ಬೆಳ್ತಂಗಡಿ, ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪುನ್ನು ವಿರೋಧಿಸಿ ಕರ್ನಾಟಕದ ವಿವಿಧಮುಸ್ಲಿಂ ಸಂಘಟನೆ ಕರೆ ನೀಡಿದ ಬಂದ್ ಗೆ ಬೆಳ್ತಂಗಡಿಯ ಹಲವು ಭಾಗಗಳಲ್ಲಿ ಬೆಂಬಲ ವ್ಯಕ್ತವಾಗಿದೆ.ಉಜಿರೆ, ಕಕ್ಕಿಂಜೆ, ನಾವೂರು, ಕಜೂರು, ಗುರುವಾಯನಕೆರೆ, ಮಡಾಂತ್ಯಾರ್,ಶಿರ್ಲಾಲ್, ಅಳದಂಗಡಿ,ಪಿಲ್ಯ,ಸುನ್ನತ್ ಕೆರೆ, ಗೇರು ಕಟ್ಟೆ ಲಾಯಿಲ ಕೊಕ್ಕಡ ಮುಂಡಾಜೆ, ಚಾರ್ಮಾಡಿ, ಬಂಗಾಡಿ ಸೇರಿದಂತೆ ವಿವಿಧ ಕಡೆ ಮುಸ್ಲಿಂ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ಸೂಚಿಸಿದ್ದಾರೆ.