ಪುತ್ತೂರು : ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಪುತ್ತೂರು ಸೆಂಟರ್ ಹಾಗೂ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಪುತ್ತೂರು ಡಿವಿಶನ್ ಹಮ್ಮಿಕೊಂಡ ಇಲಲ್ ಹಬೀಬ್ ಮೀಲಾದ್ ರ‌್ಯಾಲಿ (Milad Rally) ಹಾಗೂ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಅಕ್ಟೋಬರ್ 5 ಬುಧವಾರದಂದು ಪುತ್ತೂರಿನಲ್ಲಿ ನಡೆಯಲಿದೆ.
ಲೋಕಾನುಗ್ರಹಿ ವಿಶ್ವ ವಿಮೋಚಕ ಪುಣ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.) ಜನ್ಮದಿನದಿಂದ ಪುಳಕಿತಗೊಂಡ ಪುಣ್ಯ ರಬೀವುಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ಸಂದೇಶಗಳನ್ನು ನಾಡಿನಾದ್ಯಂತ ಪಸರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ರ‌್ಯಾಲಿಯು ಅಪರಾಹ್ನ 3 ಘಂಟೆಗೆ ದರ್ಬೆ ವೃತ್ತದಿಂದ ಆರಂಭಗೊಂಡು ಪುತ್ತೂರು ನಗರದಲ್ಲಿ ಸಾಗಿ ಬಂದು ಕಿಲ್ಲೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ.
ರ‌್ಯಾಲಿಯಲ್ಲಿ ಸಾದಾತುಗಳು, ಎಸ್‌ವೈಎಸ್ ಎಸ್ಸೆಸ್ಸೆಫ್ ರಾಜ್ಯ ಹಾಗೂ ಜಿಲ್ಲೆಗಳಿಂದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.
ಎಸ್‌ವೈಎಸ್ ಈಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸೆಂಟರ್, ಸೆಕ್ಟರ್, ಬ್ರಾಂಚ್ ಹಾಗೂ ಯುನಿಟುಗಳಿಂದ ಸಂಘ ಕುಟುಂಬದ ಎಲ್ಲಾ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೀಲಾದ್ ರ‌್ಯಾಲಿ ಹಾಗೂ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರುರವರು ಕರೆ ನೀಡಿದ್ದಾರೆ.
ವರದಿ : ಯೂಸುಫ್ ಸಯೀದ್ ಪುತ್ತೂರು* (ಜಿಲ್ಲಾ ಮಾಧ್ಯಮ ಕಾರ್ಯದರ್ಶಿ)







