janadhvani

Kannada Online News Paper

ಸಂದರ್ಶಕ ವೀಸಾವನ್ನು ನಿವಾಸ ವೀಸಾಗೆ ಬದಲಿಸಲು ಸಾಧ್ಯವಿಲ್ಲ- ಜವಾಝಾತ್

ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಭೇಟಿ ವೀಸಾವನ್ನು ನಿವಾಸ ವೀಸಾವಾಗಿ ಪರಿವರ್ತಿಸಲು ಸಾಧ್ಯವಿದೆ

ರಿಯಾದ್: ಸಂದರ್ಶಕ ವೀಸಾದಲ್ಲಿ(Visit Visa) ಸೌದಿ ಅರೇಬಿಯಾದಲ್ಲಿರುವವರಿಗೆ (KSA) ನಿವಾಸ ವೀಸಾಗೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಸೌದಿ ಜವಾಝಾತ್ (Jawazat) ಸ್ಪಷ್ಟಪಡಿಸಿದೆ.

ಸಂದರ್ಶಕ ವೀಸಾದಲ್ಲಿ ದೇಶಕ್ಕೆ ತಲುಪಿದವರು ನಿವಾಸ ವೀಸಾಕ್ಕೆ ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಜವಾಝಾತ್ ನಿರ್ದೇಶನಾಲಯ ನಿರಾಕರಿಸಿದೆ.

ದೇಶದಲ್ಲಿ ಇಂತಹ ವ್ಯವಸ್ಥೆ ಜಾರಿಯಾಗಿಲ್ಲ. ವೀಸಾ ಬದಲಾವಣೆಗೆ ಗೃಹ ಸಚಿವಾಲಯ ಅನುಮತಿ ನೀಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸಂಪೂರ್ಣ ಸುಳ್ಳು ಮತ್ತು ಅಂತಹ ಸುಳ್ಳು ಸುದ್ದಿ ಪ್ರಚಾರಪಡಿಸುವವರ ವಿರುದ್ಧ, ಸೈಬರ್ ಕಾಯಿದೆಯಡಿ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಆದರೆ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಭೇಟಿ ವೀಸಾವನ್ನು ನಿವಾಸ ವೀಸಾವಾಗಿ ಪರಿವರ್ತಿಸಲು ಸಾಧ್ಯವಿದೆ. ಇದಕ್ಕಾಗಿ, ಪೋಷಕರಿಬ್ಬರೂ ದೇಶದಲ್ಲಿ(Iqama) ನಿವಾಸ ವೀಸಾದಲ್ಲಿರಬೇಕು ಎಂದು ಜವಾಝಾತ್ ಸ್ಪಷ್ಟಪಡಿಸಿದೆ.

error: Content is protected !! Not allowed copy content from janadhvani.com