janadhvani

Kannada Online News Paper

ಇನ್ಮುಂದೆ ಸೌದಿ ವೀಸಾ ಸ್ಟಾಂಪಿಂಗ್ ಗಾಗಿ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಿಲ್ಲ

ಪ್ರಯಾಣಿಕರು ದಾಖಲೆ ಒದಗಿಸುವುದಕ್ಕಾಗಿ ಪಡುವ ಪ್ರಯಾಸ ತಪ್ಪುವುದಲ್ಲದೇ ಅನೇಕ ಪ್ರಯೋಜನವಾಗಲಿದೆ

ನವದೆಹಲಿ: ಸೌದಿ ಅರೇಬಿಯಾಕ್ಕೆ ಹೊಸ ಉದ್ಯೋಗ ವೀಸಾಗಳನ್ನು ಸ್ಟಾಂಪಿಂಗ್ (Saudi Visa Stamping) ಮಾಡಲು ಭಾರತದಲ್ಲಿ ಸೌದಿ ಕಾನ್ಸುಲೇಟ್‌ಗಳು ಈ ಹಿಂದೆ ವಿಧಿಸಿದ್ದ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರದ ಅಗತ್ಯವನ್ನು ಹಿಂಪಡೆಯಲಾಗಿದೆ.

ಸೌದಿ ಅರೇಬಿಯಾ(Saudi Arabia) ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ದೃಷ್ಟಿಯಿಂದ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ನವದೆಹಲಿಯಲ್ಲಿರುವ ಸೌದಿ ರಾಯಭಾರ ಕಚೇರಿ(Saudi Embassy) ಟ್ವೀಟ್ ಮಾಡಿದೆ.

ವೀಸಾಕ್ಕಾಗಿ ಪೋಲೀಸ್ ಕ್ಲಿಯರೆನ್ಸ್ ಅಗತ್ಯತೆ ನಿಯಮ ತೆಗೆದಿರುವುದು ತ್ವರಿತ ಅರ್ಜಿ ಪ್ರಕ್ರಿಯೆ, ಪ್ರವಾಸ ಸಂಸ್ಥೆಗಳಿಂದ ಸುಲಭ ನಿರ್ವಹಣೆ ಮತ್ತು ಪ್ರವಾಸಿಗರು ದಾಖಲೆ ಒದಗಿಸುವುದಕ್ಕಾಗಿ ಪಡುವ ಪ್ರಯಾಸ ತಪ್ಪುವುದಲ್ಲದೇ ಅನೇಕ ಪ್ರಯೋಜನವಾಗಲಿದೆ.

ಸೌದಿ ಅರೇಬಿಯಾದಲ್ಲಿ ಶಾಂತಿಯುತವಾಗಿ ವಾಸಿಸುತ್ತಿರುವ ಎರಡು ಮಿಲಿಯನ್ ಭಾರತೀಯ ನಾಗರಿಕರ ಬಗ್ಗೆ ರಾಯಭಾರ ಕಚೇರಿ ಪ್ರಶಂಸೆ ಕೂಡ ವ್ಯಕ್ತಪಡಿಸಿದೆ.

error: Content is protected !! Not allowed copy content from janadhvani.com