janadhvani

Kannada Online News Paper

ಸೆಪ್ಟೆಂಬರ್ 29ರಂದು ಕೆಸಿಎಫ್ ಬಹರೈನ್ ವತಿಯಿಂದ ಬೃಹತ್ ಮೀಲಾದ್ ಕಾನ್ಫರೆನ್ಸ್

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ವತಿಯಿಂದ ಸೆಪ್ಟೆಂಬರ್ 29ರ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ 08ಗಂಟೆಯಿಂದ ಮನಾಮದಲ್ಲಿರುವ ಪಾಕಿಸ್ತಾನ ಕ್ಲಬ್ ಮೈದಾನದಲ್ಲಿ ಬೃಹತ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಸ್ಸಯ್ಯಿದ್ ಅಲೀ ಬಾಫಖಿ ತಂಙಳ್ ರವರು ಆಗಮಿಸಲಿದ್ದು, ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರು ಮುಖ್ಯ ಪ್ರಬಾಷಣ ಮಾಡಲಿದ್ದಾರೆ.

ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸಂಘಟನಾ ನೇತಾರರು, ಉಲಮಾಗಲು, ಸಾದಾತ್ಗಳು, ಸಾಮಾಜಿಕ ಹಾಗೂ ರಾಜಕೀಯ ನೇತಾರರು ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.

“ಪ್ರವಾದಿ ಮುಹಮ್ಮದ್ ಮುಸ್ತಫಾ (ﷺِ) ಮಾನವೀಯತೆಯ ಮಹಾನಾಯಕ” ಎಂಬ ಶೀರ್ಷಿಕೆಯಲ್ಲಿ ನಡೆಯಲಿರುವ ಮೀಲಾದ್ ಕ್ಯಾಂಪೈನ್ ಭಾಗವಾಗಿ ಮೌಲಿದ್ ಜಲ್ಸಾಗಳು, ಅಹ್ಲನ್ ಯಾ ರಬೀಹ್ ಕಾರ್ಯಕ್ರಮ, ಪ್ರಭಾತ ಮೌಲಿದ್, ಮಹಿಳಾ ತರಗತಿಗಳು, ಪ್ರವಾದಿ ಜೀವನ ಚರಿತ್ರೆಯ ಪುಸ್ತಕ ವಿತರಣೆ, ಸೌಹಾರ್ದ ಕೂಟ ಸೇರಿದಂತೆ ವೈವಿದ್ಯಮವಾದ ಕಾರ್ಯಕ್ರಮಗಳನ್ನು ಕೆಸಿಎಫ್ ಬಹರೈನ್ ಹಮ್ಮಿಕೊಂಡಿದ್ದು, ಈ ಕ್ಯಾಂಪೈನನ್ನು ಈಗಾಗಲೇ ನೂರುಸ್ಸಾದಾತ್ ಅಸ್ಸಯ್ಯಿದ್ ಬಾಯಾರ್ ತಂಗಳ್ ರವರು ಉದ್ಘಾಟಿಸಿದ್ದಾರೆ ಎಂದು ಕೆಸಿಎಫ್ ಬಹರೈನ್ ಮೀಲಾದ್ ಕಾನ್ಫರೆನ್ಸ್ ಸ್ವಾಗತ ಸಮಿತಿಯ ನೇತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com