ಭಾರತೀಯ ಸಮಾಜವನ್ನು ಕೋಮುದ್ರುವೀಕರಣಗೊಳಿಸುವ ಕಿಡಿಗೇಡಿಗಳಿಗೆ ಸರಕಾರವೇ ಪರೋಕ್ಷವಾಗಿ ಕುಮ್ಮಕ್ಕು ನೀಡಿದಂತೆ ಇತ್ತೀಚೆಗಿನ ಅನಪೇಕ್ಷಿತ ಬೆಳವಣಿಗೆಗಳಿಂದ ಭಾಸವಾಗುತ್ತಿವೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಪತ್ರಿಕಾಪ್ರಕಟನೆಯಲ್ಲಿ ಹೇಳಿದ್ದಾರೆ.
ನಿರುದ್ಯೋಗ, ಬಡತನ, ಅಸಮಾನತೆ ನಿರ್ಮೂಲನ, ಮೂಲಭೂತ ಸೌಕರ್ಯಗಳ ಒದಗಿಸುವಿಕೆ, ಬೆಲೆಯೇರಿಕೆ-ಹಣದುಬ್ಬರ ನಿಯಂತ್ರಣ ಮೊದಲಾದ ಅತ್ಯಗತ್ಯ ವಿಷಯಗಳತ್ತ ಗಮನ ಕೊಡಬೇಕಾದ ಸರಕಾರವು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಈ ಬಗ್ಗೆ ರಚನಾತ್ಮಕ ಹೋರಾಟ ರೂಪಿಸುವಲ್ಲಿ ಪ್ರತಿಪಕ್ಷಗಳು ಕೂಡ ಸಫಲವಾಗುತ್ತಿಲ್ಲ. ಈ ಬೆಳವಣಿಗೆಯು ಪ್ರಜಾಪ್ರಭುತ್ವ ಭಾರತಕ್ಕೆ ಹೇಳಿಸಿದ್ದಲ್ಲ.
ಭಾವನಾತ್ಮಕ ವಿಚಾರಗಳಲ್ಲೇ ತಮ್ಮ ರಾಜಕೀಯ ನೆಲೆ ಗಟ್ಟಿಗೊಳಿಸುವ ನೀಚ ರಾಜಕಾರಣವನ್ನು ಕೂಡಲೇ ಕೊನೆಗೊಳಿಸಬೇಕು.
ಪ್ರವಾದಿನಿಂದನೆಯಂತಹ ಇಸ್ಲಾಮ್ ವಿರೋಧಿ ಬೆಳವಣಿಗೆಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವವರು ಪ್ರತಿಭಟನೆಯ ದಿಕ್ಕನ್ನು ಬದಲಿಸಲು ಹುನ್ನಾರ ನಡೆಸುವವರ ಬಗ್ಗೆ ಎಚ್ಚರದಿಲ್ಲಿರಬೇಕಾಗಿದೆ.
ದೀರ್ಘದೃಷ್ಟಿಯುಳ್ಳ ಉಲಮಾಗಳು ಮತ್ತು ಕಾನೂನು ತಜ್ಞರನ್ನೊಳಗೊಂಡು ಮಾತ್ರ ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ದೃಶ್ಯ ಮಾಧ್ಯಮಗಳಲ್ಲಿ ನಡೆಯುವ ಕೋಮುದ್ರುವೀಕರಣ ಸೃಷ್ಟಿಸುವ ಯಾವುದೇ ಅನಗತ್ಯ ಚರ್ಚೆಗಳಲ್ಲಿ ಯಾವುದೇ ಸಮುದಾಯದ ನಾಯಕರು ಭಾಗವಹಿಸದೆ, ಸಾಧ್ಯವಿದ್ದಷ್ಟೂ ಶಾಂತಿಯ ವಾತಾವರಣದ ಸೃಷ್ಟಿಗೆ ಒತ್ತುಕೊಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ