janadhvani

Kannada Online News Paper

FIFA-2022 ಫುಟ್ಬಾಲ್ ವಿಶ್ವಕಪ್‌ಗೆ ಶೃಂಗಾರಗೊಂಡ ದೋಹಾ ಖತಾರ್

ಎರಡು ಮಿಲಿಯನ್ ಜನಸಂಖ್ಯೆಯೊಂದಿಗೆ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಮೊದಲ ಅರಬ್ ದೇಶವಾಗಿದೆ ಖತಾರ್

ವರದಿ: ಇಸ್ಹಾಕ್ ಸಿ.ಐ.ಫಜೀರ್(ಗಲ್ಫ್ ಕನ್ನಡಿಗ)

ದೋಹಾ: ಜಗತ್ತಿನ ಅಭಿವೃದ್ಧಿ ಹೊಂದಿದ ಹಾಗೂ ಶ್ರೀಮಂತ ದೇಶಗಳ ಸಾಲಿನಲ್ಲಿ ದೋಹಾ ಖತಾರ್ ಮೊದಲ ಸಾಲಿನಲ್ಲಿದೆ.
ಕಳೆದ ಹನ್ನೆರಡು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದ FIFA-2022 ರ ಫುಟ್ಬಾಲ್ ವಿಶ್ವಕಪ್‌ಗೆ ದೋಹಾ ಖತಾರ್ ಶೃಂಗಾರಗೊಂಡಿದೆ.ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.

ಎರಡು ಮಿಲಿಯನ್ ಜನಸಂಖ್ಯೆಯೊಂದಿಗೆ ಖತಾರ್ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಮೊದಲ ಅರಬ್ ದೇಶವಾಗಿದೆ.17 ನವೆಂಬರ್ 2010 ರಂದು, ಬ್ರೆಜಿಲ್ ಮತ್ತು ಅರ್ಜೆಂಟೀನಾ ನಡುವೆ ಸೌಹಾರ್ದ ಪಂದ್ಯವನ್ನು ಖತಾರ್ ಆಯೋಜಿಸಿತು.
ಈ ದಿನದಂದು‌ ಆಗಿನ FIFA ಅಧ್ಯಕ್ಷ ಸೆಪ್ ಬ್ಲಾಟರ್ ಖತಾರ್‌ನ ಪ್ರಗತಿಯನ್ನು ಶ್ಲಾಘಿಸಿ ಖತಾರ್‌ನಲ್ಲಿ ವಿಶ್ವಕಪ್ ಹೊಂದುವ ಕಲ್ಪನೆಯನ್ನು ಅನುಮೋದಿಸಿದರು.

ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾ ನಡುವಿನ ಕಠಿಣ ಸ್ಪರ್ಧೆಯನ್ನು ಸೋಲಿಸಿ ಖತಾರ್ 2022 ರ ಫುಟ್ಬಾಲ್ ವಿಶ್ವಕಪ್ ಕ್ರೀಡಾಕೂಟವನ್ನು ತನ್ನದಾಗಿಸಿಕೊಂಡಿದೆ.
ವಿಶ್ವದ ಅತಿದೊಡ್ಡ ಕ್ರೀಡಾಕೂಟವನ್ನು ಆಯೋಜಿಸುವ ಮಧ್ಯಪ್ರಾಚ್ಯದಲ್ಲಿ ಖತರ್ ದೇಶವು ಮೊದಲನೆಯದು.

FIFA ವಿಶ್ವ ಕಪ್ ಖತಾರ್ 2022
64 ಪಂದ್ಯಗಳಲ್ಲಿ 32 ತಂಡಗಳು ಸ್ಪರ್ಧಿಸಲಿವೆ.
ಅಂತಾರಾಷ್ಟ್ರೀಯ ಪುರುಷರ ಫುಟ್ಬಾಲ್ ಚಾಂಪಿಯನ್‌ಶಿಪ್ ವಿಶ್ವಕಪ್‌ಗಾಗಿ 32 ರಾಷ್ಟ್ರಗಳು ಪರಸ್ಪರ ಸ್ಪರ್ಧಿಸಲು ಸಿದ್ಧವಾಗಿವೆ. ವಿಶ್ವಕಪ್‌ನ ಮೊದಲ ಮತ್ತು ಆರಂಭಿಕ ಪಂದ್ಯವು 20 ನವೆಂಬರ್ 2022 ರಂದು ಸಂಜೆ 3:30 ಕ್ಕೆ ಅಲ್ ಬೇಟ್ ಸ್ಟೇಡಿಯಂನಲ್ಲಿ ನಡೆಯಲಿದೆ.ಡಿಸೆಂಬರ್ 18ಖತಾರ್ ರಾಷ್ಟ್ರೀಯ ದಿನಾಚರಣೆಯಂದು ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯಾಟ ನಡೆಯಲಿದೆ.

ವಿಶ್ವಕಪ್ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ವಿಶೇಷ “ಹಯ್ಯ ಕಾರ್ಡ್” ‌ನ್ನು ಖತಾರ್ ಸರಕಾರ ಬಿಡುಗಡೆ ಮಾಡಿರುತ್ತದೆ.
ಇದು ಖತಾರ್ ಸರ್ಕಾರ ಫುಟ್ಬಾಲ್ ಪ್ರೇಕ್ಷಕರಿಗೆ ನೀಡುವ ಒಂದು ರೀತಿಯ ದಾಖಲೆಯಾಗಿದ್ದು, ಈ ಕಾರ್ಡ್ ಮೂಲಕ ಯಾವುದೇ ಫಿಫಾ ವಿಶ್ವಕಪ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಬಹುದಾಗಿದೆ.

ಪ್ರೇಕ್ಷಕರು ಈ ಕಾರ್ಡ್ ಮತ್ತು ಪಂದ್ಯದ ಟಿಕೆಟ್‌ಗಳನ್ನು ಹೊಂದಿದ್ದರೆ ಮಾತ್ರ ಕ್ರೀಡಾಂಗಣದ ಒಳಗೆ ಅನುಮತಿಸಲಾಗುತ್ತದೆ.
ಆದಾಗ್ಯೂ, ಪ್ರತಿ ಪಂದ್ಯಕ್ಕೂ ಪ್ರತ್ಯೇಕ ಕಾರ್ಡ್ ಅಗತ್ಯವಿಲ್ಲ. ಎಲ್ಲಾ ಪಂದ್ಯಗಳಿಗೆ ಒಂದು ಕಾರ್ಡ್ ಮಾತ್ರ ಮಾನ್ಯವಾಗಿರುತ್ತದೆ. ಹಯಾ ಕಾರ್ಡ್ ಹೊಂದಿರುವವರು 2 ತಿಂಗಳ ಕಾಲ ಕತಾರ್‌ನಲ್ಲಿ ಉಳಿಯಬಹುದು. ಫಿಫಾ ವಿಶ್ವಕಪ್‌ಗೆ ಹತ್ತು ದಿನಗಳ ಮೊದಲು ಇದರ ಗಡುವು ಪ್ರಾರಂಭವಾಗುತ್ತದೆ.
ಈ ದಿನಗಳಲ್ಲಿ ಪ್ರೇಕ್ಷಕರು ಯಾವಾಗ ಬೇಕಾದರೂ ಕತಾರ್‌ಗೆ ಬರಬಹುದು ಮತ್ತು ಬೇಕಾದಾಗ ಹಿಂದಿರುಗಬಹುದಾಗಿದೆ.

ಖತಾರಿನ್ ನಿಕಟ ಪೂರ್ವ ದೊರೆ
ಶೈಖ್ ಮುಹಮ್ಮದ್ ಬಿನ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರ ಆಡಳಿತಾವಧಿಯಲ್ಲಿ FIFA-2022 ವಿಶ್ವಕಪ್ ಪಂದ್ಯಾಟಕ್ಕೆ ಅನುಮೋದನೆ ನೀಡಲಾಗಿತ್ತು.

error: Content is protected !! Not allowed copy content from janadhvani.com