✍️ಕೊಡಂಗಾಯಿ ಕಾಮಿಲ್ ಸಖಾಫಿ
ಈ ಚಿತ್ರ ನೋಡುವಾಗ ತಿಳಿಯದೇ ಕಣ್ಣೀರು ಹರಿಯುತ್ತಿದೆ.
ಝುಬೈರ್ ಸಖಾಫಿಯವರು ಜಾಮಿಅ ಮರ್ಕಝ್’ನಲ್ಲಿ ಕಲಿತು 2005ರಲ್ಲಿ ನನ್ನ ಸಹಪಾಠಿಯಾಗಿ ಸಖಾಫಿ ಬಿರುದು ಪಡೆದ ಯುವ ವಿದ್ವಾಂಸರಾಗಿದ್ದಾರೆ.
ಇದೇ ತಿಂಗಳು 25ನೇ ತಾರೀಕಿನಂದು ಪವಿತ್ರ ಉಮ್ರಾ ನಿರ್ವಹಿಸಲು, ಡ್ರೆಸ್ ಖರೀದಿಸಿ ಪತ್ನಿ ಮತ್ತು ಚಿಕ್ಕ ಮಗುವನ್ನು ಬಸ್ಸಿನಲ್ಲಿ ಬಿಟ್ಟು ಇನ್ನೊಬ್ಬ ಮಗನೊಂದಿಗೆ ಸ್ಕೂಟರ್ನಲ್ಲಿ ಮನೆಯ ಕಡೆ ಹೊರಟಿದ್ದರು.
ಅಲ್ಲಾಹನು ಅವರ ಪರಲೋಕ ಜೀವನವನ್ನು ಹಸನಾಗಿಸಲಿ…🤲
ನಿನ್ನೆ ನಗುತ್ತಾ ನಗರಕ್ಕೆ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಕುಳಿತು ಬಂದಾಗ ಆ ಮಗು ಇದು ನನ್ನ ಕೊನೆಯ ಯಾತ್ರೆಯೆಂದು ತಿಳಿದಿರಲಿಕ್ಕಿಲ್ಲ.
ವಯನಾಡು ಜಿಲ್ಲೆಯ ಪನಮರಂ ಎಂಬಲ್ಲಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ತಂದೆ ಝುಬೈರ್ ಸಖಾಫಿ ಮತ್ತು ಮಗ ಮಿದ್ಲಾಜ್ ಇಹಲೋಕ ಬದುಕಿಗೆ ವಿದಾಯ ಹೇಳಿದ್ದರು.
ಇವತ್ತು ಅವರಿಬ್ಬರು ಜೊತೆಯಾಗಿಯೇ ಈ ನಶ್ವರ ಲೋಕವನ್ನು ಬಿಟ್ಟು ಅಗಲಿದರು.
ಊರಿನ ಮಸೀದಿಯ ಮುಂಭಾಗದಲ್ಲಿರುವ ಆರಡಿ ಮಣ್ಣಿನಡಿಯಲ್ಲಿ ಒಂದೇ ಕಬರಿನಲ್ಲಿ ಒಂದು ಗೋಡೆಯ ಎರಡು ಕಡೆಗಳಲ್ಲಿ ಮಲಗಿ ನಿದ್ರಿಸುತ್ತಿದ್ದಾರೆ. ಒಮ್ಮೆಯೂ ಎದ್ದೇಳಲಾಗದ ನಿದ್ರೆ…
ಅವರ ಮನೆ ಮತ್ತು ಊರಿನಲ್ಲಿ ಕಣ್ಣೀರ ಮಳೆಯಾಗುತ್ತಿದೆ.
ಕಳೆದ ವಾರದಲ್ಲಿ ಇದೇ ಕುಟುಂಬದ ಸಣ್ಣ ಮಗುವೊಂದು ಅಪಘಾತದಲ್ಲಿ ಅಸುನೀಗಿತ್ತು. ಆ ನೋವಿನ ಗಾಯ ಮಾಯವಾಗುವ ಮೊದಲೇ ಮತ್ತೊಂದು ಆಘಾತ.
ಅಲ್ಲಾಹು ಅವರಿಗೆ ಸ್ವರ್ಗ ನೀಡಿ ಅನುಗ್ರಹಿಸಲಿ. ಈ ರೀತಿಯ ಪರೀಕ್ಷೆಗಳಿಂದ ನಮ್ಮನ್ನು ಪಾರುಮಾಡಲಿ. ಅವರ ಕುಟುಂಬಕ್ಕೆ ಸಹನೆಯನ್ನು ಸುರಿಸಲಿ ಆಮೀನ್🤲