ರಿಯಾದ್: ಸೌದಿ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸುವುದನ್ನು ಮತ್ತೆ ನಿಷೇಧಿಸಲಾಗಿದೆ. ಸೌದಿ ಪಾಸ್ಪೋರ್ಟ್ ನಿರ್ದೇಶನಾಲಯ (ಜವಾಝಾತ್) ಕೋವಿಡ್ನಿಂದಾಗಿ ಸೌದಿ ನಾಗರಿಕರು ಪ್ರಯಾಣಿಸಬಾರದ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಮತ್ತೆ ಸೇರಿಸಿದೆ.
ಕೋವಿಡ್ ಹರಡುವಿಕೆ ಕ್ಷೀಣಿಸಿದ ಮತ್ತು ಬೆದರಿಕೆ ಕಡಿಮೆಯಾದ ಕಾರಣ ಪ್ರಯಾಣ ನಿಷೇಧಿತ ದೇಶಗಳ ಪಟ್ಟಿಯಿಂದ ಭಾರತದ ಹೆಸರನ್ನು ತೆಗೆದುಹಾಕಲಾಗಿತ್ತು ಆದರೆ, ನವೀಕರಿಸಿದ ಪಟ್ಟಿಯಲ್ಲಿ ಭಾರತವನ್ನು ಒಳಪಡಿಸಲಾಗಿದೆ.
ಸೌದಿ ಪ್ರಜೆಗಳು ಭಾರತ ಸೇರಿದಂತೆ, ಲೆಬನಾನ್, ಟರ್ಕಿ, ಯೆಮೆನ್, ಸಿರಿಯಾ, ಇಂಡೋನೇಷ್ಯಾ, ಇರಾನ್, ಅರ್ಮೇನಿಯಾ, ಕಾಂಗೋ, ಲಿಬಿಯಾ, ಬೆಲಾರಸ್, ವಿಯೆಟ್ನಾಂ, ಇಥಿಯೋಪಿಯಾ, ಸೊಮಾಲಿಯಾ, ಅಫ್ಘಾನಿಸ್ತಾನ್ ಮತ್ತು ವೆನೆಜುವೆಲಾಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.
ಈ ಹಿಂದೆ ಪ್ರಯಾಣ ನಿಷೇಧಿಸಲ್ಪಟ್ಟ ದೇಶಗಳ ಜನರಿಗೆ ಸೌದಿ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು. ಇದು ಅನಿವಾಸಿ ಭಾರತೀಯರನ್ನು ಮತ್ತೆ ಆತಂಕಕ್ಕೀಡು ಮಾಡಿದೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ