ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಜಾತ್ರಾ ಮಹೋತ್ಸವದ ಹೊರಾಂಗಣದ ವಾಣಿಜ್ಯ ಮಳಿಗೆಗಳಲ್ಲಿ ಅನ್ಯ ಕೋಮಿನ ಬೀದಿ ಬದಿ,ಸ್ಟಾಲ್ ವರ್ತಕರಿಗೆ, ವ್ಯಾಪಾರಸ್ತರಿಗೆ ಅವಕಾಶ ನಿರಾಕರಣೆ ಮತ್ತು ಗ್ರಾಹಕರಿಗೆ ಬಹಿಷ್ಕಾರ ಶಪಥ ವಿಷಾದನೀಯ.
ಜಿಲ್ಲೆಯ ಶ್ರದ್ದಾ ಕೇಂದ್ರಗಳಲ್ಲಿನ ಜಾತ್ರೆ, ಮಹೋತ್ಸವಕ್ಕೆ ಅದರದ್ದೇ ಆದ ವಿಶೇಷತೆ, ಸಾಮರಸ್ಯದ ಚರಿತ್ರೆಯೇ ಇದೆ. ಈ ಚರಿತ್ರೆಯು ಕೊಡು ಕೊಳ್ಳುವಿಕೆಯ ಆಧಾರದ ಮೇಲೆ ನೆಲೆ ನಿಂತಿದೆ. ಈ ಉತ್ಸವದ ಪ್ರಮುಖ ಆಕರ್ಷಣೆಯೇ ಅಲ್ಲಿನ ವಾಣಿಜ್ಯ ಸಂತೆ. ದುರದೃಷ್ಟವಶಾತ್ ಈ ವಾಣಿಜ್ಯ ಸಂತೆಯ ಸೌಂದರ್ಯ ಮತೀಯ ಕಾರಣದಿಂದ ವ್ಯತ್ಯಯ ವಾದರೆ ನಮ್ಮ ಸೌಹಾರ್ಧ ಸಂಸ್ಕೃತಿಗೆ ಧಕ್ಕೆ ಹೊರತು, ವ್ಯಾಪಾರ ವ್ಯವಹಾರಕ್ಕೆ ಧಕ್ಕೆ ಇಲ್ಲ ಎಂಬುದನ್ನು ನಾವು ತಿಳಿದು ಕೊಳ್ಳಬೇಕು.
ಕೆಲವು ಮತೀಯ,ಕೋಮು ಪ್ರಚೋದಕ ಶಕ್ತಿಗಳಿಂದ ಒಂದು ನಿರ್ಧಿಷ್ಟ ಸಮುದಾಯದ ವ್ಯಾಪಾರಸ್ಥರನ್ನು, ವರ್ತಕರನ್ನು ಸಂತೆ ವಾಣಿಜ್ಯ ಮಳಿಗೆ ನಿರಾಕರಣೆಯ ಮೂಲಕ ಬಹಿಷ್ಕರಿಸಿದರೆ, ಸ್ಥಳೀಯ ಆರ್ಥಿಕ ವ್ಯವಹರಣೆ ಕುಂಠಿತ ವಾಗಬಹುದು ಹೊರತು, ಬಹಿಷ್ಕರಿತ ವರ್ತಕರ ಆದಾಯವಲ್ಲ.
ಪ್ರತಿ ಮನುಷ್ಯನ ದೈನಂದಿನ ಆಹಾರ ನಿಸರ್ಗ ನಿಯಮ, ಅದು ಎಂದಿಗೂ ವ್ಯತ್ಯಾಸ ಆಗದು. ಮುಸ್ಲಿಮ್ ವರ್ತಕರಿಗೆ ಮಳಿಗೆ ನಿರಾಕರಿಸಿದವರು, ಮುಸ್ಲಿಮ್ ಸಮುದಾಯದ ಗ್ರಾಹಕರನ್ನು ಬಹಿಷ್ಕರಿಸದಿರಲಿ. ಹಾಗೆ ಬಹಿಷ್ಕರಿಸಿದರೆ ಅದಕ್ಕೆ ಪ್ರತಿಯಾಗಿ ಬಹಿಷ್ಕರಿಸುವ ಸಮುದಾಯದ ವರ್ತಕ ರಿಂದಲೇ ಪ್ರತುತ್ತರ ಲಭಿಸಲಿದೆ,ಹಾಗೆ ಆಗದಿರಲಿ ಎಂದು ಹಾರೈಸೋಣ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.