ಕೆಸಿಎಫ್ ಒಮಾನ್ ಸಹಮ್ ಸೆಕ್ಟರ್ ರೂಪೀಕರಣ ವು 11-3-2022 ಶುಕ್ರವಾರ ರಷೀದ್ ನಿವಾಸ ದಿಯಾನ್,ಕಾಬೂರ ದಲ್ಲಿ ಕೆಸಿಎಫ್ ಸೊಹಾರ್ ಝೋನ್ ಅಧ್ಯಕ್ಷ ಅಶ್ರಫ್ ಕುತ್ತಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಜಬ್ಬಾರ್ ಸಖಾಫಿ ಕನ್ಯಾನ ಇವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಮೀಡಿಯಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ ಇವರು ನೂತನ ಸಮಿತಿ ರಚನೆಯನ್ನು ನಡೆಸಿಕೊಟ್ಟರು.
ನೂತನ ಅಧ್ಯಕ್ಷರಾಗಿ ರಷೀದ್ ಕೊಂಡಂಗೇರಿ ಉಪಾಧ್ಯಕ್ಷರಾಗಿ ಜಬ್ಬಾರ್ ಸಖಾಫಿ ಕನ್ಯಾನ ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಮಾಚಾರ್ ಹಾಗೂ ಕೋಶಾಧಿಕಾರಿಯಾಗಿ ಹಕೀಮ್ ಬೆಳ್ಳಾರೆ ಸುಳ್ಯ ರವರು ಆಯ್ಕೆಯಾದರು. ಅಲ್ಲದೇ ಸಾಂತ್ವನ ವಿಭಾಗದ ಕಾರ್ಯದರ್ಶಿ ಯಾಗಿ ಹಕೀಮ್ ಜೋಕಟ್ಟೆ,
ಆಡಳಿತ ವಿಭಾಗದ ಕಾರ್ಯದರ್ಶಿಯಾಗಿ ಜುನೈದ್,
ಶಿಕ್ಷಣ ವಿಭಾಗ ಕಾರ್ಯದರ್ಶಿ ಯಾಗಿ ಉಮ್ಮರ್ ನಯೀಮಿ ಬೊಲ್ಮಾರ್
ಇಹ್ಸಾನ್ ವಿಭಾಗದ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಮಂಡೆಕೋಲು ಸುಳ್ಯ ಹಾಗೂ ಪ್ರಕಾಶನ ವಿಭಾಗದ ಕಾರ್ಯದರ್ಶಿಯಾಗಿ ಸಿರಾಜ್ ಬೊಲ್ಮಾರ್,ಸಂಘಟನಾ ವಿಭಾಗದ ಕಾರ್ಯದರ್ಶಿಯಾಗಿ ಮಜೀದ್ ಕರೋಪಾಡಿ ಹಾಗೂ
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಫೀಕ್ ಕೊಡಗು ಇವರು ಆಯ್ಕೆಯಾದರು.
ಸೆಕ್ಟರ್ ಪ್ರದಾನ ಕಾರ್ಯದರ್ಶಿ ಮುಬೀನ್ ಜೋಕಟ್ಟೆ ಯವರು ಸಭೆಯನ್ನು ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಶರೀಫ್ ಮಾಚಾರ್ ವಂದಿಸಿದರು.
ಇತ್ತೀಚೆಗೆ ನಿಧನರಾದ ಸಯ್ಯದ್ ಹೈದರಾಲಿ ಶಿಹಾಬ್ ತಂಙಳ್, ಕೆಸಿಎಫ್ ಬುರೈಮಿ ಸೆಕ್ಟರ್ ಸದಸ್ಯರಾದ ಇಮ್ತಿಯಾಝ್ ಇವರ ತಾಯಿ ಹಾಜಿರ ಇನೋಳಿ ಹಾಗೂ ಕೆಸಿಎಫ್ ಶಿನಾಸ್ ಸದಸ್ಯರಾದ ಮುತ್ತಲಿಬ್ ಕೊಟೇಪುರ ಇವರ ತಂದೆ ಅಬ್ದುಲ್ ಖಾದರ್ ಕೊಟೇಪುರ ಇವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ಮಾಡಿ ದುಆ ನೆರವೇರಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ