janadhvani

Kannada Online News Paper

ಉದಯಪುರ ಕೃತ್ಯ ಖಂಡನೀಯ, ಸಮಗ್ರ ತನಿಖೆಯಾಗಲಿ- ಮುಸ್ಲಿಮ್ ಒಕ್ಕೂಟ

ಈ ಕೃತ್ಯದ ಹಿಂದೆ ಗೂಢಾಲೋಚನೆಯ ವಾಸನೆ ಕಾಣಿಸುತ್ತಿದೆ

ಮಂಗಳೂರು: ಇತ್ತೀಚೆಗೆ ನೂಪುರ್ ಶರ್ಮ ಹೇಳಿಕೆಯನ್ನು ಬೆಂಬಲಿಸಿದ ರಾಜಸ್ತಾನದ ಉದಯಪುರ ದಲ್ಲಿನ ಕನ್ನಯ್ಯ ಲಾಲ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ ಕೃತ್ಯವು ಖಂಡನೀಯವಾದೆ. ಅಮಾಯಾಕ ವ್ಯಕ್ತಿಯ ಸಾವನ್ನು ನಾಗರಿಕ ಸಮಾಜ ಕಟು ಶಬ್ದದಿಂದ ಖಂಡಿಸುತ್ತದೆ.

ಆದರೆ ಈ ಬಗ್ಗೆ ಸಮಗ್ರ ತನಿಖೆ ಅತ್ಯಗತ್ಯ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಈ ಕೃತ್ಯದ ಹಿಂದೆ ಗೂಢಾಲೋಚನೆಯ ವಾಸನೆ ಕಾಣಿಸುತ್ತಿದೆ.
ಈಗಾಗಲೇ ಹತ್ತು ಹಲವು ದೃಶ್ಯಗಳನ್ನು ಸಾಧಿಸಿದ ಫ್ಯಾಸಿಸ್ಟ್ ಪರಿವಾರ ಈ ಕೃತ್ಯದ ಹಿಂದೆ ಕೂಡಾ ತನ್ನ ಕೈ ಚಳಕ ಪ್ರದರ್ಶಿಸಿರುವ ಸಾದ್ಯತೆ ಇದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com