ಜಿದ್ದಾ: ವಿದೇಶೀ ಯಾತ್ರಾರ್ಥಿಗಳು ಉಮ್ರಾ ವೀಸಾವನ್ನು ಮಖಾಮ್ ಪ್ಲಾಟ್ಫಾರ್ಮ್( Maqam Online Portal) ಮೂಲಕ ಪಡೆಯಬಹುದು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ (Ministry of Hajj And Umrah) ಪ್ರಕಟಿಸಿದೆ.
ಹೊಸ ಯೋಜನೆಯು ಉಮ್ರಾ ವೀಸಾ ಮತ್ತು ಸಂಬಂಧಿತ ಸೇವೆಗಳನ್ನು ಯಾತ್ರಾರ್ಥಿಗಳಿಗೆ ನಿಮಿಷಗಳಲ್ಲಿ ಒದಗಿಸುತ್ತದೆ. ಇದು, ಸೇವೆಯ ಗುಣಮಟ್ಟವನ್ನು ಸುಧಾರಿಸುವ ಭಾಗವಾಗಿದೆ ಎಂದು ಸಚಿವಾಲಯ ಹೇಳಿದೆ.
ವಿದೇಶಗಳಿಂದ ಉಮ್ರಾಗೆ ಬರುವವರು ತಮ್ಮ ತಾಯ್ನಾಡಿನಿಂದಲೇ ಉಮ್ರಾ ಯಾತ್ರೆಯನ್ನು ಬುಕ್ ಮಾಡಬಹುದು ಮತ್ತು ಮಖಾಮ್ ಎಲೆಕ್ಟ್ರಾನಿಕ್ ಪ್ಲಾಟ್ಫಾರ್ಮ್ ಮೂಲಕ ಉಮ್ರಾ ವೀಸಾವನ್ನೂ ಪಡೆಯಬಹುದು.
Maqan ಪೋರ್ಟಲ್ ಗೆ ಭೇಟಿನೀಡಿ, ಅಗತ್ಯವಿರುವ ಸೇವೆಗಳನ್ನು ಕಾಯ್ದಿರಿಸುವುದು ಮತ್ತು ವೀಸಾಕ್ಕೆ ಅರ್ಜಿ ಸಲ್ಲಿಸಿದಾಗ ಲಭಿಸುವ ಉಲ್ಲೇಖ ಸಂಖ್ಯೆಯನ್ನು(Reference No) ಬಳಸಿಕೊಂಡು ಆನ್ಲೈನ್ ನಲ್ಲೇ ಶುಲ್ಕವನ್ನೂ ಪಾವತಿಸಬಹುದಾಗಿದೆ.
ಈ ಪ್ರಕ್ರಿಯೆಗಳು ಪೂರ್ಣಗೊಂಡ, 24 ಗಂಟೆಗಳ ಒಳಗೆ ವೀಸಾ ಅದೇ ಫ್ಲಾಟ್ ಫಾರ್ಮ್ ಮೂಲಕ ಲಭಿಸಲಿದೆ. ಈ ರೀತಿ ನೀಡಲಾಗುವ ವೀಸಾಗಳು 90 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ. ಆಯಾ ದೇಶಗಳಲ್ಲಿ ಅಧಿಕೃತ ಏಜೆನ್ಸಿಗಳ ಮೂಲಕವೂ ವೀಸಾಗಳನ್ನು ಪಡೆಯಲು ಅವಕಾಶವಿದೆ.
ಯಾತ್ರಾರ್ಥಿಗಳು, ವಸತಿ ಸೌಕರ್ಯಗಳನ್ನು ಕಾಯ್ದಿರಿಸಲು, ಮಕ್ಕಾ, ಜಿದ್ದಾ ಮತ್ತು ಮದೀನಾಗಳಿಗೆ ಪ್ರಯಾಣಿಸಲು ವಿಮಾನಗಳನ್ನು ಕಾಯ್ದಿರಿಸಲು ಮತ್ತು ಸೌದಿ ಅರೇಬಿಯಾದಲ್ಲಿ ದೇಶೀಯ ಪ್ರಯಾಣವನ್ನು ನಿಗದಿಪಡಿಸಲು ‘Maqam’ ಪೋರ್ಟಲ್ ಅನ್ನು ಬಳಸಬಹುದಾಗಿದೆ.
ಈ ವೀಸಾ ಮೂಲಕ, ಯಾತ್ರಿಕರಿಗೆ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಮುಖ ಐತಿಹಾಸಿಕ ಪ್ರದೇಶಗಳಿಗೆ ಭೇಟಿ ನೀಡುವ ಅವಕಾಶ ಲಭಿಸಲಿದೆ ಎಂದು ಸಚಿವಾಲಯ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ- ಕಲ್ಲಂಗಡಿ ಹಣ್ಣಿನಲ್ಲಿ ಇಲಿ ವಿಷ ಹೇಗೆ ಬಂತು?
ಕೇರಳ ವಿಧಾನಸಭಾ ಚುನಾವಣೆ: 102 ಸ್ಥಾನಗಳಲ್ಲಿ UDF ಗೆ ಭರ್ಜರಿ ಜಯ- LDF ಗೆ ಹೀನಾಯ ಸೋಲು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ