janadhvani

Kannada Online News Paper

ಮಲ್ಲೂರು ಮದನೀಯಂ ಮಜ್ಲಿಸ್: ಸುನ್ನೀ ಕೋ-ಓರ್ಡಿನೇಶನ್ ಕಮಿಟಿ ಯಶಸ್ವಿಗೆ ಕರೆ

ಮಲ್ಲೂರು : SSF ಮಲ್ಲೂರು ಶಾಖೆಯ ವತಿಯಿಂದ ಫೆಬ್ರವರಿ 6,7 , 8 ,ರಂದು ನಡೆಯಲಿರುವ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಸುನ್ನೀ ಕೋ-ಓರ್ಡಿನೇಶನ್ ಕಮಿಟಿ ಗುರುಪುರ ಕೈಕಂಬ ಇದರ ಅಂಗ ಸಮಿತಿಗಳಾದ SJU, SJM, SMA, SYS, SSF, SBS ಕರೆ ನೀಡಿದೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಪ್ರತ್ಯೇಕವಾಗಿ ಲಕ್ಷಾಂತರ ವಿಶ್ವಾಸಿಗಳ ಪಾಲಿಗೆ ಅಭಯ ಕೇಂದ್ರವಾದ ಮದನೀಯಂ ಮಜ್ಲಿಸ್ ನಡೆಯಲಿದ್ದು ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಿದ್ದಾರೆ.
ಸದ್ರಿ ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಸುನ್ನೀ ಕೋ-ಓರ್ಡಿನೇಶನ್ ಕಮಿಟಿ ಗುರುಪುರ ಕೈಕಂಬ ಇದರ ಪ್ರಧಾನ ಕಾರ್ಯದರ್ಶಿ ಕೆ ಹೆಚ್ ಯು ಶಾಫಿ ಮದನಿ ಕರಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.