janadhvani

Kannada Online News Paper

ಅಬುಧಾಬಿ :ಬಾಯರ್ ನಲ್ಲಿ ಧಾರ್ಮಿಕ ಮತ್ತು ಲೌಖಿಕ ವಿಧ್ಯಾಬ್ಯಾಸವನ್ನು ಒದಗಿಸುವ ನಿಟ್ಟಿನಲ್ಲಿ ಉದ್ಭವಿಸಿದ ಶಿಕ್ಷಣ ಕೇಂದ್ರವಾದ ಮುಜಮ್ಮಅ ವಿಧ್ಯಾ ಸಂಸ್ಥೆಯ ಅಬುಧಾಬಿ ಸಮಿತಿ ಅಧೀನದಲ್ಲಿ ಪ್ರತೀ ತಿಂಗಳು ನಡೆಯುವ ಸ್ವಲಾತ್ ಮಜ್ ಲಿಸ್ ವಾರ್ಷಿಕ ಮತ್ತು ದುಆ ಮಜ್ ಲಿಸ್ ಕಾರ್ಯಕ್ರಮವು ದಿನಾಂಕ 27/4/2018 ರಂದು ಶುಕ್ರವಾರ ಮಗರಿಬ್ ನಮಾಝಿನ ಬಳಿಕ ಅಬುಧಾಬಿ ಸುಡಾನಿ ಸೆಂಟರ್ ನಲ್ಲಿ ನಡೆಯಲಿದೆ.

ಪ್ರಸ್ತುತ ಸಮಾರಂಭದಲ್ಲಿ ಬಹು ಅಸ್ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ತಂಙಳ್ ಬಾಯಾರ್ ಭಾಗವಹಿಸಿ ನೇತೃತ್ವ ನೀಡಲಿದ್ದಾರೆ. ಹಾಗೂ ಪ್ರಸಿದ್ಧ ಬುರ್ದಾ ಗುಂಪಿನ ಬುರ್ದಾ ಆಲಾಪನೆ ನಡೆಯಲಿದೆ ಎಂದು ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.