ದುಬೈ: ಯುಎಇ ಯ ಸಾರಿಗೆ ವಲಯಯಲ್ಲಿ ಹೈಪರ್ಲೂಪ್ ನೊಂದಿಗೆ ಭಾರೀ ಮುನ್ನೆಡೆ ಸಾಧಿಸಿದೆ. 2020 ರ ಹೊತ್ತಿಗೆ ಹೈಪರ್ಲೂಪ್‌ನಲ್ಲಿ ಅಬುಧಾಬಿ ಮತ್ತು ದುಬೈ ನಡುವೆ ಓಡಾಟ ನಡೆಸಲು ಸಾಧ್ಯವಿದೆ.
ಹಾಲ್ಡಾರ್ ಪ್ರಾಪರ್ಟೀಸ್ ಮತ್ತು ಹೈಪರ್ಲೂಪ್ ಸಾರಿಗೆ ನಿಗಮವು ವೇಗದ ಹೈಪರ್ಲೋಪ್ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಸಲುವಾಗಿ ಒಪ್ಪಂದಕ್ಕೆ ಸಹಿ ಹಾಕಿದೆ.
ಇದರೊಂದಿಗೆ, ವಿಶ್ವದ ಮೊದಲ ಹೈಪರ್ಲೋಪ್ ಸಿಸ್ಟಮ್ ದುಬೈ ಮತ್ತು ನೆರೆಯ ಪ್ರದೇಶಗಳನ್ನು ಸಂಪರ್ಕಿಸಿ ಪ್ರಾರಂಭಗೊಳ್ಳಲಿದೆ. ಹೈಪರ್ಬೋಲೋಪ್ ಯೋಜನೆಗೆ ಸುಮಾರು 10 ಬಿಲಿಯನ್ ದಿರ್ಹಂ ತಗುಲಲಿದೆ.
1020 ಕಿ.ಮೀ ಉದ್ದದ ಹೈಪರ್ಲೋಪ್ ಕಾಮಗಾರಿಯು ನಿರ್ಮಾಣವು 2020 ರ ದುಬೈ ಎಕ್ಸ್ಪೋ ಗೆ ಮುಂಚಿತವಾಗಿ ಮುಗಿಯಲಿದೆ ಎಂದು ಹೈಪರ್ಲೋಪ್ ಕಂಪೆನಿಯ ಅಧ್ಯಕ್ಷ ಬಿಬೋಪ್ ಗ್ರೆಸ್ತಾ ಹೇಳಿದರು.
ಯೋಜನೆಯ ಎರಡನೆಯ ಹಂತವು ಯುಎಇ ಯಿಂದ ಸೌದಿ ಅರೇಬಿಯಾಗೆ ಪ್ರಾರಂಭವಾಗಲಿದ್ದು, ಅದು ಅಬುಧಾಬಿ, ಅಲ್ ಐನ್, ದುಬೈ ಮತ್ತು ರಿಯಾದ್ ಗಳನ್ನು ಸಂಪರ್ಕಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಮಾಣದ ಮೊದಲ ಹಂತ ಮುಗಿದಿದ್ದು, ಅಬುಧಾಬಿ ಸಾರಿಗೆ ಇಲಾಖೆಯೊಂದಿಗೆ ಕಳೆದ ಒಂದು ವರ್ಷ ಪ್ರಾಯೋಗಿಕ ಅಧ್ಯಯನಗಳ ಕುರಿತು ಚರ್ಚೆ ನಡೆಸಿದೆ ಎಂದು ಕಂಪನಿ ತಿಳಿಸಿದೆ.ಹೈಪರ್ಲೋಪ್ ಸಾರಿಗೆಯು ಈ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಉಂಟುಮಾಡುತ್ತದೆ ಎಂದು ಕಂಪನಿಯ ಸಿಇಒ ಡಿರ್ಕ್ ಅಲ್ಬೊನ್ ಹೇಳಿದರು.