ರಿಯಾದ್: ವಿವಿಧ ಉದ್ದೇಶಕ್ಕಾಗಿ ದೇಶಕ್ಕೆ ಪ್ರವೇಶಿಸುವ ಸಿಂಗಲ್ ಎಂಟ್ರಿ ವಿಸಿಟ್ ವೀಸಾಗಳ(Single Entry Visit Visa) ಮಾನ್ಯತೆಯನ್ನು ಸೌದಿ ಕ್ಯಾಬಿನೆಟ್ ಮೂರು ತಿಂಗಳುಗಳಾಗಿ ತಿದ್ದುಪಡಿ ಮಾಡಿದೆ.
ಪ್ರಸ್ತುತ, ಏಕ ಪ್ರವೇಶ ಭೇಟಿ ವೀಸಾಗಳ ಕಾಲಾವಧಿಯು 30 ದಿನಗಳು ಮತ್ತು ಬಹು ಪ್ರವೇಶ ಭೇಟಿ ವೀಸಾಗಳ ಕಾಲಾವಧಿ 90 ದಿನಗಳಾಗಿವೆ. ಏಕ ಪ್ರವೇಶ ಭೇಟಿ ವೀಸಾಗಳ ಕಾಲಾವಧಿಯನ್ನು 30 ದಿನಗಳ ನಂತರ ಅಬ್ಶೀರ್‌ನಲ್ಲಿ ವಿಸ್ತರಿಸಬೇಕಿತ್ತು.
ಸೌದಿ ಸಂದರ್ಶನಕ್ಕಾಗಿ ಸಾರಿಗೆ ವೀಸಾ(Transit Visa) ಮಾನ್ಯತೆಯನ್ನು ಮೂರು ತಿಂಗಳಾಗಿ ವಿಸ್ತರಿಸಲಾಗಿದ್ದು, ಒಂದು ಭೇಟಿಯಲ್ಲಿ ಸೌದಿ ಅರೇಬಿಯಾದಲ್ಲಿ ಉಳಿಯುವ ಅವಧಿಯು 96 ಗಂಟೆಗಳಾಗಿವೆ. ಸಾರಿಗೆ(Transit) ವೀಸಾಕ್ಕೆ ಯಾವುದೇ ಶುಲ್ಕವಿಲ್ಲ.
ಎರಡೂ ಹರಂ ಮಸೀದಿಗಳ ಸೇವಕ ಸೌದಿ ದೊರೆ ಸಲ್ಮಾನ್ (King Salman) ಅವರ ಅಧ್ಯಕ್ಷತೆಯಲ್ಲಿ ರಿಯಾದ್ ಅಲ್ ಯಮಾಮಾ ಅರಮನೆಯಲ್ಲಿ ನಡೆದ ಸಾಪ್ತಾಹಿಕ ಕ್ಯಾಬಿನೆಟ್ ಸಭೆಯು ಭೇಟಿ ವೀಸಾ(Visit Visa) ಅವಧಿ ಮತ್ತು ಟ್ರಾನ್ಸಿಟ್ ವೀಸಾ ನಿಯಮದಲ್ಲಿ ತಿದ್ದುಪಡಿಗಳನ್ನು ಮಾಡಿದೆ