಗೆ ಹೋಗಿ ಸಂಜೆ ವೇಳೆ ಮನೆ ತಲುಪುವ ಟೂರ್ ಆದ್ರೆ ಮಾತ್ರ ಕಳಿಸಿ.
▪️ರಾತ್ರಿ , ತಂಗುವಂತಹಾ ವಿದೂರ ಪ್ರಯಾಣಕ್ಕೆ ಕಳುಹಿಸಬೇಡಿ.
▪️ಮಕ್ಕಳ ಬ್ಯಾಗ್ ಪರಿಶೀಲಿಸಿ.
▪️ಹೋಗುವುದು ಸಾಮಾನ್ಯ ಪ್ರದೆಶವಾದರೆ ಸುಮ್ಮನೆ ಹಣ ವ್ಯರ್ಥ ಗೊಳಿಸದೆ ಈ ಹಿಂದೆ ನೋಡದ, ಹೋಗದ ಇತರ ಪ್ರದೇಶಗಳಿಗೆ ಕುಟುಂಬ ಸಮೇತ ಹೋಗಲು ಶ್ರಮಿಸುವುದು.
▪️ಸ್ಕೂಲ್ ಡೇ ಗೆ ಮಕ್ಕಳನ್ನು ಕಳುಹಿಸುವುದಾದರೆ ಮಕ್ಕಳೊಂದಿಗೆ ಹೆತ್ತವರು ಹೋಗಿ ಸಾಧ್ಯವಾದಷ್ಟು ಮಕ್ಕಳ ಜೊತೆ ಇರಲು ಶ್ರಮಿಸಿ.
▪️ಸ್ಕೂಲ್ ಡೇ ಗಳು ಹಗಲು ಸಮಯದಲ್ಲೇ ನಡೆಸಲು ಪೋಷಕರು ಆಡಳಿತ ಮಂಡಳಿಯೊಂದಿಗೆ ಒತ್ತಡ ಹೇರುವುದು, ರಾತ್ರಿ ವೇಳೆ ನಡೆಯುವ ಸ್ಕೂಲ್ & ಕಾಲೇಜು ಡೇ ಗಳಿಗೆ ಮಕ್ಕಳನ್ನು ಕಳುಹಿಸುವುದಿಲ್ಲವೆಂದು ಪಟ್ಟುಹಿಡಿಯುವುದು.
ಒಟ್ಟಿನಲ್ಲಿ ಸ್ಕೂಲ್ ಡೇ ಪಿಕ್ ನಿಕ್ ಹೆಸರಲ್ಲಿ ಕಾಲೇಜು ಅಥವಾ ಶಾಲಾ ಕ್ಯಾಂಪಸ್ನಲ್ಲಿ ನಡೆಯುವ ಅನಾಚಾರ ಮತ್ತುಅನಾಹುತಗಳಿಂದ ನಮ್ಮ ನಿಮ್ಮೆಲ್ಲರ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಎಲ್ಲಾ ಪೋಷಕರ ಮೇಲಿದೆ.
✍️ PKM ಉರುವಾಲು ಪದವು