ಅಜ್ಮಾನ್: ಯುಎಇಯ ಅಜ್ಮಾನ್ನಿಂದ ಸೌದಿ ಅರೇಬಿಯಾಕ್ಕೆ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಅಜ್ಮಾನ್ನಿಂದ ರಿಯಾದ್, ದಮ್ಮಾಮ್, ಜಿದ್ದಾ ಮತ್ತು ಮಕ್ಕಾಗೆ ಪ್ರತಿದಿನ ಮೂರು ಬಸ್ಸುಗಳು ಪ್ರಯಾಣಿಸಲಿದೆ. 250 ರಿಂದ 600 ದಿರ್ಹಮ್ಗಳವರೆಗೆ ಟಿಕೆಟ್ ದರ ಇರಲಿದೆ.
ಸೌದಿ ಅರೇಬಿಯಾಕ್ಕೆ ಹೋಗುವ ಬಸ್ಸುಗಳು ಅಜ್ಮಾನ್ ಸಾರಿಗೆ ಪ್ರಾಧಿಕಾರದ ಅಲ್ತಲ್ಲಾ ಬಸ್ ನಿಲ್ದಾಣದಿಂದ ಹೊರಡಲಿದೆ. ಸೌದಿ ವೀಸಾ ಹೊಂದಿರುವವರು ಬಸ್ನಲ್ಲಿ ಪ್ರಯಾಣಿಸಬಹುದು. ಯುಎಇ-ಸೌದಿ ಗಡಿಯನ್ನು ತಲುಪಲು ಆರು ಗಂಟೆಗಳ ಪ್ರಯಾಣವಿದೆ. ರಿಯಾದ್ ಮತ್ತು ದಮ್ಮಾಮ್ಗೆ ಪ್ರಯಾಣಿಸಲು 12 ಗಂಟೆಗಳು ಮತ್ತು ಜಿದ್ದಾ ಮತ್ತು ಮಕ್ಕಾಗೆ 24 ಗಂಟೆಗಳ ಪ್ರಯಾಣವಿದೆ.
ಸೌದಿ ಅರೇಬಿಯಾದಿಂದ ಅಜ್ಮಾನ್ಗೆ ಮೂರು Saptco ಬಸ್ಗಳು ಸೇವೆ ಸಲ್ಲಿಸಲಿವೆ. ಕೋವಿಡ್ ನಿಯಂತ್ರಣದಂತೆ, ಒಂದು ಬಸ್ ನಲ್ಲಿ 24 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ಎರಡು ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿರಬೇಕು. ನಿರ್ಗಮಿಸುವ ಮೊದಲು ನಕಾರಾತ್ಮಕ ಪಿಸಿಆರ್ ಪರೀಕ್ಷೆಯನ್ನು ಸಹ ಹೊಂದಿರಬೇಕು.
ಯುಎಇ-ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಸಾಮಾನ್ಯ ವಲಸಿಗರಿಗೆ ಬಸ್ ಸೇವೆಯು ಉತ್ತಮ ವರದಾನವಾಗಲಿದೆ. ಮೊದಲ ಕೆಲವು ದಿನಗಳಲ್ಲಿ ಸೌದಿ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಅಜ್ಮಾನ್ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
DKSC ಮುಡಿಪುವಿನ ಶಿಕ್ಷಣ ಕ್ರಾಂತಿಗೆ ಸಮುದಾಯದ ಸಹಕಾರ ಅಗತ್ಯ- ಝಕರಿಯ್ಯ ಅಲ್ ಮುಝೈನ್
ಕೆಸಿಎಫ್ ಸದಸ್ಯತ್ವ ಅಭಿಯಾನ: ಯಶಸ್ವಿಗೊಳಿಸಲು SSF ಕರ್ನಾಟಕ ರಾಜ್ಯ ಸಮಿತಿ ಕರೆ
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಕ್ಬಾಲ್ ಬಾಳಿಲರಿಗೆ SKSSF ರಾಜ್ಯ ಸಮಿತಿಯಿಂದ ಸನ್ಮಾನ
ಮದೀನಾ ತಲುಪಬೇಕೆಂಬ ತಾಯಿಯ ಕೊನೆಯ ಆಸೆ ಈಡೇರಿತು- ಜನ್ನತುಲ್ ಬಕೀಹ್ನಲ್ಲಿ ಅಂತ್ಯಕ್ರಿಯೆ
ಎಸ್ಐಆರ್ ಪ್ರಕ್ರಿಯೆ ರದ್ದತಿಗೆ ಆಗ್ರಹಿಸಿ ರಾಜ್ಯಾದ್ಯಂತ SKSSF ಬೃಹತ್ ಪ್ರತಿಭಟನೆ
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಅಲಿ ಬಾಫಖಿ ತಂಙಳ್ ವಫಾತ್
ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಬಹರೈನ್: ನೂತನ ಪದಾಧಿಕಾರಿಗಳು