janadhvani

Kannada Online News Paper

ಉಜಿರೆ: ರಫೀಕ್ ಮುಗುಳಿಯವರ ಸಮಾಜ ಸೇವೆ- ನಾಲ್ಕು ಬಡ ಹೆಣ್ಣು ಮಕ್ಕಳಿಗೆ ವಿವಾಹ ಭಾಗ್ಯ

ಬೆಳ್ತಂಗಡಿ: ಇಲ್ಲಿನ ಹಳೆಪೇಟೆ, ಉಜಿರೆ ಮುಹ್ಯಿದ್ದೀನ್ ಜುಮ್ಮಾ ಮಸೀದಿ ವಠಾರವು ನಾಲ್ಕು ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ಕೆ ಸಾಕ್ಷಿಯಾಗಲಿದೆ.

ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ, ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿರುವ, ಅಲ್ ಅಮೀನ್ ಅಸೋಸಿಯೇಶನ್ ದಮ್ಮಾಮ್-ಜುಬೈಲ್ ಇದರ ಸಕ್ರಿಯ ಕಾರ್ಯಕರ್ತ ರಫೀಕ್ ಮುಗುಳಿಯವರ ಸಾರಥ್ಯದಲ್ಲಿ ನಾಲ್ಕು ಬಡ ಹೆಣ್ಣು ಮಕ್ಕಳ ಮದುವೆಯು ದಿನಾಂಕ 31/1/22 ಸೋಮವಾರ ಉಜಿರೆ ಕೇಂದ್ರ ಮಸೀದಿ ವಠಾರದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಸಾಮೂಹಿಕ ಮದುವೆ ಸಮಾರಂಭವು ಬೆಳಗ್ಗೆ 9-30 ರಿಂದ ಪ್ರಾರಂಭಗೊಳ್ಳಲಿದೆ.ಎಲ್ಲಾ ಖರಿಯದ ಸದಸ್ಯರು ಯಂಗ್-ಮೆನ್ಸ್ ಸದಸ್ಯರು ಅಲ್ ಅಮೀನ್ ಗಲ್ಫ್ ಸದಸ್ಯರು ಜಮಾಅತಿನಲ್ಲಿ ನಡೆಯುವ ಪ್ರಪ್ರಥಮ ಸಾಮೂಹಿಕ ವಿವಾಹ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಎಂ.ಜೆ.ಎಂ.ಹಳೆಪೇಟೆ ಉಜಿರೆ ಸಮಿತಿಯ ಅಧ್ಯಕ್ಷರು ಮನವಿ ಮಾಡಿದ್ದಾರೆ.

error: Content is protected !! Not allowed copy content from janadhvani.com