janadhvani

Kannada Online News Paper

ಕೆಸಿಎಫ್ ಕುವೈತ್: ಫಾಹೀಲ್ ಸೆಕ್ಟರ್ ಸಮಿತಿಯ ನವ ಸಾರಥಿಗಳು

ಕರ್ನಾಟಕ ಕಲ್ಬರಲ್ ಫೌಂಡೇಶನ್ ಕುವೈತ್ ಫಾಹೀಲ್ ಸೆಕ್ಟರ್ ಸಮಿತಿಯ ಮಹಾಸಭೆಯು ದಿನಾಂಕ 13/05/2022 ಶುಕ್ರವಾರ ಜುಮಾ ನಮಾಝಿನ ಬಳಿಕ ಫಾಹೀಲ್ ಸೆಕ್ಟರ್ ಆಫೀಸ್ ನಲ್ಲಿ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಫಾರೂಕ್ ಸಖಾಫಿ ಮುಸ್ಲಿಯಾರ್ ರವರ ಅಧ್ಯಕ್ಷತೆ ಹಾಗು ದುಆ ದೊಂದಿಗೆ ಆರಂಭಗೊಂಡಿತು.

ಫಾಹೀಲ್ ಸೆಕ್ಟರ್ ಅಧ್ಯಕ್ಷರಾದ ಸಿರಾಜುದ್ದೀನ್ ಕೃಷ್ಣಾಪುರ ರವರ ಸ್ವಾಗತ ಭಾಷಣ ನಂತರ ಕಾರ್ಯಕ್ರಮವನ್ನು ಬಹು|ಉಮರ್ ಝುಹ್ರಿ ಮುಸ್ಲಿಯಾರ್ ರವರು ಉದ್ಘಾಟಿಸಿದರು.
2021-2022 ನೇ ಸಾಲಿನ ವಾರ್ಷಿಕ ವರದಿ ಮತ್ತು ವಾರ್ಷಿಕ ಲೆಕ್ಕ ಪತ್ರವನ್ನು ಪ್ರಧಾನ ಕೋಶಾಧಿಕಾರಿ ಅಬ್ದುಲ್ ನವಾಫ್ ಅಹ್ಮದ್ ವಿಟ್ಲ ರವರು ಮಂಡಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಫಾರೂಕ್ ಸಖಾಫಿ ಮುಸ್ಲಿಯಾರ್ ರವರು ಕೆಸಿಎಫ್ ಫಾಹೀಲ್ ಸೆಕ್ಟರ್ ಕಳೆದ ವರ್ಷಗಳ ಕಾಲ ಮಾಡಿರುವ ಸಾಧನೆಗಳನ್ನು ವಿವರಿಸಿ, ಕೆಸಿಎಫ್ ಫಾಹೀಲ್ ಸೆಕ್ಟರ್ ಉನ್ನತಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನಂತರ 2022-23 ನೇ ಸಾಲಿನ ಹೊಸ ಸಮಿತಿಯ ಪಧಾಧಿಕಾರಿಗಳನ್ನು ರಾಷ್ಟ್ರೀಯ ಸಂಘಟನಾ ಅಧ್ಯಕ್ಷ ಉಮರ್ ಝುಹ್ರಿ ಮುಸ್ಲಿಯಾರವರ ನೇತ್ರತ್ವದಲ್ಲಿ ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು – ಇಬ್ರಾಹಿಮ್ ಅಬ್ದುಲ್ ರಹಮಾನ್ ಅಡ್ಕಾರ್
ಕಾರ್ಯದರ್ಶಿ -ಅಬ್ದುಲ್ ಹಮೀದ್ ಮೂಳೂರ್
ಕೊಶಾಧೀಕಾರಿ-ಅಬ್ದುಲ್ ನವಾಫ್ ಅಹ್ಮದ್ ವಿಟ್ಲ
ಉಪಾಧ್ಯಕ್ಷರು-ಅಬ್ದುಲ್ ರೌಫ್ ಕೊದ್ರೋಳಿ
ಶಿಕ್ಷಣ ಕಾರ್ಯದರ್ಶಿ
-ಮುಹ್ಯದೀನ್ ಶರೀಫ್ ಸಹದಿ ಕೊಡ್ಲಿಪೇಟೆ ಕೊಡಗು
ಇಹ್ಸಾನ್ ಕಾರ್ಯದರ್ಶಿ – ಇಬ್ರಾಹಿಮ್
ಖಲೀಲ್ ಉಳ್ಳಾಲ
ಸ್ವಾಂತನ ಕಾರ್ಯದರ್ಶಿ -ಆದಂ
ಅಬ್ದುಲ್ ರಹಮಾನ್ ಜರಿಗುಡ್ಡೆ ಕಾರ್ಕಳ
ಸಂಘಟನಾ ಕಾರ್ಯದರ್ಶಿ- ಅಬ್ದುಲ್ ಅಝೀಝ್ ಉಪ್ಪಿನಂಗಡಿ
ಪ್ರಚಾರ ವಿಂಗ್
ಕಾರ್ಯದರ್ಶಿ-ಅಬ್ದುಲ್ ಸಮದ್ ಇಸ್ಮಾಯಿಲ್ ಮುಳೂರ್
ಆಡಳಿತ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ- ನೌಫಲ್ ಅಹ್ಮದ್ ಬೋಂದೆಲ್ ಹಾಗು 11 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಯಾಕೂಬ್ ಕಾರ್ಕಳರವರು ಕಾರ್ಯಕರ್ತರಿಗೆ ಹಿತೋಪದೇಶವನ್ನು ನೀಡಿದರು.
ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಝಕರಿಯಾ ಆನೇಕಲ್ ರವರು ನೂತನ ಸಮಿತಿಗೆ ಶುಭವನ್ನು ಕೋರಿದರು.ಫಾಹೀಲ್ ಸೆಕ್ಟರ್ ಅಧ್ಯಕ್ಷರಾದ ಸಿರಾಜುದ್ದೀನ್ ಕೃಷ್ಣಾಪುರ ರವರ ನಿರೂಪಿಸಿದ ಕಾರ್ಯಕ್ರಮದಲ್ಲಿ ಫಾಹೀಲ್ ಸೆಕ್ಟರ್ ಸಮಿತಿಯ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಆದಮ್ ಅಬ್ದುಲ್ ರಹ್ಮಾನ್ ರವರು ಧನ್ಯವಾದ ಹೇಳಿದರು.

ವರದಿ ಇಬ್ರಾಹಿಂ ವೇಣೂರು

error: Content is protected !! Not allowed copy content from janadhvani.com