janadhvani

Kannada Online News Paper

ಕೆಸಿಎಫ್ ಯು.ಎ.ಇ: “ಅಮೃತ ಮಹೋತ್ಸವದ ಹೊಸ್ತಿಲಲ್ಲಿ ಸ್ವತಂತ್ರ ಭಾರತ”- ಪ್ರಬಂಧ ಸ್ಪರ್ಧೆ

ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್)ಯು.ಎ.ಇ ರಾಷ್ಟ್ರೀಯ ಸಮಿತಿಯು ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯನ್ನು ನಡೆಸಲು ತೀರ್ಮಾನಿಸಿದ್ದು, ಇದಕ್ಕೆ ಎಲ್ಲಾ ಝೋನಲ್ ಸಮಿತಿಗಳಿಂದ ಸ್ಪರ್ಧಾರ್ಥಿಗಳ ನೋಂದಾವಣೆಯ ಪಟ್ಟಿಯನ್ನು ಈ ಮೂಲಕ ಆಹ್ವಾನಿಸಲಾಗಿದೆ.

ವಿಷಯ – “ಅಮೃತ ಮಹೋತ್ಸವದ ಹೊಸ್ತಿಲಲ್ಲಿ ಸ್ವತಂತ್ರ ಭಾರತ”

ಶರತ್ತುಗಳು:
1. ಸ್ಪರ್ಧಾರ್ಥಿಗಳ ನೋಂದಾವಣೆಯ ಪಟ್ಟಿಯನ್ನು 13-08-2022 ರ ಒಳಗಾಗಿ ಸಲ್ಲಿಸಬೇಕು.
2. ಸ್ಪರ್ಧಾರ್ಥಿಗಳ ಹೆಸರು (as per Emirates ID), Emirates ID Number, ಯು.ಎ.ಇ. ಯಲ್ಲಿ ವಾಸ ಸ್ಥಳ (Emirates), ಊರಿನಲ್ಲಿ ವಾಸ ಸ್ಥಳ (District) ಮೊಬೈಲ್ ಸಂಖ್ಯೆ, ಕಡ್ಡಾಯವಾಗಿ ನಮೂದಿಸಬೇಕು.
3. ಯು.ಎ.ಇ. ಯ ಕೆ.ಸಿ.ಎಫ್ ಸದಸ್ಯರು ಮತ್ತು ಯು.ಎ.ಇ. ಯಲ್ಲಿರುವ ಕನ್ನಡಿಗರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ.
4. ನೋಂದಾವಣೆಯ ವಿವರವನ್ನು kcfuaeofficedivision@gmail.com ಎಂಬ ಇ-ಮೇಲ್ ಮೂಲಕವೇ ಕಳುಹಿಸಿ ಕೊಡಬೇಕು. ಇತರ ಯಾವುದೇ ಚಾನೆಲ್ (ವಾಟ್ಸ್ ಅಪ್) ಮೂಲಕ ನೋಂದಾವಣಿ ಸ್ವೀಕರಿಸಲಾಗುವುದಿಲ್ಲ.
5. ಪ್ರಬಂಧ ಕನ್ನಡ ಭಾಷೆಯಲ್ಲಿ ಆಗಿರಬೇಕು ಹಾಗೂ ಕೈಬರಹವಾಗಿರಬೇಕು. ಟೈಪ್ ಮಾಡಿದ ಬರಹವನ್ನು ಪರಿಗಣಿಸಲಾಗುವುದಿಲ್ಲ.
6. ಪ್ರಬಂಧವು ಕನಿಷ್ಠ 600 ಪದಗಳು ಮತ್ತು ಗರಿಷ್ಠ 750 ಪದಗಳಿಗೆ ಮೀರಬಾರದು.
7. ಕೈಬರಹದ ಪ್ರಬಂಧವನ್ನು kcfuaeofficedivision@gmail.com ಎಂಬ ಇ-ಮೇಲ್ ಮೂಲಕ 14-08-2022, 20:00 hrs (UAE Time) ರ ಮುಂಚಿತವಾಗಿ ಕಳುಹಿಸಿ ಕೊಡಬೇಕು.
8. ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಿಗೆ ಬಹುಮಾನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ವಿವರ
055 531 8631 / 056 751 8700

error: Content is protected !! Not allowed copy content from janadhvani.com