janadhvani

Kannada Online News Paper

ದೇಶದ ಉಳಿವು ಸಂವಿಧಾನದ ಸಂರಕ್ಷಣೆಯಿಂದ ಮಾತ್ರ – ಎಸ್ಸೆಸ್ಸೆಫ್

ಚಿಕ್ಕಮಗಳೂರು : ಸಂವಿಧಾನ ಸಂಸ್ಥಾಪನೆಯ 73ನೇ ವರ್ಷಾಚರಣೆ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್‌ವೈಎಸ್ ರಾಜ್ಯ ನಾಯಕ ಯೂಸುಫ್ ಹಾಜಿ ಉಪ್ಪಳ್ಳಿ ಧ್ವಜಾರೋಹಣಗೈದರು.

ಸಂದೇಶ ಭಾಷಣ ಮಾಡಿದ ರಾಜ್ಯ ಕೋಶಾಧಿಕಾರಿ ಹಾಫಿಝ್ ಸುಫ್ಯಾನ್ ಸಖಾಫಿ ಮಾತನಾಡಿ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ ನಮ್ಮದು. ಪ್ರಪಂಚದ ಮುಂದೆ ಭಾರತಕ್ಕೆ ಹೆಮ್ಮೆ ತಂದ ಸಂವಿಧಾನವಿದು. ಹಲವು ವೈವಿಧ್ಯತೆಗಳ ಮಧ್ಯೆ ಭಾರತವನ್ನು ಕಾಪಾಡಿದ್ದು ಸಂವಿಧಾನದ ಏಕತೆಯ ಸಂದೇಶವಾಗಿದೆ. ಆದ್ದರಿಂದಲೇ ಸಂವಿಧಾನದ ಸಂರಕ್ಷಣೆಗಾಗಿ ವಿದ್ಯಾರ್ಥಿಗಳು ಮುಂದೆ ಬರಬೇಕು, ಈ ದೇಶದ ಉಳಿವು ಸಂವಿಧಾನದ ಸಂರಕ್ಷಣೆಯಿಂದ ಮಾತ್ರ ಎಂದು ಹೇಳಿದರು.

ಕೆಲವರ ಸ್ವಾರ್ಥಕ್ಕಾಗಿ ಸಂವಿಧಾನದ ಮೂಲ ತತ್ವಗಳಿಗೆ ಕತ್ತರಿ ಹಾಕದೆ, ದೇಶದ ಭವ್ಯ ಭವಿಷ್ಯಕ್ಕಾಗಿ ಸಂವಿಧಾನದ ಪಾಠವನ್ನು ವಿದ್ಯಾರ್ಥಿಗಳಿಗೆ ಕಲಿಸಿ ಕೊಡುವ ಅಗತ್ಯವಿದೆ‌ ಎಂದು ಸ್ಪಷ್ಟಪಡಿಸಿದರು.
ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕಾರ್ಯದರ್ಶಿಗಳಾದ ಸಫ್ವಾನ್ ಚಿಕ್ಕಮಗಳೂರು, ಶರೀಫ್ ಕೊಡಗು, ಅಬ್ದುಲ್ ಹಕೀಂ ಬೆಂಗಳೂರು, ಮುನೀರ್ ಸಖಾಫಿ ಉಳ್ಳಾಲ, ಎನ್ ಸಿ ರಹೀಂ ಉಡುಪಿ, ಹೊಸ್ಮಾರ್ ಸಅದಿ, ಮುಬಶ್ಶಿರ್ ಅಹ್ಸನಿ, ಇಸ್ಮಾಯಿಲ್ ಸಅದಿ ಮಾಚಾರ್, ಅಶ್ರಫ್ ಸಖಾಫಿ ಹರಿಹರ, ಜುನೈದ್ ಸಖಾಫಿ ಚಿತ್ರದುರ್ಗ, ಯಾಸೀನ್ ಸಖಾಫಿ ಹಾವೇರಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com